HEALTH TIPS

ನಂಗೆ ಬೇಕು. ನಂಗೆ ಬೇಕು. ಮುಗಿಬಿದ್ದು ಮದ್ಯದಂಗಡಿ ಹರಾಜಿಗೆ ಬಂದ ಜನ- 510 ಕೋಟಿ ರೂ.ಗೆ ಸೇಲ್​!

          ಹನುಮಾನ್‌ಗಢ (ರಾಜಸ್ಥಾನ): ವಸ್ತುಗಳನ್ನು, ಅಂಗಡಿಗಳನ್ನು ಹರಾಜು ಮಾಡುವುದು ದೊಡ್ಡ ವಿಷಯವೇನಲ್ಲ. ಕೆಲವೊಮ್ಮೆ ಅಚ್ಚರಿ ಎನ್ನುವಂಥ ದರದಲ್ಲಿ ಅವುಗಳು ಹರಾಜು ಆಗುವುದೂ ಇದೆ. ಅದರಲ್ಲಿಯೂ ದೇವರ ಸನ್ನಿಧಿಯಲ್ಲಿ ಇಟ್ಟಿರುವ ವಸ್ತುಗಳು 2-3 ಪಟ್ಟೆ ಹೆಚ್ಚಿಗೆ ಹಣಕ್ಕೆ ಹರಾಜಾಗುವುದು ಹೊಸ ವಿಷಯವೆನಲ್ಲ.


       ಆದರೆ ಅಚ್ಚರಿಯೆಂದರೆ, ಇಲ್ಲೊಂದು ಮದ್ಯದಂಗಡಿ ಮಾಲೀಕರೇ ಶಾಕ್​ ಆಗುವಷ್ಟು ಹೆಚ್ಚುವರಿ ದರದಲ್ಲಿ ಹರಾಜು ಆಗಿದೆ.

      ಅಂಥದ್ದೊಂದು ಅಚ್ಚರಿ ನಡೆದಿರುವುದು ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ನೋಹಾರ್​ ಎಂಬ ಗ್ರಾಮದ ಮದ್ಯದ ಅಂಗಡಿಯೊಂದು 510 ಕೋಟಿ ರೂ. ಗೆ ಹರಾಜಾಗಿದೆ ಎಂದರೆ ನಂಬುವಿರಾ? ನಂಬಲೇಬೇಕು. ಅಷ್ಟೇ ಏಕೆ? ಇದರ ಹರಾಜು ಆಗುತ್ತಿದೆ ಎಂದು ತಿಳಿದಾಗ ನಸುಕಿನಿಂದಲೇ ಬಿಡ್​ ಶುರುವಾಗಿ ಮುಗಿದದ್ದು ಮಾರನೆಯ ದಿನವಂತೆ!

       ಈ ಅಂಗಡಿಯ ಮೂಲ ಬೆಲೆ 72 ಲಕ್ಷ ರೂಪಾಯಿ ಇದ್ದು, 510 ಕೋಟಿ ರೂಪಾಯಿಗೆ ಮಾರಾಟವಾಗಿದೆ.

     ಅಷ್ಟಕ್ಕೂ ಅದೇನಪ್ಪ ಇದರ ವಿಶೇಷತೆ ಎಂದರೆ ಎಲ್ಲರೂ ಹೇಳುತ್ತಾರೆ ಏನೂ ಇಲ್ಲ. ಆದರೆ ಈ ಗ್ರಾಮದಲ್ಲಿ ಇರುವ ಅತ್ಯಂತ ಫೇಮಸ್​ ಮದ್ಯದಂಗಡಿ ಇದು. ಇಲ್ಲಿ ಎಲ್ಲಾ ವೆರೈಟಿಯ ಮದ್ಯಗಳು ಸಿಗುತ್ತವೆ ಎನ್ನುವುದು ಅವರ ಮಾತು.

       ಬೆಳಗ್ಗೆ 72 ಲಕ್ಷ ರೂ.ಗಳಿಂದ ಪ್ರಾರಂಭವಾದ ಬಿಡ್ಡಿಂಗ್ ಮುಂದುವರಿಯುತ್ತಲೇ ಇತ್ತು. ಬಿಡ್‌ದಾರರು ಆ ಲಿಕ್ಕರ್‌ ಶಾಪ್‌ಗೆ ಹೆಚ್ಚು ಬೆಲೆಯನ್ನು ಉಲ್ಲೇಖಿಸುತ್ತಲೇ ಇದ್ದರು. ಇಡೀ ದಿನ ಮುಂದುವರಿದ ಬಿಡ್ಡಿಂಗ್, ಮಧ್ಯರಾತ್ರಿಯೂ ನಡೆದು ಮುಂಜಾನೆ 2 ಗಂಟೆಗೆ ಅಂತ್ಯಗೊಂಡಿದೆ.

ರಾಜಸ್ಥಾನದಲ್ಲಿ ಮದ್ಯದಂಗಡಿಗಳ ಹರಾಜು ಹೊಸ ಪರಿಕಲ್ಪನೆಯಲ್ಲ. ಇತ್ತೀಚೆಗೆ, ರಾಜ್ಯದಲ್ಲಿ ಇ-ಹರಾಜನ್ನು ಪುನಾರಂಭಿಸಲಾಗಿದೆ. ಅಂತಹ 7,000 ಕ್ಕೂ ಹೆಚ್ಚು ಅಂಗಡಿಗಳನ್ನು ಇದೇ ರೀತಿ ಹರಾಜು ಹಾಕಲಾಗುತ್ತದೆ. ವಸುಂಧರಾ ರಾಜೆ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ವ್ಯವಸ್ಥೆಯನ್ನು ರದ್ದುಗೊಳಿಸಿದ್ದರು. ನಂತರ ಅಶೋಕ್‌ ಗೆಹ್ಲೋಟ್‌ ಮುಖ್ಯಮಂತ್ರಿಯಾದ ನಂತರ ಬಿಡ್ಡಿಂಗ್ ಪುನಃ ಪ್ರಾರಂಭವಾಗಿದೆ. ಕಿರಣ್ ಕನ್ವರ್ ಎನ್ನುವವರು 510 ಕೋಟಿ ಕೊಟ್ಟು ಖರೀದಿ ಮಾಡಿದ್ದಾರೆ.
        ಇದಕ್ಕೆ ಮಾಲೀಕರು ಮಾತ್ರವಲ್ಲದೇ ಅಬಕಾರಿ ಇಲಾಖೆಯ ಅಧಿಕಾರಿಗಳೇ ಅಚ್ಚರಿಪಟ್ಟರಂತೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries