HEALTH TIPS

ನಿಯಮ ಪಾಲಿಸದ ಪ್ರಯಾಣಿಕರನ್ನು ಕೆಳಗಿಳಿಸಿದ ಏರ್ ಏಷಿಯಾ; ಮಾಸ್ಕ್ ಸರಿಯಾಗಿ ಧರಿಸದ 6 ಪ್ರಯಾಣಿಕರು ಭದ್ರತಾ ಪಡೆ ವಶಕ್ಕೆ

          ನವದೆಹಲಿ: ಕರೊನಾ ಮುನ್ನೆಚ್ಚರಿಕೆ ಬಗ್ಗೆ ಭಾರತದ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಜಾರಿಮಾಡಿರುವ ಹೊಸ ನಿರ್ದೇಶನಗಳನ್ನು ವಿಮಾನ ಆಪರೇಟರ್​ಗಳು ಗಂಭೀರವಾಗಿ ಸ್ವೀಕರಿಸಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಕಳೆದ ಕೆಲವು ದಿನಗಳಲ್ಲಿ ಏರ್​ಏಷಿಯಾ ಇಂಡಿಯಾ ಕಂಪೆನಿ ತನ್ನ ಇಬ್ಬರು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ್ದರೆ, ಇಂಡಿಗೋ ಏರ್​ಲೈನ್ಸ್ ಮತ್ತು ಅಲೈಯನ್ಸ್ ಏರ್​ ಕಂಪೆನಿ ಆರು ಪ್ರಯಾಣಿಕರನ್ನು ವಿಮಾನ ನಿಲ್ದಾಣದ ಭದ್ರತಾ ಪಡೆ ವಶಕ್ಕೆ ಒಪ್ಪಿಸಿವೆ.


         'ವಿಮಾನ ಪ್ರಯಾಣಿಕರು ಏರ್​ಪೋರ್ಟ್ ಪ್ರವೇಶಿಸಿದಾಗಿನಿಂದ ಹಿಡಿದು ಪ್ರಯಾಣದ ಪೂರ್ಣ ವೇಳೆ ಮಾಸ್ಕ್​ ಸರಿಯಾಗಿ ಧರಿಸಿರಬೇಕು, ಮತ್ತು ಸಾಮಾಜಿಕ ಅಂತರ ಮುಂತಾದ ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಇದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ವಿಮಾನ ಕರ್ಮಚಾರಿಗಳು ಸೂಕ್ತ ಎಚ್ಚರಿಕೆ ನೀಡಬೇಕು. ಆ ನಂತರವೂ ನಿಯಮ ಉಲ್ಲಂಘಿಸಿದಲ್ಲಿ ಅಂಥ ಯಾತ್ರಿಕರನ್ನು ವಿಮಾನದಿಂದ ಕೆಳಗಿಳಿಸಬೇಕು ಅಥವಾ ನಂತರ ಸೆಕ್ಯುರಿಟಿ ಅಧಿಕಾರಿಗಳಿಗೆ ಒಪ್ಪಿಸಬೇಕು' ಎಂದು ಡಿಜಿಸಿಎ ಮಾರ್ಚ್ 13 ರಂದು ಆದೇಶ ಹೊರಡಿಸಿತ್ತು.

           ಈ ಆದೇಶವನ್ನು ಬಹುತೇಕ ಏರ್​ಲೈನ್​ ಆಪರೇಟರ್​​ಗಳು ಪಾಲಿಸಲು ಆರಂಭಿಸಿದ್ದಾರೆ. ಇಂಡಿಗೋದ ದೆಹಲಿ-ಗೋವಾ ವಿಮಾನದಲ್ಲಿ ಸೋಮವಾರ ಪ್ರಯಾಣಿಸುತ್ತಿದ್ದ ಮಿಡಲ್ ಸೀಟ್ ಪ್ಯಾಸೆಂಜರ್​ ಒಬ್ಬರು ಪಿಪಿಇ ಗೌನ್ ಧರಿಸಲು ಗಲಾಟೆ ಮಾಡಿ, ಪದೇ ಪದೇ ತಮ್ಮ ಮಾಸ್ಕ್ ತೆಗೆಯುತ್ತಿದ್ದರು ಎನ್ನಲಾಗಿದೆ. ಈ ಮಹಿಳಾ ಪ್ರಯಾಣಿಕರನ್ನು ವಿಮಾನ ಸಿಬ್ಬಂದಿಯು ಗೋವಾದಲ್ಲಿ ವಿಮಾನ ಲ್ಯಾಂಡ್​ ಆದಾಗ ಭದ್ರತಾ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬುಧವಾರ ದೆಹಲಿಯಿಂದ ಹೈದರಾಬಾದ್​ಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಪದೇ ಪದೇ ಎಚ್ಚರಿಕೆ ನೀಡಿದರೂ ಮಾಸ್ಕ್ ಹಾಕಿಕೊಳ್ಳಲು ನಿರಾಕರಿಸಿದ ಪುರುಷ ಪ್ರಯಾಣಿಕರೊಬ್ಬರನ್ನು ಹೈದರಾಬಾದ್ ವಿಮಾನ ನಿಲ್ದಾಣದ ಸುರಕ್ಷತಾ ಸಿಬ್ಬಂದಿಯ ವಶಕ್ಕೆ ನೀಡಲಾಗಿದೆ.

         ಮತ್ತೊಂದೆಡೆ, ಏರ್​ಏಷಿಯಾ ತನ್ನ ಇಬ್ಬರು ಪ್ರಯಾಣಿಕರನ್ನು ಕರೊನಾ ನಿಯಮ ಪಾಲಿಸಲು ನಿರಾಕರಿಸಿದ್ದಕ್ಕಾಗಿ ವಿಮಾನ ಹೊರಡುವ ಮುಂಚೆ ಕೆಳಗಿಳಿಸಿರುವ ಪ್ರಕರಣ ವರದಿಯಾಗಿದೆ. ಪಿಪಿಇ ಗೌನ್​ಗಳನ್ನು ಧರಿಸಲು ಒಪ್ಪದೆ ಹಠ ಹಿಡಿದ ಇಬ್ಬರು ಮಿಡಲ್ ಸೀಟ್ ಪ್ಯಾಸೆಂಜರ್​ಗಳನ್ನು ತನ್ನ ಗೋವಾ-ಮುಂಬೈ ವಿಮಾನದಿಂದ ಹೊರಗೆ ಕಳುಹಿಸಿ ಸೆಕ್ಯುರಿಟಿ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ.

         ಮಂಗಳವಾರ ಅಲೈಯನ್ಸ್​ ಏರ್​ನ ಜಮ್ಮು-ಕಾಶ್ಮೀರ ವಿಮಾನದಲ್ಲಿ ಸಿಬ್ಬಂದಿಯ ಎಚ್ಚರಿಕೆಯ ನಂತರವೂ ಪ್ರಯಾಣದ ವೇಳೆ ಸರಿಯಾಗಿ ಮಾಸ್ಕ್ ಹಾಕಿಕೊಳ್ಳದ ನಾಲ್ಕು ಪ್ರಯಾಣಿಕರನ್ನು ಸೆಕ್ಯುರಿಟಿ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ. ಈ ರೀತಿ ಹಲವು ಏರ್​ಲೈನ್​ ಆಪರೇಟರ್​ಗಳು ಕರೊನಾ ನಿಯಮಗಳನ್ನು ಉಲ್ಲಂಘಿಸುವ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries