ತಿರುವನಂತಪುರ: ಅನೇಕರು ಈಗಾಗಲೇ ಕೋವಿಡ್ ಪರೀಕ್ಷೆಗಳನ್ನು ಮಾಡಿರುತ್ತಾರೆ. ಆದರೆ ಹೆಚ್ಚಿನವರ ದೂರುಗಳೆಂದರೆ ಪರೀಕ್ಷಾ ವರದಿ ಕೈಸೇರುತ್ತಿಲ್ಲ. ಅಧಿಕೃತರು ಅಸಡ್ಡೆ ವಹಿಸುತ್ತಾರೆ ಎಂಬ ಅಭಿಪ್ರಾಯಗಳಾಗಿವೆ. ಆದರೆ ಕೋವಿಡ್ ಲಸಿಕೆಯ ನೋಂದಣಿ ಸಂಪೂರ್ಣವಾಗಿ ಆನ್‍ಲೈನ್‍ನಲ್ಲಿರುವಂತೆಯೇ, ಕೋವಿಡ್ ಪರೀಕ್ಷಾ ಫಲಿತಾಂಶವು ಆನ್‍ಲೈನ್‍ನಲ್ಲಿ ಲಭ್ಯವಿದೆ. ಇದನ್ನು ತಿಳಿಯಲು ಏನು ಮಾಡಬೇಕು ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಫೇಸ್ ಬುಕ್‍ನಲ್ಲಿ ವಿವರಿಸಿದ್ದಾರೆ.
ನೀವು ವೆಬ್‍ಸೈಟ್ ಮೂಲಕ ಕೋವಿಡ್ ಪರೀಕ್ಷಾ ಫಲಿತಾಂಶವನ್ನು ಡೌನ್‍ಲೋಡ್ ವiಡಬಹುದಾಗಿದೆ. ಹೇಗೆಂದರೆ.......
1. http://labsys.health.kerala.gov.in/Welcome/index ಗೆ ಭೇಟಿ ನೀಡಿ
2. Download Test Report’ ಲಿಂಕ್ ಅನ್ನು ಕ್ಲಿಕ್ ಮಾಡಿ.
3. ಪರೀಕ್ಷೆಯ ಸಮಯದಲ್ಲಿ ಪಡೆದ ‘SRF ID’, ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ನಮೂದಿಸಿ.
4. SRF ID ಗೊತ್ತಿಲ್ಲದವರಿಗೆ, ‘Know Your SRF ID ತಿಳಿಯಿರಿ’ ಲಿಂಕ್ ಕ್ಲಿಕ್ ಮಾಡಿ. ತಪಾಸಣೆ ನಂತರ
ದಿನಾಂಕ, ಜಿಲ್ಲೆ, ಹೆಸರು ಮತ್ತು ಮೊಬೈಲ್ ಸಂಖ್ಯೆಯೊಂದಿಗೆ SRF ID
ನಮೂದಿಸಿ. ಈಗ ಪರೀಕ್ಷಾ ಫಲಿತಾಂಶಗಳನ್ನು ಡೌನ್‍ಲೋಡ್ ಮಾಡಬಹುದು ಮತ್ತು ಸಂಗ್ರಹಿಸಬಹುದು.





