ವಿಶ್ವದಾದ್ಯಂತ 11,70,67,724 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಮಹಾಮಾರಿಗೆ 25,99,178 ಮಂದಿ ಪ್ರಾಣ ಬಿಟ್ಟಿದ್ದಾರೆ. ಒಟ್ಟು ಪ್ರಕರಣಗಳ ಪೈಕಿ 9,26,44,767 ಸೋಂಕಿತರು ಗುಣಮುಖರಾಗಿದ್ದು, 2,18,23,779 ಸಕ್ರಿಯ ಪ್ರಕರಣಗಳಿವೆ ಎಂದು ಗೊತ್ತಾಗಿದೆ.
ಕೊರೊನಾವೈರಸ್ ಸೋಂಕಿನ ಲಸಿಕೆ ವಿತರಣೆ ನಡುವೆ ಮಹಾಮಾರಿಯಿಂದ ಜನರಿಗೆ ಅಪಾಯ ಕಡಿಮೆಯಾಗಿದೆಯಾ. ವಿಶ್ವದಲ್ಲಿ ಅತಿಹೆಚ್ಚು ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳು ಯಾವುವು. ಯಾವ ರಾಷ್ಟ್ರವು ಹೆಚ್ಚು ಪ್ರಕರಣಗಳನ್ನು ದಾಖಲಿಸುತ್ತಿದೆ. ಯಾವ ದೇಶದಲ್ಲಿ ಎಷ್ಟು ಸೋಂಕಿತ ಪ್ರಕರಣಗಳಿವೆ. ವಿಶ್ವದಲ್ಲೇ ಅತಿಹೆಚ್ಚು ಸೋಂಕಿನಿಂದ ತತ್ತರಿಸಿರುವ ಟಾಪ್-5 ರಾಷ್ಟ್ರಗಳು ಯಾವುವು ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
ಅಮೆರಿಕಾ ಜನರ ಎದೆಯಲ್ಲಿ ನಡುಕ ಹುಟ್ಟಿಸಿದ ಕೊರೊನಾ:
ಕೊರೊನಾವೈರಸ್ ಎಂದರೆ ಅಮೆರಿಕಾದ ಮಂದಿ ಕನಸಿನಲ್ಲೂ ಬೆಚ್ಚಿ ಬೀಳುವಂತಾ ಸ್ಥಿತಿ ನಿರ್ಮಾಣವಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ 2,96,53,891 ಸೋಂಕಿತ ಪ್ರಕರಣಗಳು ವರದಿಯಾಗಿವೆ. 5,37,119 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. 2,02,73,915 ಸೋಂಕಿತರು ಗುಣಮುಖರಾಗಿದ್ದರೆ, 88,42,857 ಸಕ್ರಿಯ ಪ್ರಕರಣಗಳಿವೆ.
ಬ್ರೆಜಿಲ್ ರಾಷ್ಟ್ರವನ್ನು ಬೆಚ್ಚಿ ಬೀಳಿಸಿದ ಕೊರೊನಾ:
ಕೊರೊನಾವೈರಸ್ ಸೋಂಕಿನ ಹಾವಳಿಗೆ ಬ್ರೆಜಿಲ್ ಅಕ್ಷರಶಃ ಬೆಚ್ಚಿ ಬಿದ್ದಿದೆ. ಬ್ರೆಜಿಲ್ ನಲ್ಲಿ ಒಟ್ಟು 1,09,39,320 ಕೊರೊನಾವೈರಸ್ ಸೋಂಕಿತ ಪ್ರಕರಣಗಳ ವರದಿಯಾಗಿವೆ. ಮಹಾಮಾರಿಗೆ 2,64,446 ಮಂದಿಯು ಕೊವಿಡ್-19 ಸೋಂಕಿನಿಂದಲೇ ಪ್ರಾಣ ಬಿಟ್ಟಿದ್ದಾರೆ. ಈ ಪೈಕಿ 97,04,351 ಸೋಂಕಿತರು ಗುಣಮುಖರಾಗಿದ್ದು, 9,70,523 ಸಕ್ರಿಯ ಪ್ರಕರಣಗಳಿವೆ.
ರಷ್ಯಾದಲ್ಲಿ ರಣಕೇಕೆ ಹಾಕಿದ ಕೊರೊನಾವೈರಸ್:
ಕೊರೊನಾವೈರಸ್ ಸೋಂಕಿಗೆ ರಷ್ಯಾದಲ್ಲಿ ಈವರೆಗೂ 88,726 ಜನರು ಬಲಿಯಾಗಿದ್ದಾರೆ. ಒಟ್ಟು 43,12,181 ಸೋಂಕಿತ ಪ್ರಕರಣಗಳು ವರದಿಯಾಗಿದೆ. 39,00,348 ಸೋಂಕಿತರು ಗುಣಮುಖರಾಗಿದ್ದರೆ, 3,23,107 ಸಕ್ರಿಯ ಪ್ರಕರಣಗಳು ವರದಿಯಾಗಿವೆ.
ಕೊವಿಡ್-19 ಸೋಂಕಿನಿಂದ ನಲುಗಿದ ಇಂಗ್ಲೆಂಡ್:
ಕೊರೊನಾವೈರಸ್ ಸೋಂಕಿನಿಂದ ಯುನೈಟೆಡ್ ಕಿಂಗ್ ಡಮ್(ಇಂಗ್ಲೆಂಡ್) ತತ್ತರಿಸಿ ಹೋಗಿದೆ. ರಷ್ಯಾಗಿಂತಲೂ ಅಧಿಕ ಮಂದಿ ಇಂಗ್ಲೆಂಡ್ ನಲ್ಲಿ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ. 1,24,419 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. 31,99,565 ಸೋಂಕಿತರು ಗುಣಮುಖರಾಗಿದ್ದು, 8,89, 359 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದುಬಂದಿದೆ.





