HEALTH TIPS

100 ಮಂದಿ ಅರ್ಹರಿರುವ ಕಾರ್ಯಸ್ಥಳಗಳಲ್ಲೇ ಏಪ್ರಿಲ್ 11 ರಿಂದ ಕೋವಿಡ್ ಲಸಿಕೆಗೆ ಕೇಂದ್ರದ ಅನುಮತಿ

          ನವದೆಹಲಿ: 100 ಮಂದಿ ಅರ್ಹ ಫಲಾನುಭವಿಗಳಿರುವ ಕಾರ್ಯಸ್ಥಳಗಳಲ್ಲಿ ಏ.11 ರಿಂದ ಕೋವಿಡ್-19 ಲಸಿಕೆ ಅಭಿಯಾನ ಪ್ರಾರಂಭಿಸುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

        "45 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಜನಸಂಖ್ಯೆಯ ಗಣನೀಯ ಪ್ರಮಾಣದವರು ಆರ್ಥಿಕತೆಯ ಸಂಘಟಿತ ವಲಯದಲ್ಲಿದ್ದು ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಅಥವಾ ಉತ್ಪಾದನೆ, ಸೇವೆಗಳನ್ನು ಒದಗಿಸುವ ಕ್ಷೇತ್ರದಲ್ಲಿದ್ದಾರೆ. ಈ ಜನಸಂಖ್ಯೆಗೆ ಲಸಿಕೆ ಪಡೆಯುವುದಕ್ಕೆ ಹೆಚ್ಚಿನ ಅವಕಾಶಗಳನು ಒದಗಿಸುವ ನಿಟ್ಟಿನಲ್ಲಿ, 100 ಮಂದಿ ಫಲಾನುಭವಿಗಳಿರುವ ಕಚೇರಿಗಳಲ್ಲೇ (ಸಾರ್ವಜನಿಕ, ಖಾಸಗಿ) ಲಸಿಕೆ ನೀಡುವ ಅಭಿಯಾನವನ್ನು ಏ.11 ರಿಂದ ಪ್ರಾರಂಭಿಸಬೇಕು" ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.

          "ಈಗಾಗಲೇ ಇರುವ ಕೋವಿಡ್ ಲಸಿಕಾ ಕೇಂದ್ರಗಳಿಂದ ಕಚೇರಿಗಳಿಗೆ ಬಂದು ಕೋವಿಡ್ ಲಸಿಕೆಯನ್ನು 100 ಮಂದಿ ಫಲಾನುಭವಿಗಳಿಗೆ ನೀಡುವ ವ್ಯವಸ್ಥೆ ಮಾಡಬೇಕು" ಎಂದು ಭೂಷಣ್ ಪತ್ರದಲ್ಲಿ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯಗಳು ಖಾಸಗಿ/ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೊಂದಿಗೆ ಸಮಾಲೋಚನೆಗಳನ್ನು ಪ್ರಾರಂಭಿಸಬಹುದು ಎಂದು ಆರೋಗ್ಯ ಕಾರ್ಯದರ್ಶಿಗಳು ಹೇಳಿದ್ದಾರೆ.

         ಎಲ್ಲರಿಗೂ ಕೋವಿಡ್-19 ಲಸಿಕೆ ಲಭ್ಯತೆಯಲ್ಲಿ ವ್ಯತ್ಯಯವಾಗಿರುವ ಬಗ್ಗೆ ಇತ್ತೀಚೆಗೆ ಆರೋಗ್ಯ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದ ಬೆನ್ನಲ್ಲೇ ಈ ಸೂಚನೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಲಸಿಕೆ ಪಡೆಯುವುದಕ್ಕೆ ವಯಸ್ಸಿನ ಮಿತಿಯನ್ನು ತೆಗೆದುಹಾಕಬೇಕು ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.

       ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರ ಪ್ರಕಾರ ರಾಜ್ಯದಲ್ಲಿ 14 ಲಕ್ಷ ಡೋಸ್ ಗಳಷ್ಟು ಲಸಿಕೆ ಇದ್ದು, ಮೂರು ದಿನಗಳಲ್ಲಿ ಇವುಗಳನ್ನು ಖರ್ಚು ಮಾಡಬೇಕಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries