HEALTH TIPS

ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ: ಆಗಸ್ಟ್ 1ರಂದು ನೀಟ್ ಪರೀಕ್ಷೆ

         ನವದೆಹಲಿ: ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಬಿಎಸ್ ಎಂಎಸ್, ಬಿಎಂಎಸ್, ಬಿಎಚ್ ಎಂಎಸ್ ಸೇರಿದಂತೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ 2021ನೇ ಸಾಲಿನ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ(ನೀಟ್) ಪರೀಕ್ಷೆ ಬರುವ, ಆಗಸ್ಟ್ 1ರಂದು ದೇಶಾದ್ಯಂತ 11 ಭಾಷೆಗಳಲ್ಲಿ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್ ಟಿಎ) ಶುಕ್ರವಾರ ಪ್ರಕಟಿಸಿದೆ.

       ಪರೀಕ್ಷೆ ಕುರಿತು ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, 'ನೀಟ್(ಯುಜಿ) 2021ನ್ನು ಪೆನ್ ಮತ್ತು ಪೇಪರ್ ಮೋಡ್ ಮೂಲಕ ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ 11 ಭಾಷೆಗಳಲ್ಲಿ ನಡೆಯಲಿದೆ.

ಆನ್ಲೈನ್ʼನಲ್ಲಿ ಪರೀಕ್ಷೆ ನಡೆಸಲು ಸರ್ಕಾರ ಚಿಂತನೆ ನಡೆಸಿತ್ತಾದರೂ ಈ ವರ್ಷ ಪೆನ್ ಮತ್ತು ಪೇಪರ್ ಮೋಡ್ʼನಲ್ಲಿ ಮುಂದುವರಿಯಲು ನಿರ್ಧರಿಸಿದೆ.

      ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಬಿಎಸ್ ಎಂಎಸ್, ಬಿಎಂಎಸ್, ಬಿಎಚ್ ಎಂಎಸ್ ಸೇರಿದಂತೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ʼಗಳ ಪ್ರವೇಶಕ್ಕಾಗಿ ನೀಟ್ ಯುಜಿ ನಡೆಸಲಾಗುತ್ತದೆ ಎಂದು ಎನ್ ಟಿಎ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries