HEALTH TIPS

ಮಂಗಳೂರಿನಲ್ಲಿ ಮಾಸ್ಕ್ ಕಾರ್ಯಾಚರಣೆ ವೇಳೆ ಮಹಿಳೆ ರಂಪಾಟ-ಅಧಿಕಾರಿಗಳು ತಬ್ಬಿಬ್ಬು

               ಮಂಗಳೂರು: ಮಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಮಂಗಳೂರು ನಗರದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಪೊಲೀಸರು ಮಾಸ್ಕ್ ಹಾಕದವರ ವಿರುದ್ಧ ಜಂಟಿ ಕಾರ್ಯಾಚರಣೆ ಮಾಡುತ್ತಿದ್ದಾರೆ.

          ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ನಗರದ ಕೆ ಎಸ್ ರಾವ್ ರೋಡ್‌ನಲ್ಲಿ ಕಾರ್ಯಾಚರಣೆ ಮಾಡುತ್ತಿರುವ ವೇಳೆಯಲ್ಲಿ ಮಹಿಳೆಯೋರ್ವಳು ಅಧಿಕಾರಿಗಳ ಜೊತೆ ಅನುಚಿತ ವರ್ತನೆ ತೋರಿದ ಘಟನೆ ನಡೆಯಿತು.

          ಮಾಸ್ಕ್ ಹಾಕದೆ ತಿರುಗಾಡುತ್ತಿದ್ದ ಮಹಿಳೆಯನ್ನು ತಡೆದ ಸಂದರ್ಭದಲ್ಲಿ ಮಹಿಳೆ ಅಧಿಕಾರಿಗಳ ವಿರುದ್ಧವೇ ರೇಗಾಡಿದ್ದಾಳೆ. ಕೊರೊನಾ ನನಗೆ ಏನೂ ಮಾಡೋದಿಲ್ಲ. 2017ರಲ್ಲಿ ನಾನು ಯಮನಿಗೆ ಹೊಡೆದು ಬಂದಿದ್ದೇನೆ. ಯಮನಿಗೂ ನನಗೆ ಏನೂ ಮಾಡೋಕೆ ಸಾಧ್ಯವಿಲ್ಲ.

          ಕೊರೊನಾವನ್ನು ನ್ಯೂಸ್‌ಚಾನೆಲ್‌ರವರು ಪ್ರಶ್ನೆ ಮಾಡಬೇಕು. ಪ್ರಶ್ನೆ ಮಾಡಿದರೆ ಕೊರೊನಾ ಡಸ್ಟ್‌ಬೀನ್‌ಗೆ ಬಂದು ಬೀಳುತ್ತದೆ.ಇಲ್ಲದಿದ್ದರೆ ಕೊರೊನಾ ವೈರಸ್ ಹೋಗೋದಿಲ್ಲ. ವೈರಸ್ ಸೃಷ್ಟಿ ಮಾಡಿದ ಥರ್ಡ್ ಕ್ಲಾಸ್ ಯಾರವನು ಅಂತಾ ನಡು ಬೀದಿಯಲ್ಲೇ ರಂಪಾಟ ಮಾಡಿದ್ದಾಳೆ. ಮಹಿಳೆಯ ವರ್ತನೆ ಕಂಡು ಅಧಿಕಾರಿಗಳೇ ಒಂದು ಕ್ಷಣ ದಂಗಾಗಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries