ತಿರುವನಂತಪುರ: ಕಾಂಗ್ರೆಸ್ ಹಿರಿಯ ನಾಯಕರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ವಿ.ಎಂ.ಸುಧೀರನ್, ಮುಲ್ಲಪ್ಪಳ್ಳಿ ರಾಮಚಂದ್ರನ್ ಮತ್ತು ಪಿ.ಜೆ.ಕುರಿಯನ್ ಸ್ಪರ್ಧಿಸುವುದಿಲ್ಲ ಎಂದು ಆಯ್ಕೆ ಸಮಿತಿಗೆ ಮಾಹಿತಿ ನೀಡಿರುವರು. ಹೊಸಬರಿಗೆ ಅವಕಾಶ ನೀಡಲು ಅವರು ಬಯಸಿದ್ದರಿಂದ ಅವರು ಕಣದಿಂದ ಹಿಂದೆ ಸರಿದಿರುವರೆಂದು ಪ್ರತಿಕ್ರಿಯೆ ನೀಡಿರುವರು.
ನಾಯಕತ್ವದ ತೀವ್ರ ಒತ್ತಡದ ನಡುವೆಯೂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸುಧೀರನ್ ದೃಢ ನಿರ್ಧಾರ ಪ್ರಕಟಿಸಿದ್ದಾರೆ. ನಾಯಕತ್ವವು ವಿ.ಎಂ. ಸುಧೀರನ್ ಅವರನ್ನು ವಟ್ಟಿಯೂರ್ಕಾವ್ ಅಥವಾ ಕೋಝಿಕೋಡ್ ನಿಂದ ಕಣಣಕ್ಕಿಳಿಸಲು ಬಯಸಿದೆ ಎನ್ನಲಾಗಿದೆ. ಆದರೆ ಸುಧೀರನ್ ಅವರು ಕಣದಲ್ಲಿಲ್ಲ ಎಂದು ತಿಳಿಸಿರುವರು.
ಈ ಹಿಂದೆ ತಿರುವಲ್ಲಾ ಸ್ಥಾನದಿಂದ ಸ್ಪರ್ಧಿಸಲು ಆಸಕ್ತಿ ವ್ಯಕ್ತಪಡಿಸಿದ್ದ ಪಿಜೆ ಕುರಿಯನ್ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿನ್ನೆ ನಿರ್ಧರಿಸಿದರು. ವಿಎಂ ಸುಧೀರನ್ ಅವರು ಐದು ಸ್ಪರ್ಧಿಗಳನ್ನು ಕಣಕ್ಕಿಳಿಸುವಂತೆ ಸಮಿತಿಯನ್ನು ಕೇಳಿದರು. ಪಿಸಿ ಚಾಕೊ ಕೂಡ 20 ವರ್ಷದ ಬಳಿಕ ಇದೀಗ ಸ್ಪರ್ಧಿಸದಿರುವ ನಿರ್ಧಾರ ಪ್ರಕಟಿಸಿದ್ದಾರೆ.





