ಕುಂಬಳೆ: ಇಲ್ಲಗಳ ಅಗರವಾಗಿರುವ ಮಂಜೇಶ್ವರವನ್ನು ಮಾದರಿ ಕ್ಷೇತ್ರವನ್ನಾಗಿಸಿ ಸಮಗ್ರ ಅಭಿವೃದ್ಧಿಮಾಡುವುದೇ ನನ್ನ ಸಂಕಲ್ಪ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಹೇಳಿದರು.
ಕುಂಬಳೆ ಪೇಟೆಯಲ್ಲಿ ಬಿಜೆಪಿ ಪ್ರಚಾರ ಅಭಿಯಾನ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಎಡರಂಗ ಕೇರಳ ವನ್ನು ವಂಚನೆಯ ಕೇಂದ್ರವನ್ನಾಗಿಸಿದರೆ ಮುಸ್ಲಿಂ ಲೀಗ್ ಮಂಜೇಶ್ವರ ವನ್ನು ವಂಚನೆಯ ಕೇಂದ್ರ ವನ್ನಾಗಿಸಿದೆ. ಕಮರುದ್ದೀನ್ ಮತ್ತು ಪಿಣÀರಾಯಿ ಒಂದೇ ನಾಣ್ಯದ ಎರಡೂ ಮುಖಗಳು. 40 ವರ್ಷಗಳ ಕಾಲ ಗೆದ್ದವರು ಏನು ಅಭಿವೃದ್ಧಿ ಮಾಡಿಲ್ಲ. ತಾಲೂಕು ಕಚೇರಿ ಖಾಸಗಿ ಕಟ್ಟಡದ 3 ಮಹಡಿಯಲ್ಲಿ ಮಾಡಿದಗಲೇ ಮುಸ್ಲೀಂ ಲೀಗ್ ನ ಮೋಸ ತಿಳಿಯಬೇಕಿತ್ತು. ಚುನಾವಣೆಯಲ್ಲಿ ಬಿಜೆಪಿ ಯನ್ನು ಗೆಲ್ಲಿಸಿ ಕೇಂದ್ರ ಸರಕಾರದ ಎಲ್ಲ ಯೋಜನೆ, ಜಾರಿಮಾಡಲಾಗುವುದು. ಆಯುಷ್ಮಾನ್ ಯೋಜನೆ ಪ್ರತಿ ಕುಟುಂಬಗಳನ್ನು ಸೇರಿಸಲಾಗುವುದು ಎಂದು ಹೇಳಿದರು.
ಪಕ್ಷದ ಹಿರಿಯ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.



