ಕಾಸರಗೋಡು: ಕಾಸರಗೋಡು ಜಿಲ್ಲೆಯ ಶಿಕ್ಷಣಾಲಯಗಳಿಗೆ 2021-22 ಶೈಕ್ಷಣಿಕ ವರ್ಷಕ್ಕಿರುವ ಪಠ್ಯಪುಸ್ತಕಗಳ ವಿತರಣೆ ಕುಟುಂಬಶ್ರೀಯ ನೇತೃತ್ವದಲ್ಲಿ ಆರಂಭಗೊಂಡಿದೆ.
ಚೆರ್ಕಳ ಪ್ರಾಥಮಿಕ ಶಾಲೆಯಲ್ಲಿ ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ. ಸುರೇಂದ್ರನ್ ಅವರು ಚೆರ್ಕಳ ಸೊಸೈಟಿಗೆ ಪಠ್ಯಪುಸ್ತಕ ವಿತರಣೆ ನಡೆಸುವ ಮೂಲಕ ಉದ್ಘಾಟಿಸಿದರು. ಎ.ಡಿ.ಎಂ.ಸಿ. ಹರಿದಾಸ್ ಡಿ., ಶಾಲೆ ಮುಖ್ಯಶಿಕ್ಷಕ, ಡಿ.ಡಿ. ಕಚೇರಿ ಪ್ರತಿನಿಧಿಗಳು, ಹಬ್ ವರ್ಕರ್ಸ್, ಜಿಲ್ಲಾ ಮಿಷನ್ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.
ಈ ಶೈಕ್ಷಣಿಕ ವರ್ಷ ಪಠ್ಯಪುಸ್ತಕಗಳ ವಿತರಣೆಯ ಹೊಣೆ ಕುಟುಂಬಶ್ರೀಗೆ ನೀಡಲಾಗಿದೆ. ಮಾರ್ಚ್ ತಿಂಗಳ ಕೊನೆಯ ವೇಳ:ಎಗೆ ಮೊದಲ ಹಂತದ ಪಠ್ಯಪುಸ್ತಕಗಳ ವಿತರಣೆ ಪೂರ್ಣಗೊಳ್ಳುವ ಗುರಿಯಿರಿಸಲಾಗಿದೆ. ಕೇರಳ ಬುಕ್ಸ್ ಆಂಡ್ ಪಬ್ಲಿಕೇಷನ್ ಸೊಸೈಟಿ ಯಿಂದ ಡಿಪೆÇೀಗೆ ವಿತರಣೆಗೊಳ್ಳುವ ಪುಸ್ತಕಗಳನ್ನು ವಿಂಗಡಿಸಿ, ವಾಹನಗಳ ಮೂಲಕ ಪುಸ್ತಕಗಳ ವಿತರಣೆ ನಡೆಸುವ ಚಟುವಟಿಕೆಗಳನ್ನು ಕುಟುಂಬಶ್ರೀ ನಡೆಸಲಿದೆ.






