ತಿರುವನಂತಪುರ: ಕಳ್ಳ ಮತದಾನ ತಡೆಯಲು ಚುನಾವಣಾ ಆಯೋಗ ಕಠಿಣ ನಿಲುವುಗಳನ್ನು ಕೈಗೊಂಡಿದೆ. ಈ ಹಿಂದೆ ದೂರು ದಾಖಲಾದ ಎರಡು ಜಿಲ್ಲೆಗಳ ಎಲ್ಲಾ ಬೂತ್‍ಗಳಲ್ಲಿ ವೈಬ್‍ಕಾಸ್ಟಿಂಗ್ ಗೆ ನಿರ್ದೇಶನ ನೀಡಲಾಗಿದೆ. ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಎಲ್ಲಾ ಬೂತ್‍ಗಳಲ್ಲಿ ವೈಬ್ ಕಾಸ್ಟಿಂಗ್ ಮಾಡಲಾಗುವುದು ಎಂದು ಮುಖ್ಯ ಚುನಾವಣಾ ಅಧಿಕಾರಿ ಟೀಕರಾಮ್ ಮೀನಾ ತಿಳಿಸಿರುವರು.
ಚುನಾವಣಾ ಆಯೋಗವು ಕಳೆದ ಬಾರಿಗಿಂತ ಈ ಬಾರಿ ವೆಬ್ ಕಾಸ್ಟಿಂಗ್ ಬಿತ್ತರಿಸುವಿಕೆಯನ್ನು ಶೇಕಡಾ 50 ರಿಂದ 100 ಕ್ಕೆ ಹೆಚ್ಚಿಸಿದೆ. ಮೋಸದ ಮತದಾನದ ದೂರುಗಳಿರುವ ಎಲ್ಲಾ ಬೂತ್‍ಗಳಲ್ಲಿ ಈ ಬಾರಿ ವೆಬ್‍ಕಾಸ್ಟಿಂಗ್ ಮಾಡಲಾಗುವುದು. ಎರಡು ಮತಗಳನ್ನು ಪಡೆದವರ ಮೇಲೆ ನಿಗಾ ಇಡಬೇಕೆಂದು ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಬಿಎಲ್‍ಒಗಳು ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ, ಮೋಸದ ಮತದಾನದ ಸಾಧ್ಯತೆಯನ್ನು ತೆಗೆದುಹಾಕಲಾಗುತ್ತದೆ ಎಂದು ಚುನಾವಣಾ ಆಯೋಗ ಆಶಯ ವ್ಯಕ್ತಪಡೊಸೊದೆ.
ಇದೇ ವೇಳೆ ಎರಡು ಮತಗಳನ್ನು ಹೊಂದಿರುವವರ ಬಗ್ಗೆ ಹೆಚ್ಚಿನ ಪುರಾವೆಗಳು ಹೊರಬರುತ್ತಿವೆ ಎಂಬ ಅಂಶವು ಆಯೋಗವನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ. ಜೋಡಿ ಮತದ ಹಿಂದೆ ಕೆಲವು ಅಧಿಕಾರಿಗಳ ಪಾಲ್ಗೊಳ್ಳುವಿಕೆ ಇದೆಯೇ ಎಂದು ಚುನಾವಣಾ ಆಯೋಗ ತನಿಖೆ ನಡೆಸುತ್ತಿದೆ.





