ಕಣ್ಣೂರು: ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರು ಶೀಘ್ರದಲ್ಲೇ ಕೋವಿಡ್ ಲಸಿಕೆ ತೆಗೆದುಕೊಳ್ಳಲಿದ್ದಾರೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ. ಲಸಿಕೆ ತೆಗೆದುಕೊಳ್ಳಲು ಸಿಎಂ ನಿರ್ಧರಿಸಿದ್ದಾರೆ. ಅವರಿಗೆ ಶೀಘ್ರ ಲಸಿಕೆ ನೀಡಲಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವತಃ ಲಸಿಕೆ ಸ್ವೀಕರಿಸಿದ ಬಗ್ಗೆ ತುಂಬಾ ಸಂತೋಷವಾಗಿದೆ ಎಂದು ಸಚಿವೆ ಹೇಳಿದರು.
ಲಸಿಕೆ ನೀಡಲು ರಾಜ್ಯ ಸಿದ್ಧವಾಗಿದೆ ಮತ್ತು ಹೆಚ್ಚಿನ ಕೇಂದ್ರಗಳನ್ನು ಸಜ್ಜುಗೊಳಿಸಲಾಗುತ್ತದೆ ಎಂದು ಆರೋಗ್ಯ ಸಚಿವೆ ಹೇಳಿದರು. ವ್ಯಾಕ್ಸಿನೇಷನ್ ಪ್ರಕ್ರಿಯೆಯಲ್ಲಿ ಖಾಸಗಿ ವಲಯವನ್ನೂ ಬಳಸಲಾಗುವುದು ಎಂದರು. ಜನ ಪ್ರತಿನಿಧಿಗಳು ಲಸಿಕೆಯನ್ನು ಆರೋಗ್ಯ ಕಾರ್ಯಕರ್ತರೊಂದಿಗೆ ತೆಗೆದುಕೊಳ್ಳಬಾರದು. ಸರದಿಯ ಪ್ರಕಾರ ಮಾತ್ರ ಲಸಿಕೆ ಪಡೆಯಬೇಕು ಎಂದು ಪ್ರಧಾನಿ ಸಭೆಯಲ್ಲಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಲಸಿಕೆ ಸ್ವೀಕರಿಸಲಿಲ್ಲ ಎಂದು ಸಚಿವೆ ಮಾಹಿತಿ ನೀಡಿದರು.
ಆರೋಗ್ಯ ಸಚಿವೆಯಾಗಿ ಎಲ್ಲರಿಗೂ ಮೊದಲು ಲಸಿಕೆ ಸ್ವೀಕರಿಸಲು ತಯಾರಾಗಿದ್ದೆ. ಆದರೆ ನಿಯಮಾನುಸಾರ ಸರದಿಗೆ ಕಾಯುತ್ತಿರುವೆ ಎಂದು ಸಚಿವೆ ತಿಳಿಸಿದರು.





