HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ಲಾಕ್‌ಡೌನ್‌ ಹೇರಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ಮಂಗಳವಾರ ಕೊರೊನಾ ಸೋಂಕಿತರ ಸಂಖ್ಯೆ 28,395 ತಲುಪಿದ್ದು, ಒಟ್ಟು 277 ಜನ ಸಾವಿಗೀಡಾಗಿದ್ದಾರೆ.

            15 ದಿನಗಳಿಂದ ನಗರದದ್ಯಂತ ರಾತ್ರಿ ಕರ್ಫ್ಯೂ ಹೇರಲಾಗುತ್ತಿದ್ದು, ಕಳೆದ ಶನಿವಾರದಿಂದ ವಾರಾಂತ್ಯದ ಕರ್ಫ್ಯೂ ಕೂಡ ಜಾರಿಯಲ್ಲಿತ್ತು. ಮಂಗಳವಾರದಿಂದ ಒಂದು ವಾರದ ಅವಧಿಯ ಲಾಕ್‌ಡೌನ್‌ ಸಹ ಘೋಷಿಸಲಾಗಿದೆ. ಆದರೂ ಕೊರೊನಾ ಸೋಂಕಿತರ ಪ್ರಮಾಣ ತಹಬದಿಗೆ ಬಂದಿಲ್ಲ.

ಮಂಗಳವಾರ ಸಂಜೆಗೆ ಕೊನೆಗೊಂಡ 24 ಗಂಟೆಯ ಅವಧಿಯಲ್ಲಿ ಒಟ್ಟು 86,526 ಜನ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದಾರೆ. ಈ ಪೈಕಿ ಶೇ 32.82ರಷ್ಟು ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇತ್ತೀಚಿನ ದಿನಗಳಲ್ಲೇ ಇದು ಅಧಿಕ ಪ್ರಮಾಣವಾಗಿದೆ.

            ಏತನ್ಮಧ್ಯೆ 19,430 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗಳಿಗೆ ತೆರಳಿದ್ದು, ಇನ್ನೂ 85,575 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ದೆಹಲಿಯಲ್ಲಿ ಒಟ್ಟು 9,05,541 ಜನರು ಸೋಂಕಿಗೆ ಒಳಗಾಗಿದ್ದು, 12,638 ಜನ ಸಾವಿಗೀಡಾಗಿದ್ದಾರೆ.

                            3 ಲಕ್ಷದ ಸಮೀಪ ಸೊಂಕಿತರ ಸಂಖ್ಯೆ:
       ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 2,94,115 ಜನ ಸೋಂಕಿತರಾಗಿದ್ದಾರೆ.

ಇದೇ ವೇಳೆ ಚಿಕಿತ್ಸೆಗೆ ಸ್ಪಂದಿಸದೆ 2,020 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries