ಮುಂಬೈ:ಕ್ರೀಡಾ ತಾರೆಗಳ ಅನೇಕ ಜೀವನಚರಿತ್ರೆಗಳು ಬಾಲಿವುಡ್‍ನಲ್ಲಿ ಬಿಡುಗಡೆಯಾಗಿವೆ. ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ, ಅಥ್ಲೀಟ್ ಬಾಗ್ ಮಿಲ್ಕಾ ಬಾಗ್ ಮತ್ತು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಚಿತ್ರಗಳು ತೆರೆಕಂಡಿವೆ. ಸಚಿನ್ ಅವರ ಜೀವನಚರಿತ್ರೆಯ ಚಿತ್ರದಲ್ಲಿ ಸ್ವತಃ ಅವರೇ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತದ ಅತ್ಯುತ್ತಮ ಕ್ರೀಡಾ ತಾರೆಗಳಲ್ಲಿ ಒಬ್ಬರಾದ ಪಿ.ಟಿ.ಉಷಾ ಅವರ ಜೀವನವನ್ನು ಸಹ ಚಲನಚಿತ್ರವನ್ನಾಗಿ ಮಾಡಲಾಗುತ್ತಿದೆ.
ಚಿತ್ರವನ್ನು ರೇವತಿ ವರ್ಮಾ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಏಕಕಾಲದಲ್ಲಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಚಿತ್ರೀಕರಿಸಲಾಗುವುದು ಎಂದು ವರದಿಯಾಗಿದೆ. ಕೋವಿಡ್ ಕಾರಣದಿಂದ ನಿಲ್ಲಿಸಲ್ಪಟ್ಟ ಇದರ ಚಿತ್ರೀಕರಣ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ ಎಂದು ಪಿಟಿ ಉಷಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ಕತ್ರಿನಾ ಕೈಫ್ ಅವರು ಒಲಿಂಪಿಯನ್ ಉಷಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ವದಂತಿ ದಟ್ಟವಾಗಿದೆ. ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಚಿತ್ರ ನಿರ್ಮಿಸಿರುವ ರೇವತಿ ಅವರು ಉಷಾ ಚಿತ್ರದ ಚಿತ್ರಕಥೆ ಮಾಡುತ್ತಿದ್ದಾರೆ.





