ಕಾಸರಗೋಡು: ರಾಷ್ಟ್ರೀಯ ಮಟ್ಟದಲ್ಲಿರುವ ಎನ್.ಎಸ್.ಕ್ಯೂ.ಎಫ್.ಆಂಡ್ ಎನ್.ಸಿ.ವಿ.ಇ.ಟಿ ಅಂಗೀಕಾರ ಹೊಂದಿರುವ ಕಮ್ಯುನಿಕೇಟಿವ್ ಇಂಗ್ಲಿಷ್ ಟೈನರ್ (ಸಿ.ಇ.ಟಿ.) ಆಗಲು ತರಬೇತಿ ಅಸಾಪ್ ಕೇರಳ ಅವಕಾಶ ಒದಗಿಸುತ್ತಿದೆ.
ನ್ಯಾಷನಲ್ ಕ್ವಾಲಿಫಿಕೇಶನ್ ರೆಜಿಸ್ಟರ್ ಪ್ರಕಾರದ ನ್ಯಾಷನಲ್ ಸ್ಕಿಲ್ ಕ್ವಾಲಿಟಿ ಫ್ರೇಂ ವರ್ಕ್ ಲೆವೆಲ್ ಕೋರ್ಸ್ ಮೂಲಕ ತರಬೇತಿ ನಡೆಯಲಿದೆ. ಶೇ 60 ಪ್ರಾಕ್ಟಿಕಲ್ ತರಬೇತಿ ಸಹಿತ 156 ತಾಸುಗಳ ತರಬೇತಿ ಏಪ್ರಿಲ್ ತಿಂಗಳ ಅರ್ಧದ ಅವಧಿಯಲ್ಲಿ ಆರಂಭಗೊಳ್ಳಲಿದೆ. ಕಾಸರಗೋಡು ಜಿಲ್ಲೆಯ ಅಸಾಪ್ ನ ಕಮ್ಯುನಿಟಿ ಸ್ಕಿಲ್ ಪಾರ್ಕ್ ನಲ್ಲಿ ಆಫ್ ಲೈನ್ ಮಾದರಿಯಲ್ಲಿ ತರಬೇತಿ ನಡೆಯಲಿದೆ.
ಕಮ್ಯುನಿಕೇಟಿವ್ ಇಂಗ್ಲಿಷ್, ಐ.ಟಿ., ಸಾಫ್ಟ್ ಸ್ಕಿಲ್ಸ್, ಎಂಪ್ಲಾಯಿಬಿಲಿಟಿ, ಲೀಡರ್ ಶಿಪ್ ಆಂಡ್ ಟೀಂ ಬಿಲ್ಡಿಂಗ್ ಇತ್ಯಾದಿ ಹಂತಗಳಲ್ಲಿ ತರಬೇತಿ ನಡೆಯಲಿದೆ. ಪೆÇ್ರಫೆಷನಲ್ ಸರ್ಟಿಫಿಕೇಷನ್ ಸಹಿತ ಅತ್ಯುತ್ತಮ ಕಮ್ಯುನಿಕೇಟಿವ್ ಇಂಗ್ಲಿಷ್ / ಸಾಫ್ಟ್ ಸ್ಕಿಲ್/ ಎಂಪ್ಲಾಯಿಬಿಲಿಟಿ ತರಬೇತುದಾರರಾಗಲು ಮತ್ತಿತರ ಪೆÇ್ರಫೆಷನಲ್ ಗಳಿಗೆ ನೌಕರಿ ವಲಯದಲ್ಲಿ ಅತ್ಯುತ್ತಮ ಪೆÇ್ರಫೆಷನಲ್ಸ್ ಗೆ ಇಂಗ್ಲಿಷ್ ಭಾಷೆ ನೈಪುಣ್ಯ ಕ್ಕೆ ಇದು ಸಹಕಾರಿಯಾಗಲಿದೆ. ತರಬೇತಿಗೆ ಸೇರ್ಪಡೆಗೆ ಪದವಿ ಮೂಲಭೂತ ಶಿಕ್ಷಣಾರ್ಹತೆಯಾಗಿದೆ.http://asapkerala.gov.in/?q=




