ತಿರುವನಂತಪುರ: ಸಿಪಿಎಂ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಳಿಯ ಮೊಹಮ್ಮದ್ ರಿಯಾಜ್ ಅವರನ್ನು ಸೇರಿಸಲಾಗಿದೆ. ರಿಯಾಜ್ ಬೇಪೂರ್‍ನಿಂದ ಸ್ಪರ್ಧಿಸುತ್ತಿದ್ದಾರೆ. ಪಕ್ಷದ ಯುವ ಮುಖ ಮತ್ತು ಡಿವೈಎಫ್‍ಐ ಅಖಿಲ ಭಾರತ ಕಾರ್ಯದರ್ಶಿಯಾಗಿರುವ ರಿಯಾಜ್ ಅವರಿಗೆ ಸ್ಥಾನ ನೀಡಿದ್ದು ಅವರು ಮುಖ್ಯಮಂತ್ರಿಯ ಅಳಿಯನೆಂದು ಅಲ್ಲ, ಆದರೆ ಅವರು ಸಂಘಟನೆಯಲ್ಲಿ ಪ್ರಮುಖ ಆಂದೋಲನಳಿಗೆ ನೇತೃತ್ವ ವಹಿಸಿದ್ದಾರೆ ಎಂದು ಹಲವಾರು ಜನರ ಬೇಡಿಕೆಯ ಮೇರೆಗೆ ಎಂದು ಪಕ್ಷ ವಿವರಿಸಿದೆ. ಇದರ ವಿರುದ್ಧ ಪಕ್ಷದೊಳಗೆ ಯುವ ಮುಖಂಡರಲ್ಲಿ ಅಸಮಾಧಾನದ ಹೊಗೆ ಹತ್ತಿಕೊಂಡಿದೆ ಎನ್ನಲಾಗಿದೆ.
ರಿಯಾಜ್ ಪರ ಕ್ಷೇತ್ರದಲ್ಲಿ ಪಿಣರಾಯಿ ಪ್ರಚಾರ ಮಾಡಬಹುದು ಎಂಬ ವರದಿಗಳಿವೆ. ರಿಯಾಜ್ ಗೆದ್ದು ಬಂದರೆ, ರಾಜ್ಯದಲ್ಲಿ ಎಲ್.ಡಿಇ.ಎಫ್ ಮರಳಿ ಅಧಿಕಾರಕ್ಕೇರಿದರೆ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಮುಂಬರುವ ದಿನಗಳಲ್ಲಿ, ಜಿ ಸುಧಾಕರನ್ ಸೇರಿದಂತೆ ಪ್ರಬಲರನ್ನು ಹೊರಗಿಡಲು ಮತ್ತು ಅವರ ಸ್ಥಾನದಲ್ಲಿ ಅವರ ಮಗನನ್ನು ನೇಮಿಸುವ ಪಿಣರಾಯಿಯವರ ಕ್ರಮದ ವಿರುದ್ಧ ಹೆಚ್ಚಿನ ನಾಯಕರು ಸಾರ್ವಜನಿಕ ಪ್ರತಿಕ್ರಿಯೆಯೊಂದಿಗೆ ಆಕ್ಷೇಪ ವ್ಯಕ್ತಪಡಿಸುವ ಸೂಚನೆಗಳಿವೆ.
ಪಕ್ಷದ ರಾಜ್ಯ ಕಾರ್ಯದರ್ಶಿ ವಿಜಯರಾಘವನ್ ಮತ್ತು ಸಚಿವ ಎ.ಕೆ.ಬಾಲನ್ ಅವರ ಪತ್ನಿಯರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂಬ ಅಂಶವು ಸಾಕಷ್ಟು ಟೀಕೆಗಳಿಗೆ ಕಾರಣವಾಗಿದೆ. ವಿವಾದ ಮತ್ತು ಪ್ರತಿಭಟನೆಯ ಹೊರತಾಗಿಯೂ, ಬಾಲನ್ ಅವರ ಪತ್ನಿ ಜಮೀಲಾ ಅವರಿಗೆ ಅಂತಿಮವಾಗಿ ಸ್ಥಾನ ನಿರಾಕರಿಸಲಾಯಿತು. ಆದರೆ ವಿಜಯರಾಘವನ್ ಅವರ ಪತ್ನಿ ಬಿಂದು ಇರಿಂಞಲಕುಡದಿಂದ ಸ್ಪರ್ಧಿಸುತ್ತಿರುವುದಾಗಿ ತಿಳಿದುಬಂದಿದೆ.





