HEALTH TIPS

ದಾದಿ ಜಾನಕಿ ಸಂಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ

         ನವದೆಹಲಿ:  ಬ್ರಹ್ಮ ಕುಮಾರಿಯವರು ವಿಶ್ವಾದ್ಯಂತ ಇಂದು ನಡೆಸುತ್ತಿರುವ ಆಧ್ಯಾತ್ಮಿಕ ಆಂದೋಲನದ ನೇತೃತ್ವವನ್ನು ಮಹಿಳೆಯರೇ ವಹಿಸಿಕೊಂಡಿರುವುದು ಮಹಿಳೆಯರ ಸ್ವಾತಂತ್ರ್ಯ ಮತ್ತು ಸಶಕ್ತೀಕರಣದ ಪ್ರತೀಕವಾಗಿದೆ. ಲಿಂಗ ಅಸಮಾನತೆಗಳನ್ನು ಮೀರಿ ಆತ್ಮ ವಿಶ್ವಾಸದ ಜೀವನ ನಡೆಸಲು ಆಧ್ಯಾತ್ಮಿಕ ಜ್ಞಾನದ ಅವಶ್ಯಕತೆ ಇದೆ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ದು ಅಭಿಪ್ರಾಯಪಟ್ಟರು.

           ಅವರು ಈಶ್ವರೀಯ ವಿಶ್ವ ವಿದ್ಯಾಲಯದ ಪೂರ್ವ ಮುಖ್ಯಸ್ಥರಾದ ದಾದಿ ಜಾನಕಿಜಿರವರ ಸಂಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

       ಪ್ರಾಚೀನ ಕಾಲದಿಂದಲೂ ನಾರಿಯರನ್ನು ಶಕ್ತಿಯ ರೂಪದಲ್ಲಿ ಆರಾಧಿಸಲಾಗುತ್ತಿದೆ. ಸಮಾಜದಲ್ಲಿ ಮಹಿಳೆಯರ ವಿರುದ್ಧ ವ್ಯಾಪ್ತ ಭೇದಭಾವವು ಸಮಾಜದ ನೈತಿಕ ಮೌಲ್ಯಗಳ ಪತನವನ್ನು ಸೂಚಿಸುತ್ತದೆ. ಇದಕ್ಕೆ ನಾವು ಪರಿವರ್ತನೆ ಮಾಡಲು ಮಹಿಳೆಯರಿಗೆ ಸೂಕ್ತ ಗೌರವ ಮತ್ತು ಪ್ರಾತಿನಿಧ್ಯಗಳನ್ನು ನೀಡಬೇಕಿದೆ.

       ಈ ದಿಸೆಯಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯ ಕೈಗೊಂಡಿರುವ ಸೇವಾ ಕಾರ್ಯಗಳು ಶ್ಲಾಘನೀಯ ಎಂದರು. 2019ರಲ್ಲಿ ಅಬುಪರ್ವತದಲ್ಲಿ ದಾದಿ ಜಾನಕೀಜಿ ಆಧುನಿಕ ಸಮಾಜದ ಒಂದು ವಿಸ್ಮಯವೇ ಸರಿ. ಅವರು ಇಡೀ ವಿಶ್ವಕ್ಕೆ ಮಾರ್ಗದರ್ಶನ ನೀಡುವ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರಾಗಿದ್ದರು. ಅವರ ನಡೆ ಮತ್ತು ನುಡಿಗಳು ನೇರವಾಗಿರುತ್ತಿದ್ದವು.

        ಬ್ರಹ್ಮಕುಮಾರಿಯವರ ಜೀವನ ದರ್ಶನ ಮತ್ತು ಮೌಲ್ಯಗಳ ಪ್ರತಿಬಿಂಬವಾಗಿದೆ ಎಂದು ಹೇಳಿದರು. ಇಂದು ನಾವೆಲ್ಲ ಸೇರಿ ಲಿಂಗ ಭೇದ, ಜಾತಿ ವಾದ ಹಾಗೂ ಸಾಂಪ್ರದಾಯಿಕತೆಯ ವಿರುದ್ಧ ಹೋರಾಟ ನಡೆಸಿ ಸೌಹಾರ್ದತೆ ಮತ್ತು ಸಮಾನತೆಯ ಹೊಸ ಭಾರತವನ್ನು ನಿರ್ಮಿಸಬೇಕು ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries