HEALTH TIPS

ಒಡಿಶಾದ 6 ನೇ ತರಗತಿ ಬಾಲಕಿಯ ಸಾಧನೆ: ಕೋವಿಡ್-19 ಕಂಟೈನ್ಮೆಂಟ್ ಜೋನ್ ಗಳಿಗಾಗಿ ಸಾಧನ ಆವಿಷ್ಕಾರ!

            ಭುವನೇಶ್ವರ: ಅವಶ್ಯಕತೆ ಎಲ್ಲಾ ಆವಿಷ್ಕಾರಗಳ ತಾಯಿ ಎನ್ನುತ್ತಾರೆ. ಒಡಿಶಾದ 6 ನೇ ತರಗತಿಯ ಬಾಲಕಿಯ ಸಾಧನೆಗೆ ಈ ಮಾತು ಕೈಗನ್ನಡಿಯಾಗಿದೆ.


       ಕೋವಿಡ್-19 ಕಂಟೈನ್ಮೆಂಟ್ ಜೋನ್ ಗಳ ಬಗ್ಗೆ ತಿಳಿದುಕೊಳ್ಳುವವರಿಗೆ ಹಾಗೂ ಕಂಟೈನ್ಮೆಂಟ್ ಜೋನ್ ಗಳಲ್ಲಿ ಬ್ಯಾರಿಕೇಡ್ ಗಳನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಿ ಹೊರಗಡೆಯಿಂದ ಬರುವವರನ್ನು ನಿಯಂತ್ರಿಸುವುದಕ್ಕಾಗಿ ಸಾಧನವನೊಂದನ್ನು 11 ವರ್ಷದ ಬಾಲಕಿ ಅಭಿವೃದ್ಧಿಪಡಿಸಿದ್ದಾರೆ.

        ಕೋವಿಡ್-19 ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮೈಕ್ರೋ, ಮಿನಿ ಕಂಟೈನ್ಮೆಂಟ್ ಜೋನ್ ಗಳ ಮೇಲಿನ ಗಮನವನ್ನು ಹೆಚ್ಚುವಂತೆ ಮಾಡಿದೆ.

      ಕೊರೋನಾ ವೈರಸ್ ಹ್ಯೂಮನ್ ಡಿಟೆಕ್ಟರ್ ಡಿವೈಸ್ aurdino code ಗಳ ಮೂಲಕ ಕಾರ್ಯನಿರ್ವಹಿಸಲಿದೆ. ಬಳಕೆದಾರರು ಈ ಅಪ್ಲಿಕೇಷನ್ ನ್ನು ಲ್ಯಾಪ್ ಟಾಪ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡು ಡಿವೈಸ್ ಗೆ ಸಂಪರ್ಕ ಕಲ್ಪಿಸಿಕೊಳ್ಳಬೇಕಾಗಿದೆ. ಡಿವೈಸ್ ನ್ನು ಆಪ್ ಮಾಡಿದ ನಂತರ ಬಳಕೆದಾರರು ತಮ್ಮ ಸುತ್ತಮುತ್ತಲ ಪ್ರದೇಶಗಳ ಮೇಲೆ ನಿಗಾ ಇಡಬಹುದಾಗಿದೆ. ಕಂಟೈಮೆಂಟ್ ಜೋನ್ ಗೆ ಯಾರಾದರೂ ಬಂದಲ್ಲಿ, ಕೆಂಪು ದೀಪದೊಂದಿಗೆ ಬಜರ್ ಶಬ್ದ ಪ್ರಾರಂಭವಾಗುತ್ತದೆ.

ಈ ಸಾಧನವನ್ನು ಅಳವಡಿಸಿಕೊಂಡ ಮೇಲೆ ಆ ಪ್ರದೇಶದ ಬಗ್ಗೆ ಆಪ್ ಇನ್ಸ್ಟಾಲ್ ಮಾಡಿಕೊಂಡಿರುವ ಇತರರಿಗೂ ಮಾಹಿತಿ ದೊರೆಯುತ್ತದೆ. ವಿಕಾಶ್ ಗ್ಲೋಬಲ್ ಸ್ಕೂಲ್ ನ 6 ನೇ ತರಗತಿ ವಿದ್ಯಾರ್ಥಿನಿ ಪ್ರತಿಭ ಈ ಸಾಧನದ ಮಾದರಿಯನ್ನು ಅಭಿವೃದ್ಧಿಪಡಿಸಿದ್ದು, ವಾಣಿಜ್ಯ ಉದ್ದೇಶಗಳಿಗೂ ಬಳಸಬಹುದಾಗಿದೆ.

         ಈಗಿನ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಕಾರ್ಯಸಾಧುವಲ್ಲ. ಆದ್ದರಿಂದ ಈ ರೀತಿಯ ಸಾಧನಗಳ ಮೂಲಕ ಸ್ಥಳೀಯವಾಗಿ ಕಂಟೈನ್ಮೆಂಟ್ ಮಾಡುವುದರಿಂದ ಕೊರೋನಾ ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ ಎಂಬುದು ವಿದ್ಯಾರ್ಥಿನಿಯ ಅನಿಸಿಕೆಯಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries