HEALTH TIPS

105 ವರ್ಷದ ಕಥಕ್ಕಳಿ ಮಾಂತ್ರಿಕ ಚೆಮಂಚೇರಿ ಕುನ್ಹಿರಾಮನ್ ನಾಯರ್ ನಿಧನ

      ಕೋಝಿಕ್ಕೋಡು: ಕಥಕ್ಕಳಿ ಮಾಂತ್ರಿಕ ಚೆಮಂಚೇರಿ ಕುನ್ಹಿರಾಮನ್ ನಾಯರ್ ಸೋಮವಾರ ನಸುಕಿನ ಜಾವ  ಕೋಝಿಕ್ಕೋಡು ಜಿಲ್ಲೆಯಲ್ಲಿರುವ ಕೊಯಿಲಾಂಡಿ ಸಮೀಪ ಚೆಲಿಯಾ ಎಂಬಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 105 ವರ್ಷ ವಯಸ್ಸಾಗಿತ್ತು.

      90 ವರ್ಷದವರೆಗೂ ಕಥಕ್ಕಳಿ ನೃತ್ಯ ಮಾಡುತ್ತಿದ್ದ ಅವರ ಕೃಷ್ಣ ಮತ್ತು ಕುಚೇಲ ಪಾತ್ರಗಳು ಬಹಳ ಪ್ರಖ್ಯಾತವಾಗಿದ್ದವು. ತಮ್ಮ 100ನೇ ವಯಸ್ಸಿನಲ್ಲಿ ಅವರು ಕೋಝಿಕ್ಕೋಡು ಟೌನ್ ಹಾಲ್ ನಲ್ಲಿ ಗುರು ಪರಶುರಾಮ ಪಾತ್ರವನ್ನು ನೃತ್ಯ ಮಾಡಿ ಸಾರ್ವಜನಿಕರ ಮುಂದೆ ಪ್ರದರ್ಶಿಸಿದ್ದರು. ಅದುವೇ ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಿತ್ತು.

     ಕೇವಲ ನಾಲ್ಕನೇ ತರಗತಿಯವರೆಗೆ ಮಾತ್ರ ಔಪಚಾರಿಕ ಶಿಕ್ಷಣ ಗಳಿಸಿದ್ದ ಚೆಮಂಚೇರಿ ಕುನ್ಹಿರಾಮನ್ ನಾಯರ್, ಎಳವೆಯಲ್ಲಿಯೇ ಕಥಕ್ಕಳಿ ಕಲಿಯಬೇಕೆಂಬ ತುಡಿತದಿಂದ ಮನೆ ಬಿಟ್ಟು ಓಡಿಹೋಗಿದ್ದರಂತೆ. ಇತರರ ಸಹಾಯದಿಂದ ಕೇರಳದಲ್ಲಿ 1944ರಲ್ಲಿ ಕಣ್ಣೂರಿನಲ್ಲಿ ಭಾರತೀಯ ನೃತ್ಯ ಕಲಾಲಯಂ ಎಂಬ ಸಾಂಪ್ರದಾಯಿಕ ನೃತ್ಯ ಕಲಿಕೆ ಶಾಲೆಯನ್ನು ಆರಂಭಿಸಿದ್ದರು.

     ನಟ ವಿನೀತ್ ಅವರ ಹಲವು ಮಂದಿ ಶಿಷ್ಯರಲ್ಲಿ ಒಬ್ಬರು. ನಂತರ ಕುನ್ಹಿರಾಮನ್ ತಮ್ಮ ಹುಟ್ಟೂರು ಚೆಲಿಯಾದಲ್ಲಿ ಕಥಕ್ಕಳಿ ವಿದ್ಯಾಲಯವನ್ನು ಆರಂಭಿಸಿದರು. 2017ರಲ್ಲಿ ಕೇಂದ್ರ ಸರ್ಕಾರದ ಪದ್ಮಶ್ರೀ ಗೌರವ ಸೇರಿದಂತೆ ಹತ್ತು ಹಲವು ಸನ್ಮಾನ, ಪ್ರಶಸ್ತಿ, ಗೌರವಗಳು ಅವರಿಗೆ ಲಭಿಸಿತ್ತು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries