ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಇಂದಿನಿಂದ ಹೆಚ್ಚುವರಿ 7 ಕಡೆ ಕೋವಿಡ್ ಪ್ರತಿರೋಧ ವಾಕ್ಸಿನೇಷನ್ ನಡೆಸಲಾಗುವುದು. ಅಡೂರು, ಕುಂಬ್ಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ಎಂಬ ಸರ್ಕಾರಿ ಆಸ್ಪತ್ರೆಗಳಲ್ಲಿ, ಕಾಸರಗೋಡು ಜನಾರ್ದನ ಆಸ್ಪತ್ರೆ, ತಳಂಗರೆ ಮಾಲೀಕ್ ದೀನಾರ್ ಆಸ್ಪತ್ರೆ, ಕಾಞಂಗಾಡು ಸನ್ ರೈಸ್ ಹಾಸ್ಪಿಟಲ್, ಚೆರ್ವತ್ತೂರು ಕೆ.ಎಚ್.ಎಂ. ಆಸ್ಪತ್ರೆ ಎಂಬ ಖಾಸಗಿ ಆಸ್ಪತ್ರೆಗಳಲ್ಲಿ ವಾಕ್ಸಿನೇಷನ್ ಸೌಕರ್ಯ ಏರ್ಪಡಿಸಲಾಗಿದೆ ಎಂದು ಅಧಿಕೃತರು ತಿಳಿಸಿದ್ದಾರೆ.





