HEALTH TIPS

ಮಹಿಳೆಯರಿಗೇ ಮೀಸಲಾದ ಡಿಜಿಟಲ್ ವೇದಿಕೆ : 'ಹರ್​ಸರ್ಕಲ್'

         ನವದೆಹಲಿ: ಈ ಬಾರಿಯ ವಿಶ್ವ ಮಹಿಳಾ ದಿನದ ಸಂದರ್ಭದಲ್ಲಿ, ರಿಲೆಯನ್ಸ್ ಫೌಂಡೇಶನ್​, ಮಹಿಳೆಯರಿಗೇ ಮೀಸಲಾದ ಸೋಷಿಯಲ್ ನೆಟ್ವರ್ಕಿಂಗ್ ಸ್ಪೇಸ್​ ಒದಗಿಸುವ ಮತ್ತು ಆರೋಗ್ಯ, ಜೀವನಶೈಲಿ, ಉದ್ಯೋಗ, ಫಿಟ್​ನೆಸ್​ ಮುಂತಾಗಿ ಸಮಗ್ರ ಮಾಹಿತಿ ಒದಗಿಸುವ ವಿಶೇಷ ಡಿಜಿಟಲ್ ವೇದಿಕೆಯನ್ನು ರೂಪಿಸಿದೆ. 'ಹರ್​ಸರ್ಕಲ್​'(HerCircle.in) ಎಂಬ ಹೆಸರಿನಲ್ಲಿ ಮಹಿಳೆಯರಿಗೇ ಮೀಸಲಾದ, ಸ್ಮಾರ್ಟ್ ಫೋನ್​ಗಳಲ್ಲಿ ಲಭ್ಯವಾಗುವ ಆಯಪ್​, ಮತ್ತು ವೆಬ್​ಸೈಟ್​ಗಳಿಗೆ ನೀತಾ ಅಂಬಾನಿ ಚಾಲನೆ ನೀಡಿದ್ದಾರೆ.


       'ಹರ್​ಸರ್ಕಲ್​​'ನಲ್ಲಿ ಸಮಾನ ಮನಸ್ಕರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಮಹಿಳೆಯರಿಗೆ ನೆಟ್​​ವರ್ಕ್​ ಕಲ್ಪಿಸಲಾಗಿದೆ. ಜೊತೆಗೆ, ಟ್ರೆಂಡಿಂಗ್ ಫ್ಯಾಶನ್ ಮತ್ತು ಲೈಫ್​ಸ್ಟೈಲ್, ಪ್ರೇರಣಾದಾಯಕ ಕಥೆಗಳು, ಮಹಿಳಾ ಸಂಬಂಧಿ ಬೆಳವಣಿಗೆಗಳ ಬಗೆಗಿನ ಸುದ್ದಿಗಳು ಎಲ್ಲವೂ ಲಭ್ಯ. ಉದ್ಯೋಗಸ್ಥ ಮಹಿಳೆಯರಿಗೆ ತಮ್ಮ ಕೌಶಲ್ಯಾಭಿವೃದ್ಧಿಗೆ ವಿವಿಧ ತರಗತಿಗಳು, ನೂತನ ಉದ್ಯೋಗಾವಕಾಶಗಳು ಮಾಹಿತಿ ಲಭ್ಯವಿದ್ದರೆ, ಗೃಹಿಣಿಯರಿಗೆ ಮನೆ ನಿರ್ವಹಣೆ, ಹೊಸ ಹೊಸ ರೆಸಿಪಿ ಮುಂತಾದಂತೆ ಮಾಹಿತಿ ಇರಲಿದೆ.

       ಫಿಟ್​​ನೆಸ್​ ಬಗ್ಗೆ ಆಸಕ್ತಿ ಇರುವ ಮಹಿಳೆಯರಿಗೆ ಪರ್ಸನಲೈಸ್ಡ್​ ಟ್ರ್ಯಾಕರ್​​ಗಳು, ಫಿಟ್​ನೆಸ್​ ಮಾಡೆಲ್ ಮತ್ತು ಶೆಡ್ಯೂಲ್​ಗಳು, ಡಯಟ್​ ಪ್ಲಾನ್ ಮುಂತಾದ ಸೌಲಭ್ಯ ಇದರಲ್ಲಿದೆ. ಜೊತೆಗೆ ಸದಸ್ಯರಿಗೆ ಆರೋಗ್ಯದ ವಿಚಾರಗಳನ್ನು ತಜ್ಞರೊಂದಿಗೆ ಚರ್ಚಿಸಲು ಉಚಿತ ಅವಕಾಶವೂ ಉಂಟು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries