ಕಾಸರಗೋಡು: ಈ ಬಾರಿಯ ವಿಧಾನಸಭೆ ಚುನಾವಣೆ ಸ್ವತಂತ್ರ, ನಿಷ್ಪಕ್ಷಪಾತಿ ಚುನಾವಣೆಯಾಗಿ ನಡೆಯುವುದನ್ನು ಖಚಿತಪಡಿಸಬೇಕು ಎಂದು ಕಾಞಂಗಾಡ್ ಮತ್ತು ತ್ರಿಕರಿಪುರ ಜನರಲ್ ನಿರೀಕ್ಷಕ ಎಚ್. ರಾಜೇಶ್ ಪ್ರಸಾದ್ ತಿಳಿಸಿದರು.
ವಿಧಾನಸಭೆ ಚುನಾವಣೆ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜನರಲ್ ನಿರೀಕ್ಷಕರ, ನೋಡೆಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಮತದಾತರ ಪಟ್ಟಿಯಲ್ಲಿನ ನಿಖರತೆ ಈ ನಿಟ್ಟಿನಲ್ಲಿ ಪ್ರಧಾನವಾಗಿದೆ. ಮತದಾತರ ಪಟ್ಟಿ ಮಾರ್ಕ್ ನಡೆಸಿ ಅದರ ನಕಲು ರಾಜಕೀಯ ಪಕ್ಷಗಳಿಗೆ ನೀಡಬೇಕು, ಜತೆಗೆ ಇದೇ ನಕಲನ್ನು ಮತಗಟ್ಟೆಗಳಲ್ಲಿ ಚುನಾವಣೆ ಅಧಿಕಾರಿಗಳಿಗೆ ನೀಡಬೇಕಾಗಿದೆ ಎಂದು ತಿಳಿಸಿದರು.
ಮಾದರಿ ನೀತಿ ಸಂಹಿತೆ ಜಾರಿಗೊಳ್ಳಬೇಕಾಗಿರುವುದರ ಮಹತ್ವ, ಮಾಧ್ಯಮಗಳ ಪೇಯ್ಡ್ ನ್ಯೂಸ್, ಚುನಾವಣೆ ಜಾಹೀರಾತು ಇತ್ಯಾಗಳ ಬಗ್ಗೆ ಕಣ್ಗಾವಲು, ಚುನಾವಣೆ ನಿರೀಕ್ಷಕರ ಹೊಣೆಗಾರಿಕೆ ಇತ್ಯಾದಿ ಸಂಬಂಧ ಮಂಜೇಶ್ವರ, ಕಾಸರಗೋಡು ವಿಧಾನಸಭೆ ಕ್ಷೇತ್ರಗಳ ನಿರೀಕ್ಷಕ ರಂಜನ್ ಕುಮಾರ್ ದಾಸ್, ಉದುಮಾ ವಿಧಾನಸಭೆ ಕ್ಷೇತ್ರ ನಿರೀಕ್ಷಕ ದೇಬಾಶೀಷ್ ದಾಸ್ ಮಾತನಾಡಿದರು. ಗಡಿ ಸಹಿತ ವಿವಿಧೆಡೆಗಳ ನಿಗಾದ ಕುರಿತು ಪೆÇಲೀಸ್ ನಿರೀಕ್ಷಕರಾದ ಪಹ್ನಿ ಸಿಂಗ್ ಮಾಹಿತಿ ನೀಡಿದರು.
ಕಾಸರಗೋಡು ವಿಧಾನಸಭೆ ಕ್ಷೇತ್ರದ ನಿರೀಕ್ಷಕ ಸಾಂಜೋಯ್ ಪೌಲ್, ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್, ಕಾಞಂಗಾಡ್ ಚುನಾವಣೆ ಅಧಿಕಾರಿಯಾಗಿರುವ ಅಪರ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಮಂಜೇಶ್ವರ ಚುನಾವಣೆ ಅಧಿಕಾರಿ ಷಾಜಿ ಎಂ.ಕೆ., ಕಾಸರಗೋಡು ಚುನಾವಣೆ ಅಧಿಕಾರಿ ಷಾಜು ಪಿ., ಉದುಮಾ ಚುನಾವಣೆ ಅಧಿಕಾರಿ ಜಯ ಜೋಸ್ ರಾಜ್ ಸಿ.ಎಲ್., ತ್ರಿಕರಿಪುರ ಚುನಾವಣೆ ಅಧಿಕಾರಿ ಸಿರೋಜ್ ಪಿ.ಜಾನ್‍ಉಪಸ್ಥಿತರಿದ್ದರು.




