ತಿರುವನಂತಪುರ: ರಾಜ್ಯದಲ್ಲಿ ಪಡಿತರ ಅಂಗಡಿಗಳ ಕಾರ್ಯಚಟುವಟಿಕೆಗಳ ಸಮಯದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಇಂದಿನಿಂದ, ಪಡಿತರ ಅಂಗಡಿಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಅಪರಾಹ್ನ 2 ರಿಂದ ಸಂಜೆ 5 ರವರೆಗೆ ತೆರೆದಿರುತ್ತವೆ. ಕೊರೋನಾ ಪ್ರಸರಣ ತೀವ್ರಗೊಳ್ಳುತ್ತಿದ್ದಂತೆ ಇಂತಹ ಕ್ರಮ ಕೈಗೊಳ್ಳಲಾಗಿದೆ.
ಇದೇ ವೇಳೆ ಕಂಟೋನ್ಮೆಂಟ್ ವಲಯಗಳಲ್ಲಿನ ಪಡಿತರ ಅಂಗಡಿಗಳ ವೇಳಾಪಟ್ಟಿ ವಿಭಿನ್ನವಾಗಿರುತ್ತದೆ. ಜಿಲ್ಲಾಧಿಕಾರಿ ಸೂಚಿಸಿದಾಗ ಮಾತ್ರ ಪಡಿತರ ಅಂಗಡಿಗಳನ್ನು ನಿರ್ವಹಿಸಲು ಅವಕಾಶವಿದೆ.
ರಾಜ್ಯದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ತೀವ್ರಗೊಳ್ಳುತ್ತಿದೆ. ಈ ಮೊದಲು, ಸೋಂಕು ಹರಡುವಿಕೆಯ ದೃಷ್ಟಿಯಿಂದ ಬ್ಯಾಂಕು ಗಳ ಕಾರ್ಯಾಚರಣೆಯ ಸಮಯವನ್ನು ಬದಲಾಯಿಸಲಾಗಿತ್ತು. ಕೇರಳದಲ್ಲಿ ಭಾನುವಾರ 28,469 ಕೊರೊನಾ ಪ್ರಕರಣಗಳನ್ನು ದೃಢಪಡಿಸಲಾಗಿತ್ತು.





