HEALTH TIPS

10,12 ನೇ ತರಗತಿಯ ಕೆಲ ವಿಷಯಗಳ ಪರೀಕ್ಷಾ ವೇಳಾಪಟ್ಟಿ ಪರಿಷ್ಕರಿಸಿದ ಸಿಬಿಎಸ್ ಇ!

     ನವದೆಹಲಿ: ಹತ್ತು ಮತ್ತು ಹನ್ನೇರಡನೆ ತರಗತಿಗಾಗಿ ಗಣಿತ, ವಾಣಿಜ್ಯ ಮತ್ತು ಭೌತಶಾಸ್ತ್ರ ಸೇರಿದಂತೆ ಕೆಲವು ವಿಷಯಗಳ ಬೋರ್ಡ್ ಪರೀಕ್ಷೆಯ ವೇಳಾಪಟ್ಟಿಯನ್ನು ಸಿಬಿಎಸ್‌ಇ ಶುಕ್ರವಾರ ಪರಿಷ್ಕರಿಸಿದೆ. 10ನೇ ತರಗತಿಯ ವಿಜ್ಞಾನ ಪರೀಕ್ಷೆ ಮೇ 21ಕ್ಕೆ ಮುಂದೂಡಲ್ಪಟ್ಟಿದೆ. ಈ ಹಿಂದೆ ಮೇ 15ಕ್ಕೆ ನಿಗದಿಪಡಿಸಲಾಗಿತ್ತು.



     ಮೇ 21ಕ್ಕೆ ನಿಗದಿಯಾಗಿದ್ದ ಗಣಿತ ವಿಷಯದ ಪರೀಕ್ಷೆ ಇದೀಗ ಜೂನ್ 2 ರಂದು ನಡೆಯಲಿದೆ ಎಂದು ಸಿಬಿಎಸ್ ಇ ತಿಳಿಸಿದೆ. ಮೇ 13ಕ್ಕೆ ನಿಗದಿಯಾಗಿದ್ದ 12ನೇ ತರಗತಿಯ ಭೌತಶಾಸ್ತ್ರ ಪರೀಕ್ಷೆ, ಇದೀಗ ಜೂನ್ 8 ರಂದು ನಡೆಯಲಿದೆ.

     ಈ ಮೊದಲು ಜೂನ್ 1 ರಂದು ನಿಗದಿಯಾಗಿದ್ದ ಗಣಿತ ಮತ್ತು ಅನ್ವಯಿಕ ಗಣಿತದ ಪರೀಕ್ಷೆಗಳನ್ನು ಇದೀಗ ಮೇ 31 ರಂದು 12 ನೇ ತರಗತಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿಗೆ ನಡೆಸಲಾಗುವುದು ಎಂದು ಸಿಬಿಎಸ್ ಇ ತಿಳಿಸಿದೆ. ಜೂನ್ 2 ರಂದು ನಿಗದಿಯಾಗಿದ್ದ ಭೂಗೋಳ ಪರೀಕ್ಷೆ, ಇದೀಗ ಜೂನ್ 3 ರಂದು ನಡೆಯಲಿದೆ.

     ಹತ್ತು ಮತ್ತು 12ನೇ ತರಗತಿಯ ಪರೀಕ್ಷೆಗಳು ಮೇ 4 ರಂದು ಆರಂಭವಾಗಲಿದ್ದು, ಜೂನ್ 10 ರಂದು ಮುಕ್ತಾಯಗೊಳ್ಳಲಿವೆ.
     ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆದು, ಫೆಬ್ರವರಿಯಲ್ಲಿ ಲಿಖಿತ ಪರೀಕ್ಷೆ ಆರಂಭವಾಗಿ ಮಾರ್ಚ್ ತಿಂಗಳಲ್ಲಿ ಮುಕ್ತಾಯವಾಗುತ್ತಿದ್ದವು. ಆದಾಗ್ಯೂ, ಕೋವಿಡ್ -19 ಸಾಂಕ್ರಾಮಿಕದ ಕಾರಣ ಪರೀಕ್ಷೆ ವಿಳಂಬವಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries