ತ್ರಿಶೂರ್: ಈ ಬಾರಿ ತ್ರಿಶೂರ್ ಪೂರಂ ನಡವಳಿಕೆಯನ್ನು ಪರಿಶೀಲಿಸಲು ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ಸಂಪುಟ ಸಭೆ ನೇಮಿಸಿದೆ. ಹಿಂದಿನ ವರ್ಷಗಳಂತೆ ಎಲ್ಲಾ ಆಚರಣೆಗಳೊಂದಿಗೆ ಪೂರಂ ನಡೆಸುವುದು ಕಷ್ಟ ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ. ಅಟ್ಟುಕಲ್ ಪೊಂಗಾಲ ಮತ್ತು ಶಬರಿಮಲೆ ಉತ್ಸವದ ಶೈಲಿಗಳಂತೆ ಪೂರಂ ನಡೆಸಬೇಕಾಗುತ್ತದೆ ಎಂದು ಸಚಿವರು ಹೇಳಿರುವರು.
ಆದರೆ, ಹಿಂದಿನ ವರ್ಷಗಳಂತೆ ತ್ರಿಶೂರ್ ಪೂರಂ ನ್ನು ಎಲ್ಲಾ ಹಬ್ಬಗಳೊಂದಿಗೆ ಆಚರಿಸಬೇಕು ಎಂಬುದು ಪರಮೇಕಾವ್-ತಿರುವಂಬಾಡಿ ದೇವಸ್ವಂ ಗಳ ಒಕ್ಕೊರಲ ಬೇಡಿಕೆಯಾಗಿದೆ. ಈ ವಿಷಯವನ್ನು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ವರದಿ ಮಾಡಲಾಗಿದೆ.
ದೇವಸ್ವಂಗಳ ಬೇಡಿಕೆಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ. ಆದರೆ ಈ ಬಾರಿ ಕೊರೋನದ ಸಂದರ್ಭದಲ್ಲಿ ಈ ಹಿಂದೆ ಮಾಡಿದಂತೆ ಪೂರಂ ಆಚರಿಸಲು ಸಾಧ್ಯವಿಲ್ಲ. ಪೂರಂ ನಡವಳಿಕೆಗಾಗಿ ಸರ್ಕಾರದಿಂದ ವಿಶೇಷ ಅನುಮತಿ ಪಡೆಯುವುದು ಸಹ ಅಗತ್ಯವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿರುವರು.





