ಆರ್‌ಎಸ್‌ಎಸ್ ನಿಂದ ಲಭ್ಯವಾದುದಾಗಿದೆ ಎಂದವರು ತಿಳಿಸಿದ್ದಾರೆ.
ತನ್ನ ಅಧಿಕೃತ ಉದ್ಯೋಗದೊಂದಿಗೆ ರಾಜಕೀಯವನ್ನು ಬೆರೆಸಲು ಆಸಕ್ತಿ ಇಲ್ಲದ ಕಾರಣ ಈವರೆಗೂ ತಟಸ್ಥ ನಿಲುವನ್ನು ತೆಗೆದುಕೊಳ್ಳುತ್ತಿದ್ದೆ ಎಂದು ಶ್ರೀಧರನ್ ಹೇಳಿದರು.
ಆರ್‌ಎಸ್‌ಎಸ್ ಮುಖವಣಿ ಕೇಸರಿ ಪ್ರಕಟಿಸಿದ ಸಂದರ್ಶನದಲ್ಲಿ ಇ ಶ್ರೀಧರನ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಪಾಲಕ್ಕಾಡ್ ನ ಶಾಲಾ ಶಿಕ್ಷಣದ ಸಮಯದಲ್ಲಿ ಸಂಘದೊಂದಿಗೆ ನಿಕಟ ಸಂಬಂಧ ಹೊಂದಿದ್ದೆ. ಇದು ಎರಡನೇ ತರಗತಿಯಿಂದ ತೊಡಗಿ ಹತ್ತನೇ ತರಗತಿಯವರೆಗೂ ಮತ್ತು ವಿಕ್ಟೋರಿಯಾ ಕಾಲೇಜಿನಲ್ಲಿ ಮಧ್ಯಂತರ ಅವಧಿಯಲ್ಲಿ ಮುಂದುವರೆಯಿತು. ಆ ಸಮಯದಲ್ಲಿ ಪ್ರಚಾರಕ್ ಆಗಿದ್ದ ನೀಲಂಬೂರ್ ಕೋವಿಲಕಂನ ಟಿ.ಎನ್.ಭರತನ್ ಮತ್ತು ರಾ. ವೇಣುಗೋಪಾಲ್ ಅವರು ತರಬೇತಿ ನೀಡಿದ್ದರು.
ನನ್ನಲ್ಲಿರುವ ಎಲ್ಲ ಮೌಲ್ಯಗಳಿಗೆ ಆರ್‌ಎಸ್‌ಎಸ್ ಆಧಾರವಾಗಿದೆ. ಮೋಹನ್ ಭಾಗವತ್ ಅವರು ಕೇರಳಕ್ಕೆ ಬಂದಾಗ, ಈ ಬಗ್ಗೆಯೂ ಅವರಿಗೆ ತಿಳಿಸಿದ್ದೆ ಎಂದು ಶ್ರೀಧರನ್ ಸಂದರ್ಶನದಲ್ಲಿ ಹೇಳುತ್ತಾರೆ.
ರಾಷ್ಟ್ರೀಯ ಭದ್ರತೆಯ ನಾಲ್ಕನೇ ಆಧಾರಸ್ತಂಭ ಆರ್‌ಎಸ್‌ಎಸ್ ಆಗಿದೆ ಎಂದ ನ್ಯಾಯಮೂರ್ತಿ ಕೆ.ಟಿ.ಥಾಮಸ್ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ದೇಶದ ನೈತಿಕ ಮೌಲ್ಯಗಳನ್ನು ಎಲ್ಲರಿಗೂ ತಿಳಿಸುವ ಗುರಿ ಅದು ಹೊಂದಿದೆ.
ಅದಕ್ಕಾಗಿ ಬಿಜೆಪಿಗೆ ಸೇರ್ಪಡೆಗೊಂಡೆ.

