HEALTH TIPS

ಅವಳಿ ಮತ: ಚೆನ್ನಿತ್ತಲ ವಿರುದ್ಧ ಕಾನೂನು ಕ್ರಮ ಕೈಗೊಂಡ ಅವಳಿ ಜವಳಿಗಳು

            ತಿರುವನಂತಪುರಂ: ಮತ ಪಟ್ಟಿಯಲ್ಲಿ(ಓಟರ್ಸ್ ಲೀಸ್ಟ್) ವಂಚನೆಗಳಿವೆ ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಎತ್ತಿರುವ ವಿವಾದದ ಬೆನ್ನಲ್ಲೇ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಿದ್ದು, ಈ ಮಧ್ಯೆ ಚೆನ್ನಿತ್ತಲ ವಿರುದ್ದ ಅವಳಿ ಜವಳಿಗಳು ದೂರು ನೀಡಿದ್ದಾರೆ. ಚೆನ್ನಿತ್ತಲ  ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಅವಳಿ ಸಹೋದರರು ಕೂಡ ಇದ್ದಾರೆ. ಒಟ್ಟಪಾಲಂ ಕ್ಷೇತ್ರದ 135 ನೇ ಬೂತ್‍ನಲ್ಲಿರುವ ತೊಟ್ಟಕ್ಕರ ತೆಕ್ಕಂಕಡ್ ಮನೆಯ ಅವಳಿ ಸಹೋದರರಾದ ಅರುಣ್ ಮತ್ತು ವರುಣ್ ಈ ಪಟ್ಟಿಯಲ್ಲಿ ಎರಡು ಮತUಳಿರುವ ಮತದಾರರಾಗಿದ್ದಾರೆ. 


            ಚೆನ್ನಿತ್ತಲ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹೋದರರಲ್ಲಿ ಒಬ್ಬರಾದ ಅರುಣ್ ಹೇಳಿದ್ದಾರೆ. ಪ್ರತಿಪಕ್ಷದ ನಾಯಕರ ಕ್ರಮವು ಮಾನಹಾನಿಕರವಾಗಿದೆ ಮತ್ತು ಅವರು ವೈಯಕ್ತಿಕ ನಿಂದನೆಗೆ ಬಲಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆಪರೇಷನ್ ಟ್ವಿನ್ಸ್ ವೆಬ್‍ಸೈಟ್ ಮೊನ್ನೆ ಬಿಡುಗಡೆ ಮಾಡಿದ ಉಭಯ ಮತ ಪಟ್ಟಿಯಲ್ಲಿ ಚೆನ್ನಿತ್ತಲ ಅವರ ಹೆಸರೂ ಇದೆ.

            ರಾಜ್ಯದಲ್ಲಿ   430,000 ದ್ವಿಗುಣ ಮತಗಳಿವೆ ಎಂದು ಚೆನ್ನಿತ್ತಲ ಚುನಾವಣಾ ಆಯೋಗ ಮತ್ತು ಹೈಕೋರ್ಟ್‍ಗೆ ತಿಳಿಸಿದ್ದರು. ಜೊತೆಗೆ, ಚುನಾವಣಾ ಆಯೋಗದ ಅಂಕಿಅಂಶಗಳನ್ನು ಹೈಕೋರ್ಟ್ ಒಪ್ಪಿಕೊಂಡಿತು. ಇದರ ಬೆನ್ನಲ್ಲೇ ರಮೇಶ್ ಚೆನ್ನಿತ್ತಲ ಆಪರೇಷನ್ ಟ್ವಿನ್ಸ್ ಎಂಬ ವೆಬ್‍ಸೈಟ್ ಪ್ರಾರಂಭಿಸಿ ನಾಲ್ಕು ಲಕ್ಷಕ್ಕೂ ಹೆಚ್ಚು ದ್ವಿ ಮತಗಳನ್ನು ಬಿಡುಗಡೆ ಮಾಡಿದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries