HEALTH TIPS

ಮಾರ್ಚ್ 6: 'ಮೊಬೈಲ್ ಬಳಕೆಯ ಒಳಿತು-ಕೆಡುಕು' ಕುರಿತು ಇಜ್ಞಾನ - ಕೆಎಸ್‌ಟಿಎ ವಿಚಾರ ಸಂಕಿರಣ

          ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆ, ಅದರಲ್ಲೂ ವಿಶೇಷವಾಗಿ ಮೊಬೈಲ್ ಬಳಕೆಯ ಒಳಿತು-ಕೆಡುಕುಗಳ ಕುರಿತಾದ ವಿಚಾರ ಸಂಕಿರಣವನ್ನು ಇದೇ ಮಾರ್ಚ್ 6ರ ಶನಿವಾರದಂದು ಮೈಸೂರಿನಲ್ಲಿ 


ಆಯೋಜಿಸಲಾಗಿದೆ. ಇಜ್ಞಾನ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮ ಕುವೆಂಪುನಗರದ ಸುರುಚಿ ರಂಗಮನೆಯಲ್ಲಿ ಆ ದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸಹಯೋಗ ಹಾಗೂ ಅರ್ಥಿಕ ನೆರವಿನೊಂದಿಗೆ ನಡೆಸಲಾಗುತ್ತಿದೆ.


         ಇಂದಿನ ಅಗತ್ಯಗಳಲ್ಲೊಂದಾಗಿ ಬೆಳೆದಿರುವ ಮೊಬೈಲ್ ಬಳಕೆಯ ಒಳಿತು-ಕೆಡುಕುಗಳ ಕುರಿತು ವಿವಿಧ ಸಂಪನ್ಮೂಲ ವ್ಯಕ್ತಿಗಳು ವಿಚಾರಮಂಡನೆ ಮಾಡಲಿದ್ದಾರೆ. ಜನಸಾಮಾನ್ಯರು, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು-ಶಿಕ್ಷಕರು ಮೊಬೈಲ್ ಫೋನನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಇರುವ ಹಲವು ಅವಕಾಶಗಳ ಪರಿಚಯವನ್ನು ಈ ಸಂದರ್ಭದಲ್ಲಿ ಮಾಡಿಕೊಡಲಾಗುವುದು.

ಇಜ್ಞಾನ ಟ್ರಸ್ಟ್ ಪ್ರಕಟಿಸಿರುವ, ಟಿ. ಜಿ. ಶ್ರೀನಿಧಿ ರಚಿಸಿರುವ 'ಸ್ವಿಚ್ ಆಫ್' ಕೃತಿಯ ಲೋಕಾರ್ಪಣೆ ಕೂಡ ಇದೇ ಸಂದರ್ಭದಲ್ಲಿ ನಡೆಯಲಿದೆ. ಮೊಬೈಲ್ ಫೋನ್ ಅತಿಬಳಕೆ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಉಂಟಾಗಬಹುದಾದ ಪರಿಣಾಮ, ಆ ಪರಿಣಾಮಗಳಿಂದ ಪಾರಾಗಲು ಬಳಸಬಹುದಾದ ಉಪಾಯಗಳ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ.

        ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಸ್. ಅಯ್ಯಪ್ಪನ್, ಹಿರಿಯ ವಿಜ್ಞಾನ ಸಂವಹನಕಾರ ಶ್ರೀ ಕೊಳ್ಳೇಗಾಲ ಶರ್ಮ, ತಂತ್ರಜ್ಞ ಶ್ರೀ ಶಶಿಧರ ಡೋಂಗ್ರೆ, ಅಂಕಣಕಾರ ಶ್ರೀ ಎನ್. ರವಿಶಂಕರ್, ಎಸ್‌ವಿವೈಎಂನ ಶ್ರೀ ಪ್ರವೀಣ್ ಕುಮಾರ್ ಎಸ್., ವೈದ್ಯ-ಲೇಖಕ ಡಾ. ವಿ. ಎಸ್. ಕಿರಣ್ ಹಾಗೂ ಇಜ್ಞಾನ ಟ್ರಸ್ಟ್‌ನ ಶ್ರೀ ಟಿ. ಜಿ. ಶ್ರೀನಿಧಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

         ಮೊಬೈಲ್ ಬಳಕೆಯ ಒಳಿತು-ಕೆಡುಕುಗಳ ಕುರಿತಾದ ವಿಚಾರ ಸಂಕಿರಣವನ್ನು ಇದೇ ಮಾರ್ಚ್ 6ರ ಶನಿವಾರದಂದು ಮೈಸೂರಿನಲ್ಲಿ ಆಯೋಜಿಸಲಾಗಿದೆ
Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries