ತಿರುವನಂತಪುರ: ರಾಜ್ಯದಲ್ಲಿ ಶಾಲೆಗಳ ಸಮೀಪ 50 ಮೀಟರ್ ದೂರದ ಒಳಗಡೆ ಪೆಟ್ರೋಲ್ ಪಂಪ್ ಗಳ ಚಟುವಟಿಕೆಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಸಮಿತಿ ನಿಷೇಧ ಹೇರಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ದೃಷ್ಟಿಯಲ್ಲಿರಿಸಿ ಈ ಆದೇಶ ಹೊಡಿಸಲಾಗಿದೆ.
ಪೆಟ್ರೋಲ್ ಪಂಪ್ ಗಳಿಗೆ ಅನುಮತಿ ನೀಡುವ ಮೊದಲು ಸ್ಥಳೀಯಾಡಳಿತ ಸಂಸ್ಥೆಗಳು ಶಾಲೆಗಳಿಂದ 50 ಮೀಟರ್ ಅಂತರದಲ್ಲಿ ಪಂಪ್ ಕಾರ್ಯವೆಸಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ ಅನುಮತಿ ನೀಡುವ ಕ್ರಮ ಜಾರಿಗೊಳ್ಳುವುದೆಂದು ಆಯೋಗದ ಸದಸ್ಯ ನಸೀರ್ ಆದೇಶದಲ್ಲಿ ತಿಳಿಸಿದ್ದಾರೆ. ಇದರ ವಿರುದ್ದವಾಗಿ ಅತಿ ತುರ್ತು ಸಂದಭಧಗಳಲಲಿ ಪೆಟ್ರೋಲ್ ಪಂಪ್ ನಿರ್ಮಿಸಲು ಅನುಮತಿ ನೀಡಬೇಕಾದ ಸ್ಥಿತಿ ಎದುರಾದರೂ 30 ಮೀಟರ್ ಅಂತರದಲ್ಲಿ ಕಡ್ಡಾಯವಾಗಿ ನಿರ್ಮಾಣ ನಡೆಸಲು ಅನುಮತಿ ನೀಡಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯ ಮಲಿನೀಕರಣ ನಿಯಂತ್ರಣ ಬೋರ್ಡ್ ಹೊರಡಡಿಸಿರುವ ಆದೇಶದ ಪ್ರಕಾರ ಶಾಲೆ ಹಾಗೂ ಆಸ್ಪತ್ರೆಗಳ 50 ಮೀಟರ್ ದೂರದಲ್ಲಿ ಪೆಟ್ರೋಲ್ ಪಂಪ್ ಕಾರ್ಯವೆಸಗಲು ಅನುಮತಿಸಲಾಗುವುದಿಲ್ಲ. ಯಾವುದಾದರೂ ತುರ್ತು ಸಂದರ್ಭಗಳಿದ್ದರೆ 50 ಮೀಟರ್ ದೂರದಲ್ಲಿ ನಿರ್ಮಿಸಲು ಅನುಮತಿಸಬಹುದಾದರೂ ಸುರಕ್ಷಾ ಮಾನದಂಡಗಳನ್ನು ಪ್ರತ್ಯೇಕವಾಗಿ ಪಾಲಿಸಬಹುದಾಗಿದೆ.
ಹಾಗೆಂದು ಅಲ್ಲೂ 30 ಮೀಟರ್ ಗಳಿಗಿಂತ ಒಳಗೆ ನಿರ್ಮಾಣ ಸಾಧ್ಯವಿಲ್ಲ. ರಾಷ್ಟ್ರೀಯ ಹರಿತ ಟ್ರಿಬ್ಯೂನಲ್ ನ ಆದೇಶದ ಭಾಗವಾಗಿ ರಾಜ್ಯ ಮಲಿನೀಕರಣ ನಿಯಂತ್ರಣ ಬೋರ್ಡ್ ಆದೇಶ ಹೊರಡಿಸಿದೆ.


