ಕಣ್ಣೂರು: ಬಿಜೆಪಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗುವಂತ ವಿದ್ಯಮಾನವೊಂದು ನಡೆದಿದ್ದು ಪಕ್ಷಕ್ಕೆ ಹಿನ್ನಡೆಯಾಗಲಿದೆ. ಕಣ್ಣೂರು ಜಿಲ್ಲೆಯ ತಲಶೇರಿ ಮತ್ತು ಪತ್ತನಂತಿಟ್ಟಿನ ಗುರುವಾಯೂರ್ ವಿಧಾನ ಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳ ಅಸ್ಪಷ್ಟತೆಗಳ ಕಾರಣ ನೀಡಿ ನಾಮಪತ್ರಗಳನ್ನು ತಿರಸ್ಕøರಿಸಲಾಗಿದೆ ಎಂದು ತಿಳಿದುಬಂದಿದೆ. ಕಣ್ಣೂರು ಬಿಜೆಪಿ ಜಿಲ್ಲಾಧ್ಯಕ್ಷ ಮತ್ತು ತಲಶೇರಿಯಲ್ಲಿ ಅಭ್ಯರ್ಥಿ ಎನ್. ಹರಿದಾಸ್ ಅವರ ನಾಮಪತ್ರ ಪರಿಶೀಲನೆಯ ವೇಳೆ ತಿರಸ್ಕøತಗೊಂಡಿದೆ.
ನಾಮಪತ್ರದೊಂದಿಗೆ ಸಲ್ಲಿಸಬೇಕಿದ್ದ ಫಾರ್ಮ್ ಎಯನ್ನು ಸಲ್ಲಿಸದ ಲೋಪದ ಆಧಾರದಲ್ಲಿ ನಾಮಪತ್ರ ತಿರಸ್ಕøತಗೊಂಡಿತು. ಜೊತೆಗೆ ಈ ಕ್ಷೇತ್ರದಲ್ಲಿ ಬಿಜೆಪಿಗೆ ಡಮ್ಮಿ ಅಭ್ಯರ್ಥಿ ಕೂಡಾ ಇರಲಿಲ್ಲ. ಕಣ್ಣೂರಿನಲ್ಲಿ ಬಿಜೆಪಿಗೆ ಇದೇ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳಿರುವುದೆಂಬುದು ಗಮನಾರ್ಹ.
ಎ. ಎನ್. ಶಮ್ಸೀರನ್ ಎಂಬವರು ಈ ಕ್ಷೇತ್ರದಲ್ಲಿ ಎಲ್ಡಿಎಫ್ ಅಭ್ಯರ್ಥಿಯಾಗಿದ್ದಾರೆ. ಯುಡಿಎಫ್ ನಿಂದ ಕಾಂಗ್ರೆಸ್‍ನ ಎಂ. ಪ. ಅರವಿಂದಾಕ್ಷ ಎಂಬವರು ಕಣದಲ್ಲಿದ್ದಾರೆ.
ಇದೇ ವೇಳೆ ಬಿಜೆಪಿಗೆ ಈ ಬಾರಿ ಗುರುವಾಯೂರಿನಲ್ಲಿ ಅಭ್ಯರ್ಥಿ ಇಲ್ಲ. ನ್ಯಾಯವಾದಿ. ನಿವೇದಿತಾ ಅವರ ನಾಮಪತ್ರವೂ ತಿರಸ್ಕøತಗೊಂಡಿದೆ. ಬಿಜೆಪಿ ರಾಜ್ಯ ಅಧ್ಯಕ್ಷರ ಸಹಿ ಇಲ್ಲದ ಕಾರಣ ನೀಡಿ ತಿರಸ್ಕರಿಸಲಾಗಿದೆ. ಇಲ್ಲಿಯೂ ಬಿಜೆಪಿಗೆ ಡಮ್ಮಿ ಅಭ್ಯರ್ಥಿ ಇಲ್ಲದಿರುವುದು ಭಾರೀ ಸಂಕಷ್ಟಕ್ಕೆ ಕಾರಣವಾಗಿದೆ.
ದೇವಿಕುಳಂ ಕ್ಷೇತ್ರದಲ್ಲಿ ಎನ್‍ಡಿಎ ಅಭ್ಯರ್ಥಿ ಸೇರಿದಂತೆ ಇತರ ಮೂರು ಮಂದಿಯ ನಾಮಪತ್ರ ತಿರಸ್ಕøತಗೊಂಡಿದೆ. ಎನ್‍ಡಿಎ ಅಭ್ಯರ್ಥಿ ಅನ್ನಾ ಡಿಎಂಕೆಯ ಆರ್.ಎಂ. ಧನಲಕ್ಷ್ಮಿ, ಡಮ್ಮಿ ಅಭ್ಯರ್ಥಿ ಪೆÇನ್ ಪಾಂಡಿ, ಬಿಎಸ್ಪಿಯಿಂದ ಕಣಕ್ಕಿಳಿದಿರುವ ತಂಗಪ್ಪನ್ ಎಂಬವರ ನಾಮಪತ್ರಿಕೆಗಳೂ ತಿರಸ್ಕøತಗೊಂಡಿವೆ. ಫಾರ್ಮ್ 26 ಪೂರ್ಣವಾಗಿ ಪೂರ್ಣಗೊಂಡಿಲ್ಲ ಎಂಬುದು ಇದಕ್ಕೆ ಕಾರಣವಾಗಿದೆ.