HEALTH TIPS

ಆಧಾರ್-ಪಿಎಎನ್ ಜೋಡಣೆಗೆ ಇದ್ದ ಗಡುವು ಜೂ.30 ಕ್ಕೆ ವಿಸ್ತರಣೆ!

          ನವದೆಹಲಿ: ಆಧಾರ್ ಕಾರ್ಡ್ ಜೊತೆಗೆ ಪಿಎಎನ್ ಕಾರ್ಡ್ ಜೋಡಣೆಗೆ ನೀಡಲಾಗಿದ್ದ ಗಡುವನ್ನು ಕೇಂದ್ರ ಸರ್ಕಾರ ಜೂ.30 ವರೆಗೆ ವಿಸ್ತರಣೆ ಮಾಡಿದೆ.


       ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ಆಧಾರ್ ಕಾರ್ಡ್-ಪಿಎಎನ್ ಜೋಡಣೆಗೆ ನೀಡಲಾಗಿದ್ದ ಗಡುವು ವಿಸ್ತರಣೆಗೆ ತೆರಿಗೆದಾರರಿಂದ ಮನವಿ ಬಂದಿದ್ದರಿಂದ ಗಡುವು ವಿಸ್ತರಣೆ ಮಾಡಲಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.

         ತೆರಿಗೆದಾರರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಹಿಂದೆ ಮಾ.31 ನ್ನು ಗಡುವನ್ನಾಗಿ ಘೋಷಿಸಲಾಗಿತ್ತು. ಕಳೆದ ವರ್ಷ ಆಗಸ್ಟ್ ನ ವರೆಗೂ 32.71 ಕೋಟಿ ಪಿಎಎನ್ ಗಳು ಆಧಾರ್ ಗೆ ಜೋಡಣೆಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries