HEALTH TIPS

ಆಬ್ಸೆಂಟೀಸ್ ಮತದಾರರು- ಇಂದಿನಿಂದ ಅಂಚೆ ಬ್ಯಾಲೆಟ್ ವಿತರಣೆ

                       

        ಕಾಸರಗೋಡು: ಜಿಲ್ಲೆಯಲ್ಲಿ 12374 ಮಂದಿ ಆಬ್ಸೆಂಟೀಸ್ ಮತದಾತರಿದ್ದು, ಇವರಿಗೆ ಮಾ. 26ರಿಂದ ಅಂಚೆ ಬ್ಯಾಲೆಟ್ ವಿತರಣೆ ನಡೆಯಲಿದೆ. 80 ವರ್ಷಕ್ಕಿಂತ ಅಧಿಕ ವಯೋಮಾನದ 8092 ಮಂದಿ, ವಿಶೇಷಚೇತನರ ವಿಭಾಗದ 4281 ಮಂದಿ, ಕೋವಿಡ್ 19 ಖಚಿತಗೊಂಡಿರುವ ಒಬ್ಬರ ಸಹಿತ 12374 ಮಂದಿ ಆಬ್ಸೆಂಟೀಸ್ ಮತದಾತರಾಗಿದ್ದು, ಇವರೆಲ್ಲರೂ ಅಂಚೆ ಬ್ಯಾಲೆಟ್ ಗೆ ಅರ್ಹರಾಗಿರುತ್ತಾರೆ.

       ಆಬ್ಸೆಂಟೀಸ್ ಮತದಾರರಿಗೆ ಅಂಚೆ ಬ್ಯಾಲೆಟ್ ವಿತರಣೆ ನಡೆಸುವ ನಿಟ್ಟಿನಲ್ಲಿ 25 ತಂಡಗಳನ್ನು ರಚಿಸಲಾಗಿದೆ. ಇಬ್ಬರು ಪೆÇೀಲಿಂಗ್ ಅಧಿಕಾರಿಗಳು, ಒಬ್ಬ ವೀಡಿಯೋಗ್ರಾಫರ್, ಒಬ್ಬ ಮೈಕ್ರೋ ಒಬ್ಸರ್ ವರ್, ಒಬ್ಬ ಪೆÇಲೀಸ್‍ಅಧಿಕಾರಿ ಸೇರಿರುವ ತಂಡಗಳು ಇವಾಗಿವೆ. ಅರ್ಜಿ ಸಲ್ಲಿಸಿರುವ ಮಂದಿಗೆ ಏ.2 ವರೆಗೆ ಅಂಚೆ ಬಾಲೆಟ್ ವಿತರಿಸಲಾಗುವುದು. ಅಂಚೆಬಾಲೆಟ್ ವಿತರಣೆ ನಡೆಸುವ ದಿನ ಸಸಂಬಂಧಪಟ್ಟ ಅಭ್ಯರ್ಥಿಗಳ, ಏಜೆಂಟರಿಗೆ ಮಾಹಿತಿ ನೀಡಲಾಗುವುದು. ಇವರಿಗೆ 7 ಮೀಟರ್‍ನಿಂದ 10 ಮೀಟರ್ ವರೆಗಿನ ಅಂತರದಲ್ಲಿ ಮತದಾನ ವೀಕ್ಷಿಸಬಹುದಾಗಿದೆ. ಆಬ್ಸೆಂಟೀಸ್ ಮತದಾತರಿಗೆ ಅರ್ಜಿ ಪಾರಂ ನೀಡಿಕೆ ನಿಟ್ಟಿನಲ್ಲಿ 983 ಬಿ.ಎಲ್.ಒ.ಗಳನ್ನು ನೇಮಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries