HEALTH TIPS

ಉತ್ತಮ ನಾಳೆಗಾಗಿ ಪ್ರತಿ ಹನಿ ನೀರನ್ನು ಉಳಿಸಿ - ಎಂ.ಎಸ್.ತಂಙಳ್ ಮದನಿ

       ಬದಿಯಡ್ಕ: ನೀರು ಜೀವನವಾಗಿದೆ. ನೀರಿಲ್ಲದೆ ಜೀವನವಿಲ್ಲ ಮತ್ತು ಭೂಮಿಯೂ ಇಲ್ಲ. ಆದ್ದರಿಂದ ಒಂದು ಹನಿ ನೀರೂ ಪೋಲಾಗದಂತೆ ಕಾಪಿಡುವುದು ಮಾನವ ಧರ್ಮ ಎಂದು ಸಮಸ್ತ ಕಾಸರಗೋಡು ಜಿಲ್ಲೆಯ ಉಪಾಧ್ಯಕ್ಷ ಸೈಯದ್ ಎಂ.ಎಸ್.ತಂಙಳ್ ಮದನಿ ಓಲಮುಂಡು ಅಭಿಪ್ರಾಯ ವ್ಯಕ್ತಪಡಿಸಿದರು.

        ವಿಶ್ವ ಜಲ ದಿನಾಚರಣೆಯ ಅಂಗವಾಗಿ ಚೆರ್ಕಳ ಕುತುಬಿನಲ್ ಇಸ್ಲಾಂ ಮದ್ರಸದ ಎಸ್.ಕೆ.ಎಸ್.ಬಿ ವಿ ಘಟಕದ ಆರ್ಶರಯದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ಜಮಾಅತ್ ಪ್ರಧಾನ ಕಾರ್ಯದರ್ಶಿ ನಾಸರ್ ಚಾಯಿಂದಡಿ ಅಧ್ಯಕ್ಷತೆ ವಹಿಸಿದ್ದರು. ಸಯಿದ್ ಎಂ.ಎಸ್.ತಂಙಳ್ ಒಲಮುಂಡಾ ಅವರು ನೀರಿನ ದಿನಾಚರಣೆಯ ಅಂಗವಾಗಿ ಪಕ್ಷಿಗಳಿಗೆ ನೀರಿನಾಶ್ರಯವಾಗಿ ಅನುಕೂಲಕರವಾಗಲು ನಿರ್ಮಿಸಿದ ವಿಶೇಷ ಸೌಕರ್ಯವನ್ನು ಉದ್ಘಾಟಿಸಿದರು. ಮೊಯ್ದೀನ್ ಕುಂಞÂ್ಞ ಚೆರ್ಕಳ, ಸಿದ್ದೀಕ್ ಫೈಜಿ, ಅಶ್ರಫ್ ಬಾವಿಕ್ಕೆರೆ, ಹಫೀಜ್ ದಾರಿಮಿ ಚೆರ್ಕಳ, ಅಲಿ ಹುದವಿ, ಯೂಸುಫ್ ಮೌಲವಿ, ಹಸೈನಾರ್ ಮದನಿ, ಅರಾಫತ್ ಅಸ್ನವಿ, ಸಮದ್ ಮೌಲವಿ ಕಳನಾಡ್, ಶಬಾಬ್ ಮತ್ತಿತರರು ಉಪಸ್ಥಿತರಿದ್ದರು.  'ನಾಳೆಗಾಗಿನ ಸಂರಕ್ಷಿಸುವ ಜೀವಜಲ ಎಂಬ ಘೊಷವಾಕ್ಯದಲ್ಲಿ ಮಾ.22 ರಿಂದ ಏಪ್ರಿಲ್ 30ರ ವರೆಗೆ ಜಲಸಂರಕ್ಷಣಾ ಕಾರ್ಯಗಾರ ನಡೆಸಲಾಗುತ್ತಿದ್ದು, ಸಜ್ಜನರ ಸಹಕಾರ ಅಗತ್ಯ ಎಂದು ಸಂಘಟಕರು ವಿನಂತಿಸಿದರು. ಈ ಅಭಿಯಾನದಲ್ಲಿ ನೀರಿನ ಸಂರಕ್ಷಣಾ ಸಂದೇಶ, ಪ್ರತಿಜ್ಞೆ, ವರ್ತಮಾನದ ಅವಲೋಕನ, ಪೆÇೀಸ್ಟರ್ ಪ್ರದರ್ಶನ, ನೀರಿನ ಘಟಕಗಳ ಸ್ಥಾಪನೆ, ಪಕ್ಷಿಗಳಿಗೆ ನೀರಿನ ರಂಧ್ರ, ಮತ್ತು ಮನೆಯಲ್ಲಿ ನೀರಿನ ರಂಧ್ರ ಮೊದಲಾದ ಚಟುವಟಿಕೆಗಳು ಇರಲಿದೆ. 

         ಮುಅಲ್ಲಿಮ್ ಲತೀಫ್ ಮೌಲವಿ ಕೊಲ್ಲಂಬಾಡಿ ಸ್ವಾಗತಿಸಿ,ಎಸ್.ಬಿ.ವಿ ಅಧ್ಯಕ್ಷ  ಬಾಸಿತ್ ತಾಯಲ್ ವಂದಿಸಿದರು.


         

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries