HEALTH TIPS

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಮುಂದಿನ ವರ್ಷಕ್ಕೆ '75': ಪ್ರಧಾನಿ ಮೋದಿ ನೇತೃತ್ವದಲ್ಲಿ ಗಣ್ಯರು, ಕಲಾವಿದರನ್ನೊಳಗೊಂಡ ಸಮಿತಿ

        ನವದೆಹಲಿ: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಮುಂದಿನ ವರ್ಷ 2022ಕ್ಕೆ 75 ವರ್ಷವಾಗುತ್ತಿದೆ. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಅವಿಸ್ಮರಣೀಯವಾಗಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಸಮಿತಿಯೊಂದನ್ನು ರಚಿಸಿದ್ದು ಅದರಲ್ಲಿ ಕೇಂದ್ರ ಸಚಿವರು, ಮುಖ್ಯ ಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಖ್ಯಾತ ಕಲಾವಿದರು ಸೇರಿ 259 ಸದಸ್ಯರಿದ್ದಾರೆ.

       ಸಮಿತಿಯಲ್ಲಿ ಕೇಂದ್ರ ಸಚಿವರುಗಳಾದ ಅಮಿತ್ ಶಾ, ರಾಜನಾಥ್ ಸಿಂಗ್, ರವಿಶಂಕರ್ ಪ್ರಸಾದ್, ಎಸ್ ಜೈಶಂಕರ್ ಮತ್ತು ಪ್ರಕಾಶ್ ಜಾವಡೇಕರ್ ಸೇರಿದಂತೆ ಹಲವಾರು ಕೇಂದ್ರ ಸಚಿವರು. ಇದರಲ್ಲಿ ಮಾಜಿ ಅಧ್ಯಕ್ಷ ಪ್ರತಿಭಾ ಪಾಟೀಲ್, ಸಿಜೆಐ ಎಸ್ ಎ ಬೊಬ್ಡೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮಾಜಿ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ಮತ್ತು ಎಚ್ ಡಿ ದೇವೇಗೌಡ, ಮುಖ್ಯಮಂತ್ರಿಗಳು, ರಾಜ್ಯಪಾಲರು ಮತ್ತು ಪ್ರತಿಪಕ್ಷ ನಾಯಕರಾದ ಸೋನಿಯಾ ಗಾಂಧಿ ಮತ್ತು ಸೀತಾರಾಮ್ ಯೆಚೂರಿ ಕೂಡ ಸೇರಿದ್ದಾರೆ. ಅರ್ಥಶಾಸ್ತ್ರಜ್ಞ ಅಮತ್ರ್ಯ ಸೇನ್ ಕೂಡ ಭಾಗವಾಗಿದ್ದಾರೆ.

        ಸಮಿತಿಯಲ್ಲಿರುವ ಪ್ರಮುಖ ಗಣ್ಯರೆಂದರೆ, ಕಲಾವಿದರಾದ ಲತಾ ಮಂಗೇಶ್ಕರ್, ಅಮಿತಾಬ್ ಬಚನ್, ರಜನಿಕಾಂತ್, ಎ.ಆರ್. ರಹಮಾನ್, ಅನುಪಮ್ ಖೇರ್, ಹೇಮಾ ಮಾಲಿನಿ, ಪೆÇ್ರಸೆನ್ಜಿತ್ ಚಟರ್ಜಿ, ಕ್ರೀಡಾಪಟುಗಳಾದ ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ, ಪಿ.ಟಿ.ಉಷಾ, ಮೇರಿ ಕೋಮ್, ಆಧ್ಯಾತ್ಮಿಕ ನಾಯಕರು, ಚಲನಚಿತ್ರ ನಿರ್ದೇಶಕರು, ಮತ್ತು ರತನ್ ಟಾಟಾ, ನಂದನ್ ನಿಲೇಕಣಿ ಮೊದಲಾದವರಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries