HEALTH TIPS

ವಾಹನ ಮಾಲೀಕರಿಗೆ ಗುಡ್‌ ನ್ಯೂಸ್: DL ಸೇರಿದಂತೆ ಈ ಎಲ್ಲ ಸೇವೆಗಳು ಇನ್ಮುಂದೆ ‌ʼಆನ್‌ ಲೈನ್ʼ ನಲ್ಲಿ ಲಭ್ಯ

           ಡಿಎಲ್ ನವೀಕರಣ, ಡುಪ್ಲಿಕೇಟ್ ಪರವಾನಗಿ, ವಾಹನಗಳ ಆರ್‌ಸಿ ಸೇರಿದಂತೆ 18 ಕೆಲಸಗಳಿಗೆ ನೀವು ಇನ್ನು ಮುಂದೆ ಆರ್‌ಟಿಒ ಕಚೇರಿಗೆ ಹೋಗಬೇಕಾಗಿಲ್ಲ. ರಸ್ತೆ ಮತ್ತು ಸಾರಿಗೆ ಸಚಿವಾಲಯವು ಆಧಾರ್ ದೃಢೀಕರಣ ಆಧಾರಿತ ಸಂಪರ್ಕವಿಲ್ಲದ ಸೇವೆಗಳನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ಮನೆಯಿಂದ ಆನ್‌ಲೈನ್‌ ನಲ್ಲಿ ಆಧಾರ್ ದೃಢೀಕರಣದ ಮೂಲಕ ಈ ಸೇವೆಗಳನ್ನು ಪಡೆಯಬಹುದು.


        ರಸ್ತೆ ಮತ್ತು ಸಾರಿಗೆ ಸಚಿವಾಲಯವು ಕೆಲ ದಿನಗಳ ಹಿಂದೆ ಸಂಪರ್ಕವಿಲ್ಲದ ಸೇವೆಗಾಗಿ ಕರಡನ್ನು ಬಿಡುಗಡೆ ಮಾಡಿತ್ತು. ಮಾಧ್ಯಮ ವರದಿಗಳ ಪ್ರಕಾರ, ಈಗ ಈ ನಿಯಮಕ್ಕೆ ಸಚಿವಾಲಯದ ಅನುಮೋದನೆ ಸಿಕ್ಕಿದೆ. ಇಂದಿನಿಂದ ನಿಯಮ ಜಾರಿಗೆ ಬಂದಿದೆ. ವಾಹನ ಮಾಲೀಕರು ಮತ್ತು ಡಿಎಲ್ ಹೊಂದಿರುವವರು ಈಗ 18 ರೀತಿಯ ಆನ್‌ಲೈನ್ ಸೇವೆಯ ಲಾಭ ಪಡೆಯಬಹುದು. ಇದಕ್ಕೆ ಆಧಾರ್ ದೃಢೀಕರಣದ ಅಗತ್ಯವಿರುತ್ತದೆ. ಕಲಿಕೆ ಪರವಾನಗಿ, ಡಿಎಲ್ ನವೀಕರಣ, ಡಿಎಲ್ ಹೊಂದಿರುವವರ ವಿಳಾಸ ಬದಲಾವಣೆ, ವಾಹನ ನೋಂದಣಿ ಪ್ರಮಾಣಪತ್ರ, ವಾಹನ ಮಾಲೀಕರ ವರ್ಗಾವಣೆ ಅರ್ಜಿ, ಅಂತರರಾಷ್ಟ್ರೀಯ ಡಿಎಲ್ ಮತ್ತು ವರ್ಗಾವಣೆ ಸೇವೆಗಳು ಇದ್ರಲ್ಲಿ ಲಭ್ಯವಿದೆ. ಇತರ ಸೇವೆಗಳಲ್ಲಿ ನೋಂದಣಿ ಪ್ರಮಾಣಪತ್ರ ವಿತರಣೆಗಾಗಿ ಅರ್ಜಿ, ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರದಿಂದ ಚಾಲಕ ತರಬೇತಿಗಾಗಿ ನೋಂದಣಿ ಅರ್ಜಿ ಕೂಡ ಇದ್ರಲ್ಲಿ ಸೇರಿದೆ.

        ಆಧಾರ್ ಜೊತೆ ಡಿಎಲ್ ಲಿಂಕ್ ಕೂಡ ಆನ್ಲೈನ್ ಮೂಲಕವೇ ಮಾಡಬಹುದು. ಮೊದಲು ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ, ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಲಿಂಕ್ ಬೇಸ್ ಬಟನ್ ಕ್ಲಿಕ್ ಮಾಡಬೇಕು. ಡ್ರಾಪ್-ಡೌನ್ ಮೆನುವಿನಲ್ಲಿ ಡಿಎಲ್ ಆಯ್ಕೆ ಮಾಡಬೇಕು. ಅಲ್ಲಿ ಡಿಎಲ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ವಿವರ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ 12 ಅಂಕೆ ಆಧಾರ್ ಸಂಖ್ಯೆ ಮತ್ತು ಫೋನ್ ಸಂಖ್ಯೆಯನ್ನು ನಮೂದಿಸಬೇಕು.

       ಇದರ ನಂತರ ಸಲ್ಲಿಸು ಬಟನ್ ಕ್ಲಿಕ್ ಮಾಡಿ ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ನೋಂದಾಯಿತ ಫೋನ್ ಸಂಖ್ಯೆ ಒನ್ ಟೈಮ್ ಪಾಸ್ವರ್ಡ್ ಬರುತ್ತದೆ. ಒಟಿಪಿ ಹಾಕಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಹೀಗೆ ಮಾಡಿದ್ರೆ ಡಿಎಲ್, ಆಧಾರ್ ಗೆ ಲಿಂಕ್ ಆಗುತ್ತದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries