ಕಾಸರಗೋಡು : ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ತಪಾಸಣೆ ಚುರುಕುಗೊಳಿಸಲು ನಿರ್ಧರಿಸಲಾಗಿದೆ. ನಿಯಂತ್ರಣ ಸಂಬಂಧ ಕಟ್ಟುನಿಟ್ಟು ಬಿಗಿಗೊಳಿಸಲಾಗುವುದು, ಬಸ್ ನಿಲ್ದಾಣ, ರೈಲು ನಿಲ್ದಾಣ ಇತ್ಯಾದಿ ಕಡೆ ವಾಕ್ಸಿನೇಷನ್ ಗೆ ಪ್ರತ್ಯೇಕ ಸೌಲಭ್ಯ ಏರ್ಪಡಿಸಲಾಗುವುದು.
ಕಾಸರಗೋಡು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ಧರು.
ಸೆಕ್ಟರಲ್ ಮೆಜಿಸ್ಟ್ರೇಟ್ ಗಳ ಚಟುವಟಿಕೆ ಚುರುಕುಗೊಳಿಸಲಾಗುವುದು. ಎಲ್ಲರೂ ಮಾಸ್ಕ್ ಧರಿಸಬೇಕು, ಸಾನಿಟೈಸರ್ ಆಗಾಗ ಬಳಸಬೇಕು, ಗುಂಪು ಸೇರಕೂಡದು ಇತ್ಯಾದಿ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಕಾಸರಗೋಡು ಜಿಲ್ಲೆಯಲ್ಲಿ ತ್ರಿಕ್ಕರಿಪುರ, ಚೆರುವತ್ತೂರು, ನೀಲೇಶ್ವರ, ಕಾಞಂಗಾಡು, ಅಜಾನೂರು, ಪಳ್ಳಿಕ್ಕರೆ, ಚೆಮ್ನಾಡ್, ಚೆಂಗಳ ವಲಯಗಳಲ್ಲಿ ಅತ್ಯಧಿಕ ಸಂಖ್ಯೆಯ ರೋಗಿಗಳಿದ್ದಾರೆ. ಈ ಬಗ್ಗೆ ಸಭೆ ಅವಲೋಕನ ನಡೆಸಿದೆ.
ಗುರುವಾರದಿಂದ ಕಟ್ಟುನಿಟ್ಟು ಬಿಗಿಗೊಳಿಸಲು ಪೆÇಲೀಸರಿಗೆ ಸಭೆ ಆದೇಶ ನೀಡಿದೆ. ವಾಹನಗಳಲ್ಲಿ ಸಂಚರಿಸುವ ವೇಳೆ, ಸಮಾರಮಭ ನಡೆಸುವ ವೇಳೆ ಕಡ್ಡಾಯವಾಗಿ ಸಂಹಿತೆ ಪಾಲಿಸಬೇಕು. ಮಕ್ಕಳು ಗುಂಪು ಸೇರಿ ಫುಟ್ ಬಾಲ್ ಸಹಿತ ಆಟದಲ್ಲಿ ನಿರತವಾಗುವುದು ರೋಗ ಹೆಚ್ಚಳಕ್ಕೆ ಕಾರಣವಾಗಲಿದೆ.
ಜಿಲ್ಲೆಯಲ್ಲಿ ಕೋವಿಡ್ ತಪಾಸಣೆ ಹೆಚ್ಚಳಗೊಳಿಸಲಾಗುವುದು. ಚುನಾವಣೆ ವೇಳೆ ಸಕ್ರಿಯವಾಗಿ ಪ್ರಚಾರ ಇತ್ಯಾದಿ ಚಟುವಟಿಕೆಗಳಲ್ಲಿ ಬಾಗವಹಿಸಿದವರು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಪೆÇೀಲಿಂಗ್ ಏಜೆಂಟರು ಮೊದಲಾದವರು ತಪಾಸಣೆಗೆ ಒಳಗಾಗಬೇಕು ಮತ್ತು ಸ್ವಯಂ ನಿಗಾ ಪ್ರವೇಶಿಸಬೇಕು ಎಂದು ಜಿಲ್ಲಾಧಿಕಾರಿ ವಿನಂತಿಸಿದರು.
ವಾಕ್ಸಿನೇಷನ್ ಅಧಿಕಗೊಳಿಸುವ ನಿಟ್ಟಿನಲ್ಲಿ ರೈಲು ನಿಲ್ದಾಣ, ಬಸ್ ನಿಲ್ದಾಣ ಇತ್ಯಾದಿ ಕಡೆ ಪ್ರತ್ಯೇಕ ಸೌಲಭ್ಯ ಏರ್ಪಡಿಸಲಾಗುವುದು. ವ್ಯಾಪಾರಿಗಳು, ಸಿಬ್ಬಂದಿ , ಸಾರ್ವಜನಿಕ ಸಂಚಾರ ಸಿಬ್ಬಂದಿ ಮೊದಲಾದವರು ಆರ್.ಟಿ.ಪಿ.ಸಿ. ತಪಾಸಣೆಗೆ ಒಳಗಾಗಬೇಕು.
ತಳ್ಳುಗಾಡಿಗಳ ನಿಯಂತ್ರಣ ಇನ್ನೂ ಮುಂದುವರಿಯಲಿದೆ. ಅಲ್ಲಿ ಕುಳಿತು ಆಹಾರ ಸೇವನೆಗೆ ಅನುಮತಿಯಿಲ್ಲ. ಪಾರ್ಸೆಲ್ ವಿತರಣೆ ಮಾತ್ರ ನಡೆಸಬೇಕು. ತಳ್ಳುಗಾಡಿಗಳ ಸಹಿತ ಎಲ್ಲ ಸಂಸ್ಥೆಗಳಲ್ಲೂ ಸಿಬ್ಬಂದಿ ಮಾಸ್ಕ್, ಗ್ಲೌಸ್ ಧರಿಸಬೇಕು. ಈ ಬಗ್ಗೆ ಸೆಕ್ಟರಲ್ ಮೆಜಿಸ್ಟ್ರೇಟ್ ಗಳು, ಪೆÇಲೀಸರು ಖಚಿತತೆ ಮೂಡಿಸಬೇಕು. ಆದೇಶ ಉಲ್ಲಂಘಿಸುವವರ ವಿರುದ್ಧ ಕೇಸು ದಾಖಲಿಸಿ, ದಂಡ ವಸೂಲಿ ಮಾಡಬೇಕು ಎಂದು ಸಭೆ ತಿಳಿಸಿದೆ.
ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಮತ್ತು ಶಿಕ್ಷಕರನ್ನು ಕೋವಿಡ್ ತಪಾಸಣೆಗೆ ಒಳಪಡಸಲಾಗುವುದು. 45 ವರ್ಷ ಪ್ರಾಯಕ್ಕಿಂತ ಅಧಿಕ ವಯೋಮಾನದ ಮಂದಿ ವಾಕ್ಸಿನ್ ಪಡೆಯಬೇಕು. ಆರೋಗ್ಯ ಇಲಾಖೆಯಲ್ಲಿ ತಾತ್ಕಾಲಿಕ ಕ್ರಮದಲ್ಲಿ ದಾದಿಯರ ನೇಮಕಾತಿ ನಡೆಸಲಾಗುವುದು ಎಂದು ಸಭೆ ತಿಳಿಸಿದೆ.





