ಬದಿಯಡ್ಕ: ಬದಿಯಡ್ಕ ಸಮೀಪದ ಕರಿಂಬಿಲ ಕಜೆಹಿತ್ಲು ನಿವಾಸಿ ಪಾಂಡೇಲು ಸುದರ್ಶನ ಪಿ. ಅವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಡಾ. ಎಂ.ಕೆ. ಮಹೇಶ್ ಹಾಗೂ ಡಾ. ಟಿ.ವಿ. ರಾಮಚಂದ್ರ ಅವರ ನಿರ್ದೇಶನದಲ್ಲಿ ಸಸ್ಯಶಾಸ್ತ್ರ ವಿಭಾಗಕ್ಕೆ ಸಮರ್ಪಿಸಿದ `ಫೈಥೋರೆಮೆಡಿಯೇಶನ್ ಪೊಟೆನ್ಶಿಯಲ್ ಆಂಡ್ ನ್ಯೂಟ್ರಿಯೆಂಟ್ ಡೈನಮಿಕ್ಸ್ ಆಫ್ ಮೈಕ್ರೋಪೈಟ್ಸ್ ಇನ್ ತ್ರೀ ಬೆಂಗಳೂರ್ ಅರ್ಬನ್ ವೆಟ್‍ಲೇಂಡ್ಸ್' ಎಂಬ ಮಹಾಪ್ರಬಂಧವನ್ನು ಸುದರ್ಶನ ಪಿ. ಅವರು ಮಂಡಿಸಿದ್ದರು.
ಬದಿಯಡ್ಕದ ವ್ಯಾಪಾರಿ ಕಜೆಹಿತ್ತಿಲು ಪಾಂಡೇಲು ಪಿ.ಕೇಶವ ಭಟ್ ಮತ್ತು ಉಷಾಕುಮಾರಿ ದಂಪತಿಗಳ ಪುತ್ರ ಸುದರ್ಶನ್ ಅವರು ಪೆರಡಾಲ ನವಜೀವನ ಶಾಲೆಯ ಹಳೆವಿದ್ಯಾರ್ಥಿಯಾಗಿದ್ದಾರೆ. ಎಡನೀರು ಸ್ವಾಮೀಜೀಸ್ ಶಾಲೆಯಲ್ಲಿ ಪ್ಲಸ್ ಟು, ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಬಯೋಟೆಕ್ನಾಲಜಿ ವಿಭಾಗದಲ್ಲಿ ಬಿ.ಎಸ್ಸಿ. ಪದವಿಯನ್ನು ಪಡೆದು, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದಾರೆ. 2011ರಿಂದ ಪರಿಸರ ವಿಜ್ಞಾನ ಕೇಂದ್ರ, ಭಾರತೀಯ ವಿಜ್ಞಾನ ಸಂಸ್ಥೆ,ಬೆಂಗಳೂರು ಇದರ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದ ಉಪನ್ಯಾಸಕರಾಗಿ ಉದ್ಯೋಗದಲ್ಲಿದ್ದಾರೆ. ರಿಸರ್ಚ್ ರತ್ನ ಅವಾರ್ಡ್ 2019, ಇಂಡೋ ಏಶ್ಯನ್ ರೋಬರ್ಟ್ ಬ್ರೌನ್ ಜೂನಿಯರ್ ಸೈಂಟಿಸ್ಟ್ ಅವಾರ್ಡ್ 2020, ಯಂಗ್ ಸೈಂಟಿಸ್ಟ್ ಅವಾರ್ಡ್ 2021, ಸಹ್ಯಾದ್ರಿ ಇಕೊಲೋಜಿಸ್ಟ್ ಅವಾರ್ಡ್ 2016, ಸಹ್ಯಾದ್ರಿ ಶಿಕ್ಷಕ ಅವಾರ್ಡ್ 2020 ಮೊದಲಾದ ಪ್ರಶಸ್ತಿಗಳನ್ನೂ ಅವರು ಪಡೆದಿದ್ದಾರೆ.






