HEALTH TIPS

ವಿಶ್ವ ಜಲ ದಿನ ಮತ್ತು ನಮ್ಮ ಸಂಕಲ್ಪ

 ನೀರಿನ ಅಗತ್ಯತೆ ಮತ್ತು ಅದರ ಸಂರಕ್ಷಣೆ ಕುರಿತು ಜನತೆಯಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ಮಾರ್ಚ್ 22 ರಂದು ಪ್ರತಿವರ್ಷ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತಿದೆ.


 ದಿನಾಚರಣೆಯ ಈ ವರ್ಷದ ಘೋಷವಾಕ್ಯ: Valuing Water-21 ನೇ ಶತಮಾನದಲ್ಲಿ ನಾವು ಎದುರಿಸುವ ನೀರಿನ ಸವಾಲುಗಳಿಗೆ ಪ್ರಕೃತಿ ಆಧಾರಿತ ಪರಿಹಾರಗಳ ಅನ್ವೇಷಣೆ ಮತ್ತು ಮೌಲ್ಯೀಕರಣ ಎಂಬುದಾಗಿದೆ.



ಜೀವವೈವಿಧ್ಯ ವ್ಯವಸ್ಥೆಗೆ ಧಕ್ಕೆಯುಂಟುಮಾಡಿದರೆ ಮಾನವನ ಬಳಕೆಗೆ ಉಪಯೋಗವಾಗುವ ನೀರಿನ ಗುಣಮಟ್ಟ ಮತ್ತು ಪ್ರಮಾಣಕ್ಕೆ ಹಾನಿಯುಂಟಾಗುತ್ತದೆ. ಇಂದು ವಿಶ್ವದಲ್ಲಿ 2.1 ಶತಕೋಟಿ ಜನರಿಗೆ ಕುಡಿಯಲು ಸುರಕ್ಷಿತ ನೀರು ಸಿಗುತ್ತಿಲ್ಲ. ಇದರಿಂದ ಆರೋಗ್ಯಜೀವನ ಮತ್ತು ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ.

ನೀರು ಜೀವಸಂಕುಲ ಬೆಳವಣಿಗೆಯಲ್ಲಿ ಅತಿ ಅಗತ್ಯ. ಮನುಷ್ಯನ ಬಾಯಾರಿಕೆ ಮತ್ತು ಆರೋಗ್ಯವನ್ನು ರಕ್ಷಿಸುವುದಲ್ಲದೆ ಅದಕ್ಕಿಂತಲೂ ಹೆಚ್ಚಿನ ಮಹತ್ವ ನೀರಿಗಿದೆ. ನಾವು ಪ್ರವಾಹಬರಗಾಲ ಮತ್ತು ನೀರಿನ ಮಾಲಿನ್ಯವನ್ನು ಹೇಗೆ ಕಡಿಮೆ ಮಾಡಬಹುದುಎಂದು ವಿಶ್ವಸಂಸ್ಥೆ ಕೇಳಿದೆ. ಇದಕ್ಕೆ ಪ್ರಕೃತಿಯಲ್ಲಿ ಪರಿಹಾರವಿದೆ ಎನ್ನುತ್ತದೆ ವಿಶ್ವಸಂಸ್ಥೆ.


2005-2015 Water for Life ಎಂಬ ಘೋಷವಾಕ್ಯದಡಿಯಲ್ಲಿ ನೀರಿನ ಸಂರಕ್ಷಣೆಗಾಗಿ ಅಂತರಾಷ್ಟ್ರೀಯ ದಶಕವನ್ನಾಗಿ ಆಚರಿಸಲಾಯಿತು

ವಿಶ್ವ ಜಲ ದಿನವನ್ನು ಮೊದಲ ಬಾರಿಗೆ ಆಚರಣೆಯನ್ನು  1993ರ ಮಾರ್ಚ್ 22ರಂದು ಆರಂಭಿಸಲಾಯಿತು.

ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವಜಲದಿನವನ್ನು ಆಚರಿಸಲಾಗುತ್ತದೆ. ಅಂದು ಸಿಹಿ ನೀರಿನ ಪ್ರಾಮುಖ್ಯದ ಮೇಲೆ ಗಮನ ಕೇಂದ್ರೀಕರಿಸುವುದಕ್ಕಾಗಿ ಮತ್ತು ಸಿಹಿ ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ಆಚರಿಸಲಾಗುತ್ತದೆ. 1992ರಲ್ಲಿ ರಿಯೊ ಡಿ ಜನೈರೋದಲ್ಲಿ ನಡೆದ ವಿಶ್ವ ಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿಯ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಸಿಹಿ ನೀರಿನ ದಿನವನ್ನು ಆಚರಿಸಲು ಶಿಫಾರಸು ಮಾಡಲಾಯಿತು. ಅದೇ ವರ್ಷ ಡಿ. 22ರಂದು ವಿಶ್ವಸಂಸ್ಥೆ ಸಂಸತ್ತಿನಲ್ಲಿ ಈ ನಿರ್ಣಯವನ್ನು ಸ್ವೀಕರಿಸಿ 1993ಮಾರ್ಚ್‌ 22ರಂದು ಮೊದಲ ವಿಶ್ವ ಜಲ ದಿನವೆಂದು ಘೋಷಿಸಲಾಯಿತು.

ನೀರಿದ್ದರೆ ಮಾತ್ರವೇ ನಮ್ಮೆಲ್ಲರ ಉಳಿವು. ನೀರಿಲ್ಲವಾದರೆ ನಮ್ಮೆಲ್ಲರ ಶಾಶ್ವತ ಅಳಿವು ಶತಸಿದ್ಧ ಎಂಬುದನ್ನು ಎಲ್ಲರೂ ನೆನಪಿಡಿ. ಅಮೃತ ಸಮಾನವಾದ ನೀರನ್ನು ನಾವು ಮಾತ್ರವಲ್ಲದೆನಮ್ಮ ಮುಂದಿನ ಜನಾಂಗಕ್ಕೂ ಕೂಡ ಜತನದಿಂದ ಉಳಿಸೋಣ. ನೀರಿಗಾಗಿ ಪ್ರಪಂಚದ ಮೂರನೆ ಮಹಾಯುದ್ಧವಾಗುವುದು ಖಂಡಿತ ಬೇಡವೇ ಬೇಡ. ಹೌದಲ್ಲವೇ?

ನೀರಿನ ಆಹಾಕಾರವನ್ನು ಮತ್ತು ನಮ್ಮ ಮುಂದಿನ ದಿನಗಳನ್ನು ಪ್ರತಿಬಿಂಬಿಸುವ ಚಿತ್ರ

ಹಾಗಾಗಿ ಭವಿಷ್ಯದ ಕರಾಳ ದಿನಗಳನ್ನು ಊಹಿಸಿಕೊಂಡುಈಗ ಅಲ್ಪಸ್ವಲ್ಪ ಉಳಿದಿರುವ ಶುದ್ಧ ಜಲಮೂಲಗಳ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ನಮ್ಮೆಲ್ಲರ ಮಹತ್ವದ ಹೊಣೆಗಾರಿಕೆಯಾಗಿದೆ.  ಶುದ್ಧ ನೀರು ಈ ಭೂಮಿಯಲ್ಲಿ ವಾಸಿಸುವಜೀವಿಸುವ ಪ್ರತಿಯೊಬ್ಬರ ಮಾನವ ಹಕ್ಕು!!  ಅಷ್ಟೇ ಅಲ್ಲ... ಮಾನವ ಹಕ್ಕು ಅಂತ ಅಂದರೆ ನಾವು ಮನುಷ್ಯರು ತುಂಬಾ ಸ್ವಾರ್ಥಿಗಳೆನ್ನಿಸಿಕೊಂಡು  ಬಿಡುತ್ತೇವೆ!!  ಶುದ್ಧ ನೀರು ಎಲ್ಲಾ ಜೀವಿಗಳ ಹಕ್ಕು... ಅಂದರೆ ಮಾತು ಬಾರದ ಮೂಕ ಪಶು ಪಕ್ಷಿ  ಪ್ರಾಣಿಗಳಿಂದ ಹಿಡಿದು ಗಿಡಮರ ಬಳ್ಳಿಗಳ ವರೆಗೆ ಎಲ್ಲರಿಗೂ ಸಮಾನವಾದ ಹಕ್ಕು ಈ ಭೂಮಿಯ ಜಲ ಮೂಲಗಳ ಮೇಲಿದೆ!!  ಹಾಗಾಗಿ ನಾವು ಮನುಷ್ಯರು ಮಾತ್ರವಲ್ಲಈ ಭೂಮಿಯ ಮೇಲಿರುವ ಸಮಸ್ತ ಜೀವರಾಶಿಯೂ ಶುದ್ಧ ನೀರಿನ ಮೇಲೆ ಹಕ್ಕು ಹೊಂದಿದೆ..!! ಮುಂದಿನ ದಿನಗಳಲ್ಲಿ ಜಲಕ್ಷಾಮ ಬರದಿರುವಂತೆ ತಡೆಯುವ ಪ್ರಯತ್ನದ ಜೊತೆಗೆ ಈ ಭೂಮಿ ಮೇಲಿನ ಸಕಲ ಜೀವರಾಶಿಗೂ ಕೂಡಾ ಅವುಗಳ ಹಕ್ಕಿನ ನೀರಿನ ಪಾಲು ಸಿಗುವಂತೆ ನೋಡಿಕೊಳ್ಳೋಣಯಾರೂ ಕೂಡಾ ತಮ್ಮ ಹಕ್ಕಿನ ನೀರನ್ನು ಪಡೆಯುವಲ್ಲಿ ವಂಚಿತರಾಗದಿರುವಂತೆ ನೋಡಿಕೊಳ್ಳೋಣ..!!  ಎಲ್ಲರನ್ನು ನಮ್ಮೊಂದಿಗೆ ಕರೆದೊಯ್ಯೋಣ...! ಯಾರೂ ಕೂಡಾ ಹಿಂದುಳಿಯದಂತೆ ನೋಡಿಕೊಳ್ಳೋಣ...!! ಜೀವಜಲವನ್ನು ಎಲ್ಲರೂ ಸಮಾನವಾಗಿ ಹಂಚಿಕೊಂಡು ಉಪಯೋಗಿಸೋಣ....!! ಎಲ್ಲರಿಗೂ ಸಾಕಷ್ಟು ನೀರು ಲಭ್ಯವಾಗುವಂತೆ ಮಾಡಲು ನದೀಮೂಲಗಳಿಂದಾರಂಭಿಸಿ ಎಲ್ಲಾ ರೀತಿಯ ಜಲಮೂಲಗಳನ್ನು ರಕ್ಷಿಸೋಣ...!! ಸಂರಕ್ಷಿಸೋಣ...!! ಉಳಿಸೋಣ ....!!  ಬೆಳೆಸೋಣ...!! ಅಭಿವೃದ್ಧಿಪಡಿಸೋಣ...!! ಅವುಗಳನ್ನು ಸುಸ್ಥಿರವಾಗಿಸೋಣ...!!

ಬೇಸಿಗೆಯ ಬಿಸಿ ಏರುತ್ತಿರುವಂತೆ ನೀರಿನ ಸಮಸ್ಯೆಯ ತೀವ್ರತೆಯೂ ಹೆಚ್ಚಾಗುತ್ತಿದೆ. ರಾಜ್ಯದ ವಿವಿಧೆಡೆಗಳಲ್ಲಿ ನೀರಿಗಾಗಿ ಅನುಭವಿಸುತ್ತಿರುವ ಸಂಕಷ್ಟಗಳು ವರದಿಯಾಗುತ್ತಲೇ ಇವೆ.

ದೂರದಿಂದ ಕೊಡ ನೀರು ಹೊತ್ತುತರುವುದುತಳ್ಳುಗಾಡಿಗಳಲ್ಲಿ ನೀರನ್ನು ಒಯ್ಯುವುದು  ಅಥವಾ ನೀರಿಗಾಗಿ ಕೊಳವೆ ಬಾವಿನೀರಿನ ಟ್ಯಾಂಕರ್ ಮುಂದೆ ಮಹಿಳೆಯರು ಸಾಲುಗಟ್ಟಿ ನಿಲ್ಲುವ ದೃಶ್ಯಗಳು  ಮಾಮೂಲಾಗಿವೆ. ಭಾರತದಲ್ಲಿ ಈಗಲೂ ಸುಮಾರು 7.6 ಕೋಟಿ ಜನರಿಗೆ ಸುರಕ್ಷಿತವಾದ ಕುಡಿಯುವ ನೀರಿನ ಲಭ್ಯತೆ ಇಲ್ಲ.

ಈ ಸ್ಥಿತಿ ಬರದಂತೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ನೀರಿನ ಮೂಲಗ್‍ಳನ್ನು ಉಳಿಸುವ ಪ್ರಕ್ರಿಯೆಯಲ್ಲಿ ಇಂದೇ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ

ಕಾರ್ಖಾನೆಗಳು  ಹೊರಬಿಡುವ ತ್ಯಾಜ್ಯ ಸೇರಿದಂತೆ ಹಲವು ಕಾರಣಗಳಿಗಾಗಿ ಮಲಿನಗೊಳ್ಳುತ್ತಿರುವ ನದಿಗಳಿಂದಾಗಿ ನೀರಿನ ಸಮಸ್ಯೆ  ಮತ್ತಷ್ಟು ದೊಡ್ಡದಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಂದು ಈ ಬಾರಿಯ ವಿಶ್ವ ಜಲ ದಿನವನ್ನು ನಾವು ಆಚರಿಸುತ್ತಿದ್ದೇವೆ.

ನೀರನ್ನು ಏಕೆ ಪೋಲು ಮಾಡಬೇಕು’ ನಮ್ಮ ಮನೆನಗರಉದ್ಯಮ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಬಳಕೆಯಾಗಿ ಹರಿದು ಹೋಗುವ ತ್ಯಾಜ್ಯ ನೀರಿನ ಪ್ರಮಾಣ ದೊಡ್ಡದು.

ಈ ನೀರು ಸಂಸ್ಕರಣಗೊಂಡು ಮರುಬಳಕೆಯಾಗದೆ ವ್ಯರ್ಥವಾಗುತ್ತಿದೆ. ಜೊತೆಗೆ ಮಾಲಿನ್ಯವನ್ನೂ ಸೃಷ್ಟಿಸುತ್ತಿದೆ.  ಆದರೆ ತ್ಯಾಜ್ಯ ನೀರನ್ನು ಕಡಿಮೆ ಮಾಡುವುದಲ್ಲದೆ ಅದನ್ನು ಸುರಕ್ಷಿತವಾಗಿ ಸಂಸ್ಕರಿಸಿ ಮರುಬಳಕೆ ಮಾಡಲು ಅವಕಾಶವಿದೆ. ಈ ಬಗ್ಗೆ ಚಿಂತಿಸಲು ಇದು ಸಕಾಲ.

ಭಾರತದ  ಆರ್ಥಿಕತೆ ಕೃಷಿಯನ್ನೇ ದೊಡ್ಡದಾಗಿ ಅವಲಂಬಿಸಿದೆ. ಆದರೆ ನೀರಿನ ಕೊರತೆ ಹಾಗೂ ಪದೇಪದೇ ರಾಷ್ಟ್ರವನ್ನು ಕಾಡುತ್ತಿರುವ ಬರದಿಂದ ಆರ್ಥಿಕ ಪ್ರಗತಿ ಮೇಲಾಗುವ ಪರಿಣಾಮ ದೊಡ್ಡದು. ಇಂತಹ ಸಂದರ್ಭದಲ್ಲಿ ನೀರಿನ ಪೋಲು ತಡೆಯುವ ಬಗ್ಗೆ ವಿಶೇಷ ಗಮನ ಹರಿಸುವುದು ಅಗತ್ಯ.

ಅದರಲ್ಲೂ ನಗರಗಳಲ್ಲಿ ವಾಸಿಸುವ ಜನರ ಜೀವನಶೈಲಿಯಿಂದ  ಆಗುತ್ತಿರುವ ನೀರಿನ ಪೋಲು ಈಗಾಗಲೇ ನಮಗೆ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಜನಜಾಗೃತಿಯಾಗಬೇಕು. ಮುಂದೊದಗಬಹುದಾದ ನೀರಿನ ಸಮಸ್ಯೆಯ ಅಗಾಧತೆಯ ಬಗ್ಗೆ ಅರಿವು ಮೂಡಿಸುವುದು ಇಂದಿನ ತುರ್ತು.

ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ 18ರಷ್ಟು  ಮಂದಿ ಭಾರತದಲ್ಲಿದ್ದಾರೆ. ಆದರೆ ಜಗತ್ತಿನಲ್ಲಿ ಒಟ್ಟು ಲಭ್ಯವಿರುವ ಜಲ ಸಂಪನ್ಮೂಲಗಳಲ್ಲಿ ಭಾರತ ಹೊಂದಿರುವ ಪಾಲು ಕೇವಲ ಶೇ 4.  ಇದನ್ನು ನಾವು ಅರಿತುಕೊಳ್ಳಬೇಕು.

ಹೀಗಾಗಿ  ನೀರಿನ ಪ್ರತಿ  ಹನಿಯೂ ಎಷ್ಟು ಮುಖ್ಯ ಎಂಬುದು ಅರಿವಾಗಬೇಕು. ಭಾರತದ ಬಹು ಭಾಗಗಳಲ್ಲಿ 2040ರೊಳಗೆ ಕುಡಿಯುವ ನೀರಿನ ತೀವ್ರ ಕೊರತೆ ಎದುರಾಗಲಿದೆ ಎಂದು ಇತ್ತೀಚಿನ ಅಧ್ಯಯನ ಹೇಳಿದೆ.

2030 ಹಾಗೂ 2040ರ ನಡುವೆ ವಿಶ್ವದ ಅನೇಕ ಭಾಗಗಳು ನೀರಿನ ಅಭಾವ ಎದುರಿಸಲಿವೆ. ಈ ಪೈಕಿ ಭಾರತವೂ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ. ಇದನ್ನು ನಿರ್ವಹಿಸಲು ನಾವು ಸಜ್ಜುಗೊಳ್ಳಬೇಕಿದೆ.

ನೀರು  ಪೋಲಾಗದಂತೆ ಸಂಗ್ರಹಿಸಿಟ್ಟುಕೊಳ್ಳಲು ಮೂಲ ಸೌಕರ್ಯಗಳನ್ನು ಮೊದಲು ಅಭಿವೃದ್ಧಿಪಡಿಸಬೇಕು. ಇದಕ್ಕೆ ತಂತ್ರಜ್ಞಾನವನ್ನುಲಭ್ಯವಿರುವ ಸ್ಥಳೀಯ ಮಾದರಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಲು ಸಂಕಲ್ಪ ತೊಡೋಣ.

 “ಈಗ ನದಿಗಳನ್ನೆಲ್ಲ ಚರಂಡಿ ಮಾಡುತ್ತಿದ್ದಾರೆ. ನದಿಗೆ ಯಾವನಾದರೂ ಈ ಕೊಚ್ಚೆ ನೀರು ಬಿಟ್ಟರೆ ಆ ನದಿಯ ನೀರು ಕುಡಿಯುವಷ್ಟೂ ಜನ ಬಂದು, ‘ನೀನು ಬಿಡ್ತಾ ಇರುವ ನೀರು ಕುಡೀಬೇಕು ಎಂದು prescribe ಮಾಡ್ತಾ ಇದ್ದೀಯಾ ಅಲ್ವೇನಪ್ಪಾನಮ್ಮೆದುರು ನೀನು ಒಂದೊಂದು ಲೀಟರ್ ಕುಡಿ’ ಅಂತ ಅವನನ್ನು ಕೇಳುವ ಹಕ್ಕು ಜನಕ್ಕೆ ಇದೆ ಅನ್ನುವ ಒಂದು ಕಾನೂನು ಮಾಡಲಿ.”

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries