HEALTH TIPS

ಸವಿಹೃದಯದ ಕವಿಮಿತ್ರರಿಂದ ರಂಗಭೂಮಿ ದಿನಾಚರಣೆ-ಕವಿಗೋಷ್ಠಿ

        ಪೆರ್ಲ: ಸಮಗ್ರ ಕನ್ನಡ ಭಾಷೆ, ಸಂಸ್ಕøತಿಯ ಸಾಹಿತ್ತಿಕ ಮೌಲ್ಯಗಳ ಮಹತ್ವವನ್ನು ಯುವ ತಲೆಮಾರಿಗೆ ದಾಟಿಸುವ ಪ್ರಕ್ರಿಯೆಗಳಿಗೆ ತಿಂಗಳ ಕಾರ್ಯಕ್ರಮಗಳು ಬೆಂಬಲ ನೀಡುತ್ತದೆ. ಯಕ್ಷಗಾನ ಕಲಾ ಪ್ರಕಾರದ ಸಾಹಿತ್ತಿಕ ಅರ್ಥವ್ಯಾಪ್ತಿಯ ಅಧ್ಯಯನ-ಅವಲೋಕನ ಗಂಭೀರ ಚಿಂತನೆಗಳೊಂದಿಗೆ ನಡೆಯಬೇಕು ಎಂದು ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಪ್ರಾಚಾರ್ಯ ಸಬ್ಬಣಕೋಡಿ ರಾಮ ಭಟ್ ಅವರು ತಿಳಿಸಿದರು.

        ಸಾಹಿತ್ತಿಕ, ಸಾಂಸ್ಕøತಿಕ ಸಂಘಟನೆಯಾದ ಸವಿ ಹೃದಯದ ಕವಿಮಿತ್ರರು ವೇದಿಕೆ ಪೆರ್ಲ ಇದರ ಆಶ್ರಯದಲ್ಲಿ ಪೆರ್ಲದ ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಲ್ಲಿ ಭಾನುವಾರ ಅಪರಾಹ್ನ ಆಯೋಜಿಸಲಾಗಿದ್ದ ರಂಗಭೂಮಿ ದಿನಾಚರಣೆ-ಕವಿಗೋಷ್ಠಿ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. 


      ಯಕ್ಷಗಾನ ಪ್ರಸಂಗ ಸಾಹಿತ್ಯದ ಬಗ್ಗೆ ಕಲಾವಿದರು ಅರಿವನ್ನು ವಿಸ್ತರಿಸಿದಷ್ಟು ಅವರ ರಂಗ ಸಾಕ್ಷಾತ್ಕಾರ ಇನ್ನಷ್ಟು ಹೊಳಪುಪಡೆಯುತ್ತದೆ. ಭಾಷೆಯ ಸಮಗ್ರ ಚೌಕಟ್ಟನ್ನು ಪೋಣಿಸಿ ಅಂದಗಾಣಿಸುವಲ್ಲಿ ಸಾಹಿತ್ಯದ ಪಾತ್ರ ಮಹತ್ತರವಾದುದು. ಭಾಷಾ ಫ್ರೌಢಿಮೆ, ಅಭಿಮಾನ ಮತ್ತು ಒಗ್ಗಟ್ಟಿನ ಪೂರಕ ಶಕ್ತಿಯಾಗಿ ಸಾಹಿತ್ಯ ಸಂಘಟನೆಗಳು ಕಾರ್ಯನಿರ್ವಹಿಸುವುದು ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ ಎಂದು ಅವರು ತಿಳಿಸಿದರು. 

      ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉಪನ್ಯಾಸಕ, ಸಾಹಿತಿ ಬಾಲಕೃಷ್ಣ ಬೇರಿಕೆ ಅವರು ಮಾತನಾಡಿ ಗದ್ಯವನ್ನು ಪದ್ಯ ಸಾಹಿತ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ. ಭಾಷೆಯ ಎಲ್ಲಾ ಆಯಾಮಗಳ ಅಧ್ಯಯನದಿಂದ ಅಕ್ಷರಗಳನ್ನು ಒಂದು ಚೌಕಟ್ಟಿನಡಿ ಕಡೆದು ನಿಲ್ಲಿಸುವ ಕಲೆ ಪ್ರಾಪ್ತಿಯಾದಾಗ ಕವಿತ್ವ ಸಿದ್ದಿಸುತ್ತದೆ ಎಂದು ತಿಳಿಸಿದರು. 

       ಶಿಕ್ಷಕಿ, ಸಾಹಿತಿ ಜ್ಯೋಸ್ನ್ಸಾ ಎಂ.ಕಡಂದೇಲು ಅವರು ಯಕ್ಷಗಾನ ಮತ್ತು ಸಾಹಿತ್ಯ ಎಂಬ ವಿಷಯದ ಬಗ್ಗೆ ಮಾತನಾಡಿ, ಯಕ್ಷಗಾನದ ಪ್ರಸಂಗ ಸಾಹಿತ್ಯ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸ್ಥಾನ ಪಡೆಯುವ ಎಲ್ಲಾ ಅರ್ಹತೆ ಪಡೆದಿದೆ ಎಂದು ತಿಳಿಸಿದರು. 

      ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಪ್ಪಿನಂಗಡಿಯ ಸತ್ಯಶಾಂತಾ ಪ್ರತಿಷ್ಠಾನದ ಸಂಸ್ಥಾಪಕಿ ಶಾಂತಾ ರವಿ ಕುಂಟಿನಿ ಅವರು ಮಾತನಾಡಿ, ಗಡಿನಾಡು ಕಾಸರಗೋಡಿನ ಕನ್ನಡ-ತುಳು ಭಾಷೆಗಳ ಅಸ್ಮಿತೆಯನ್ನು ಕಾಪಿಡುವಲ್ಲಿ ಯುವ ತಲೆಮಾರಿನ ಉತ್ಸಾಹದ ಸಾಹಿತ್ತಿಕ ಕಾರ್ಯಚಟುವಟಿಕೆಗಳಿಗೆ ಮಹತ್ವವಿದೆ. ಸಾಹಿತ್ಯ ಪ್ರೇಮ ಭಾಷೆ, ಸಂಸ್ಕøತಿಯನ್ನು ಮಾತ್ರವಲ್ಲದೆ ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಗೂ ಕಾರಣವಾಗುತ್ತದೆ. ಮನಸ್ಸಿನ ಋಣಾತ್ಮಕತೆಯಿಂದ ಹೊರಬಂದು ಸಮೃದ್ದಿಯ ಧನಾತ್ಮಕತೆಗೆ ಮುನ್ನಡೆಯಲು ಸಾಹಿತ್ಯ ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.


       ಪುತ್ತಿಗೆ-ಎಣ್ಮಕಜೆ ಸೇವಾ ಸಹಕಾರಿ ಬ್ಯಾಂಕ್ ಉದ್ಯೋಗಿ ಬಾಲಕೃಷ್ಣ ನಾಯ್ಕ್ ಏಳ್ಕಾನ, ಸವಿಹೃದಯದ ಕವಿಮಿತ್ರರು ವೇದಿಕೆ ಸಂಚಾಲಕ ಸುಭಾಶ್ ಪೆರ್ಲ ಉಪಸ್ಥಿತರಿದ್ದರು. ಬಳಿಕ ಕವಿಗೋಷ್ಠಿ ನಡೆಯಿತು. ಹರೀಶ್ ಪೆರ್ಲ, ನಾರಾಯಣ ನಾಯ್ಕ್ ಕುದ್ಕುಳಿ, ಸುಂದರ ಬಾರಡ್ಕ, ಸೃಷ್ಟಿ ಶೆಟ್ಟಿ ಕಾಟುಕುಕ್ಕೆ, ಪೃಥ್ವಿ ಶೆಟ್ಟಿ ಕಾಟುಕುಕ್ಕೆ, ವಿಜಯ ಕಾನ, ಆನಂದ ರೈ ಅಡ್ಕಸ್ಥಳ, ಚಿತ್ತರಂಜನ್ ಕಡಂದೇಲು, ಸನ್ನಿಧಿ ಶೆಟ್ಟಿ, ವನಜಾಕ್ಷಿ ಚೆಂಬ್ರಕಾನ, ಉಷಾದೇವಿ, ಭವ್ಯಶ್ರೀ, ನವನೀತ ಅವರು ಸ್ವರಚಿತ ಕವಿತೆಗಳನ್ನು ವಾಚಿಸಿಸದರು. ಶ್ರೀಪ್ರಿಯಾ ಕೆ.ಎಸ್ ಹಾಗೂ ಶ್ರೀವರ್ಣ ಕವಿತೆಗಳನ್ನು ಹಾಡಿದರು. ಆನಂದ ರೈ ಅಡ್ಕಸ್ಥಳ ಸ್ವಾಗತಿಸಿ, ಸುಭಾಶ್ ಪೆರ್ಲ ವಂದಿಸಿದರು. ಪುರುಷೋತ್ತಮ ಭಟ್ ಕೆ ಕಾರ್ಯಕ್ರಮ ನಿರೂಪಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries