HEALTH TIPS

ಪಾಕ್ ನಿಂದ ಹಾರಿಬಂದ ಪಾರಿವಾಳದ ವಿರುದ್ಧ ಎಫ್ ಐಆರ್ ದಾಖಲಿಸಲು ಬಿಎಸ್‌ಎಫ್ ಒತ್ತಾಯ!

             ಅಮೃತಸರ: ಪಾಕಿಸ್ತಾನದಿಂದ ವಿಚಿತ್ರ ಆಗಂತುಕನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಗಡಿ ಭದ್ರತಾ ಪಡೆ ಬಿಎಸ್ ಎಫ್ ಒತ್ತಾಯ ಮಾಡುತ್ತಿದೆ.

         ಹೌದು.. ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಒಳನುಸುಳವವರನ್ನು ಹಿಡಿದು ಪ್ರಕರಣ ದಾಖಲಿಸುವುದು ಬಿಎಸ್ ಎಫ್ ಕೆಲಸ... ಆದರೆ ಈ ಬಾರಿ ಗಡಿ ಭದ್ರತಾ ಪಡೆ ವಿಚಿತ್ರ ಆಗಂತುಕನನ್ನು ಬಂಧಿಸಿದ್ದು, ಆ ಆಗಂತುಕ ಬೇರಾರು ಅಲ್ಲ.. ಪಾರಿವಾಳ... ಪಾಕಿಸ್ತಾನದಿಂದ ಭಾರತದೊಳಗೆ ಹಾರಿ ಬಂದಿರುವ ಪಾರಿವಾಳದ ವಿರುದ್ಧ ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ ಎಫ್ ಐಆರ್ ದಾಖಲಿಸುವಂತೆ ಬಿಎಸ್ ಎಫ್ ಅಧಿಕಾರಿಗಳು ಒತ್ತಾಯಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪಂಜಾಬ್ ಪೊಲೀಸ್ ಇಲಾಖೆಯ ಅಭಿಪ್ರಾಯ ಕೋರಿದ್ದಾರೆ.

            ಕಳೆದ ಶನಿವಾರ ಇಲ್ಲಿನ ರೊರಾವಾಲಾ ಪೋಸ್ಟ್‌ನಲ್ಲಿರುವ ಗಡಿ ಭದ್ರತಾ ಪಡೆಯ ಜವಾನನ ಭುಜದ ಮೇಲೆ ಶಂಕಿತ ಪಾರಿವಾಳವೊಂದು ತಾನೇ ತಾನಾಗಿ ಬಂದು ಕೂತಿದೆ. ಈ ಪಾರಿವಾಳದ ಕಾಲಿನಲ್ಲಿ ಸಣ್ಣ ಪೇಪರ್ ತುಂಡನ್ನು ಕಟ್ಟಲಾಗಿತ್ತು. ಈ ಪೇಪರ್ ನಲ್ಲಿ ಕೆಲ ಸಂಪರ್ಕ ಸಂಖ್ಯೆಗಳನ್ನು ನಮೂದಿಸಲಾಗಿತ್ತು. ಈ ಪಾರಿವಾಳ ಗಡಿಯುದ್ದಕ್ಕೂ ಹಾರಾಟ ನಡೆಸಿತ್ತು. ಹೀಗಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಎಸ್‌ಎಫ್ ಸಿಬ್ಬಂದಿ ಲಿಖಿತ ಬೇಡಿಕೆಯೊಂದಿಗೆ ಪಕ್ಷಿಯನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

            ಈ ಕುರಿತು ಮಾತನಾಡಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಧ್ರುವ್ ದಹಿಯಾ ಅವರು ಮಾತನಾಡಿ, ಬಿಎಸ್‌ಎಫ್ ಪಾರಿವಾಳದ ವಿರುದ್ಧ ಎಫ್‌ಐಆರ್ ನೋಂದಾಯಿಸಲು ಒತ್ತಾಯಿಸಲಾಗಿದೆ. ಪಾರಿವಾಳವು ಪಕ್ಷಿಯಾಗಿರುವುದರಿಂದ, ಅದರ ವಿರುದ್ಧ ಎಫ್‌ಐಆರ್ ದಾಖಲಿಸಬಹುದು ಎಂದು ನಾನು ಭಾವಿಸುವುದಿಲ್ಲ. ಆದರೆ ಅವರ ಅಭಿಪ್ರಾಯಕ್ಕಾಗಿ ನಾವು ಈ ವಿಷಯವನ್ನು ನಮ್ಮ ಕಾನೂನು ತಜ್ಞರಿಗೆ ಹಸ್ತಾಂತರಿಸಿದ್ದೇವೆ ಎಂದು ಅವರು ಬುಧವಾರ ಹೇಳಿದರು. ಪಾರಿವಾಳದ ಕಾಲಿಗೆ ಟ್ಯಾಗ್ ಮಾಡಲಾದ ಸಂಖ್ಯೆಯನ್ನು ವಿಶ್ಲೇಷಿಸಲಾಗುತ್ತಿದ್ದು, ಗೂಢಚರ್ಯೆ ಯತ್ನಗಳನ್ನು ಶಂಕಿಸಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿ ಪಾರಿವಾಳಗಳನ್ನು "ಸೆರೆಹಿಡಿಯಲಾಗಿದೆ" ಎಂದು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries