HEALTH TIPS

ಚಕ್ರದಲ್ಲಿ ದೋಷ: ಟೇಬಲ್‌ ಟಾಪ್‌ ಕೋಯಿಕ್ಕೋಡ್‌ ಬದಲು ಕೊಚ್ಚಿಯಲ್ಲಿ ಇಳಿದ ವಿಮಾನ

             ಕೊಚ್ಚಿ: ರಿಯಾದ್‌ನಿಂದ ಕೋಯಿಕ್ಕೋಡ್‌ಗೆ ಬರುತಿದ್ದ 'ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌' ವಿಮಾನವೊಂದು ಭಾನುವಾರ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

         ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಐಎಕ್ಸ್‌ 1322 ವಿಮಾನವು ಭಾನುವಾರ ಬೆಳಿಗ್ಗೆ 3.16ಕ್ಕೆ ಭೂ ಸ್ಪರ್ಶ ಮಾಡಿದ್ದು, ಇದರಲ್ಲಿ 180 ಪ್ರಯಾಣಿಕರು ಇದ್ದರು. ಅವರೆಲ್ಲ ಅಪಾಯದಿಂದ ಪಾರಾಗಿದ್ದಾರೆ.

'ವಿಮಾನದ ಚಕ್ರವೊಂದರಲ್ಲಿ ದೋಷವನ್ನು ಗಮನಿಸಿದ ಪೈಲೆಟ್‌ ಕೋಯಿಕ್ಕೋಡ್‌ ಬದಲಾಗಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಇಳಿಸಿದ್ದಾರೆ. ವಿಮಾನದಿಂದ ಪ್ರಯಾಣಿಕರು ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಚಕ್ರ ಸ್ಫೋಟಿಸಿದೆ' ಎಂದು ಅಧಿಕಾರಿಗಳು ತಿಳಿಸಿದರು.

      ಕೋಯಿಕ್ಕೋಡ್‌ ವಿಮಾನ ನಿಲ್ದಾಣದ ರನ್‌ವೇ 'ಟೇಬಲ್‌ ಟಾಪ್‌' ಸ್ವರೂಪದ್ದಾಗಿದೆ. ಈ ರನ್‌ವೇ ಅತಿ ಕಡಿಮೆ ಜಾಗವನ್ನು ಹೊಂದಿದೆ. ಹಾಗಾಗಿ ಚಕ್ರದಲ್ಲಿ ದೋಷವನ್ನು ಗಮಿಸಿದ ಪೈಲೆಟ್‌, ಸುರಕ್ಷತೆಯ ದೃಷ್ಟಿಯಿಂದ ವಿಮಾನವನ್ನು ಕೋಯಿಕ್ಕೋಡ್‌ ಬದಲಿಗೆ ಕೊಚ್ಚಿಯಲ್ಲಿ ಇಳಿಸಿದರು.

ಬೆಟ್ಟವೊಂದನ್ನು ಕಡಿದು ಸಮತಟ್ಟುಗೊಳಿಸಿ ನಿರ್ಮಿಸುವ ರನ್‌ವೇಯನ್ನು ಟೇಬಲ್‌ ಟಾಪ್‌ ರನ್‌ವೇ ಎನ್ನುತ್ತಾರೆ.

       ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಕೇರಳದ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries