HEALTH TIPS

ಭವಿಷ್ಯದಲ್ಲಿ ಮಗಳಲ್ಲಿಗೆ ಹೋದಷ್ಟೇ ಸುಲಭವಾದೀತು, ಮಂಗಳನಲ್ಲಿಗೂ!-ಮಂಗಳನ ಅಂಗಳದಲ್ಲಿ ಸಂಚರಿಸಿದ ಪರ್ಸವರೆನ್ಸ್!!

               ವಾಶಿಂಗ್ಟನ್ : ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಂಗಳಗ್ರಹಕ್ಕೆ ಕಳುಹಿಸಿರುವ ಬಾಹ್ಯಾಕಾಶ ನೌಕೆ ಪರ್ಸವರೆನ್ಸ್ ಮಾರ್ಚ್ 4ರಂದು ಮಂಗಳನ ನೆಲದಲ್ಲಿ ಮೊದಲ ಬಾರಿಗೆ ಸಂಚರಿಸಿದ್ದು, ಸುಮಾರು 6.5 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಕ್ರಮಿಸಿತು.

       ಪರ್ಸವರೆನ್ಸ್ ಮಂಗಳನ ನೆಲದಲ್ಲಿ ತನ್ನ ಸಂಚಾರವನ್ನು ಆರಂಭಿಸಿದ ಸ್ಥಳಕ್ಕೆ '' ಆಕ್ಟೇವಿಯಾ ಇ. ಬಟ್ಲರ್ ಲ್ಯಾಂಡಿಂಗ್' ಎಂದು ಹೆಸರಿಡಲಾಗಿದೆ. ಅಕ್ಟೇವಿಯಾ ಇ. ಬಟ್ಲರ್ ಅವರು ಆಂಗ್ಲ ವೈಜ್ಞಾನಿಕ ಕಾದಂಬರಿಗಳ ಲೇಖಕರಾಗಿ ಜನಪ್ರಿಯರಾಗಿದ್ದರು.

         ಪರ್ಸವರೆನ್ಸ್ ರೋವರ್ ನೌಕೆಯು ತನ್ನ ವೈಜ್ಞಾನಿಕ ಗುರಿಗಳನ್ನು ಕಾರ್ಯಗತಗೊಳಿಸುವುದನ್ನು ಆರಂಭಿಸಿದ ಬಳಿಕ ಅದರ ಸಂಚಾರದ ವ್ಯಾಪ್ತಿಯನ್ನು 200 ಮೀಟರ್ ಅಥವಾ ಅದಕ್ಕಿಂತಲೂ ಅಧಿಕದೂರದವರೆಗೂ ವಿಸ್ತರಿಸಲಾಗುವುದು ಎಂದು ನಾಸಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಆರು ಚಕ್ರಗಳ ರೋವರ್ ನೌಕೆಯು ಮಂಗಳನ ನೆಲದಲ್ಲಿ ಅತ್ಯುತ್ತಮವಾಗಿ ತನ್ನ ಸಂಚಾರವನ್ನು ನಿರ್ವಹಿಸಿದೆ ಎಂದು ಅದು ಹೇಳಿದೆ. ಪರ್ಸವರೆನ್ಸ್ ರೋವರ್ ನೌಕೆಯು 33 ನಿಮಿಷಗಳ ಕಾಲದ ಸಂಚರಿಸಿದ್ದು, 3 ಮೀಟರ್‌ವರೆಗೆ ಮುಂದಡಿಯಿಟ್ಟಿತು. ಆನಂತರ ಅದು ಎಡಕ್ಕೆ 150 ಡಿಗ್ರಿಗಳಷ್ಟು ತಿರುಗಿತು ಹಾಗೂ 2.4 ಮೀಟರ್‌ಗಳಷ್ಟು ಹಿಂದಕ್ಕೆ ಸರಿದು ತಾತ್ಕಾಲಿಕ ನಿಲುಗಡೆ ತಾಣವೊಂದರಲ್ಲಿ ನಿಂತುಕೊಂಡಿತು ಎಂದು ನಾಸಾ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries