ತಿರುವನಂತಪುರ: ರಾಜ್ಯದಲ್ಲಿ ತೀವ್ರ ಉಷ್ಣತೆಯ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತೀವ್ರ ಮುನ್ನೆಚ್ಚರಿಕೆ ನೀಡಿದೆ.
ಮುಂದಿನ ದಿನಗಳಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗುವ ಬಗ್ಗೆ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಎಂಎ) ಎಚ್ಚರಿಸಿದೆ. ಮಧ್ಯ ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿನ ತಾಪಮಾನವು ಬದಲಾಗಲಿದೆ. ಈ ಜಿಲ್ಲೆಗಳಲ್ಲಿನ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಬಹುದು ಎಂದು ಎಚ್ಚರಿಕೆ ತಿಳಿಸಿದೆ.
ತಾಪಮಾನ ಏರಿಕೆಯ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಾರ್ವಜನಿಕರಿಗೆ ವಿಶೇಷ ಸುರಕ್ಷತಾ ಎಚ್ಚರಿಕೆಗಳನ್ನು ನೀಡಿದೆ.
ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ನೇರ ಸೂರ್ಯನ ಬೆಳಕಿಗೆ ಮೈಯೊಡ್ಡದಂತೆ ಗಮನಿಸಬೇಕು. ನೇರ ಸೂರ್ಯನ ಬೆಳಕಿಗೆ ಮೈಯೊಡ್ಡಿಕೊಳ್ಳದಂತೆ ಛತ್ರಿ ಅಥವಾ ಟೋಪಿ ಬಳಸಬೇಕು. ಬಿಸಿ ವಾತಾವರಣದಿಂದಾಗಿ ಬಾಯಾರಿಕೆಯಿಲ್ಲದಿದ್ದರೂ ಸಾಕಷ್ಟು ನೀರು ಕುಡಿಯಬೇಕು. ಅಲ್ಲದೆ ನಿರ್ಜಲೀಕರಣವು ಆರೋಗ್ಯಕ್ಕೆ ದೊಡ್ಡ ಸಮಸ್ಯೆಗಳನ್ನು ಉಂಟುಮಾಡುತ್ತದೆ.
65 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದವರು, ಮಕ್ಕಳು, ಹೃದ್ರೋಗ ಹೊಂದಿರುವ ಜನರು ಮತ್ತು ಕಷ್ಟಪಟ್ಟು ದುಡಿಯುವವರಿಗೆ ವಿಶೇಷ ಕಾಳಜಿ ಮತ್ತು ರಕ್ಷಣೆ ಬೇಕು. ಶುದ್ಧ ನೀರನ್ನು ಕುಡಿಯುತ್ತೀರಾ ಎಂದು ಖಚಿತಪಡಿಸಿಕೊಳ್ಳಬೇಕು. ಯಾವುದೇ ದೈಹಿಕ ಅಸ್ವಸ್ಥತೆ ಅನುಭವಿಸಿದರೆ, ತಕ್ಷಣ ಚಿಕಿತ್ಸೆಯನ್ನು ಪಡೆಯಬೇಕೆಮದು ಸೂಚಿಸಲಾಗಿದೆ.
ಹಗಲು ವೇಳೆ ಆಲ್ಕೋಹಾಲ್, ಕಾಫಿ, ಚಹಾ ಮತ್ತು ತಂಪಾದ ಪಾನೀಯಗಳನ್ನು ಸ|ಏವಿಸದಿರುವುದು ಹಿತ. ಒ.ಆರ್.ಎಸ್, ಮಜ್ಜಿಗೆ ಮತ್ತು ನಿಂಬೆ ಪಾನಕವನ್ನು ಕುಡಿಯುವುದು ಒಳ್ಳೆಯದು.
ಸಡಿಲವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ. ಕಾರ್ಮಿಕ ಆಯುಕ್ತರು ಕೆಲಸದ ಸಮಯವನ್ನು ಮರುಹೊಂದಿಸಲು ಆದೇಶಿಸಿದ್ದಾರೆ. ಅದರಂತೆ ಉದ್ಯೋಗದಾತರು ಮತ್ತು ಕಾರ್ಮಿಕರು ಸಹಕರಿಸಬೇಕು. ದ್ವಿಚಕ್ರ ವಾಹನಗಳಲ್ಲಿ ಆನ್ ಲೈನ್ ಆಹಾರವನ್ನು ಪೂರೈಸುವವರು ಹಗಲು ಸುರಕ್ಷಿತವಾಗಿದ್ದಾರೆ ಎಂದು ಸಂಬಂಧಿತ ಏಜೆನ್ಸಿಗಳು ಖಚಿತಪಡಿಸಿಕೊಳ್ಳಬೇಕು.






