HEALTH TIPS

12 ವರ್ಷ ಮೇಲ್ಪಟ್ಟವರಿಗೂ ಫೈಜರ್ ಲಸಿಕೆ: ಅಮೆರಿಕದಿಂದ ಶೀಘ್ರ ಅನುಮತಿ ನಿರೀಕ್ಷೆ

           ವಾಷಿಂಗ್ಟನ್: 12 ವರ್ಷ ಮೇಲ್ಪಟ್ಟ ಎಲ್ಲರಿಗೂ ಫೈಜರ್-ಬಯೊಎನ್‌ಟೆಕ್ ಲಸಿಕೆ ನೀಡಲು ಅಮೆರಿಕವು ಮುಂದಿನ ವಾರ ಅನುಮತಿ ನೀಡುವ ನಿರೀಕ್ಷೆ ಇದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.

         12-15 ವರ್ಷ ವಯಸ್ಸಿನವರಿಗೂ ಕೋವಿಡ್ ಲಸಿಕೆ ನೀಡಲು ಅನುಮತಿ ನೀಡುವಂತೆ ಫೈಜರ್-ಬಯೊಎನ್‌ಟೆಕ್ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು ಎಂದು ಸರ್ಕಾರಿ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ 'ಸಿಎನ್‌ಎನ್‌' ವರದಿ ಮಾಡಿದೆ.

         'ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೆ ಸಂಬಂಧಿಸಿ ಎಫ್‌ಡಿಎ (ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ) ತಿದ್ದುಪಡಿ ಮಾಡಬೇಕಾಗುತ್ತದೆ. ಆದರೆ, ಈ ಪ್ರಕ್ರಿಯೆಯು ನೇರವಾಗಿರಬೇಕು' ಎಂದು ವರದಿ ಉಲ್ಲೇಖಿಸಿದೆ.

       ಎಫ್‌ಡಿಎ ಮುಂದಿನ ವಾರ ಅನುಮತಿ ನೀಡುವ ನಿರೀಕ್ಷೆ ಇದೆ. ಆ ಬಳಿಕ ಲಸಿಕೆಯನ್ನು ಹೇಗೆ ಬಳಸಬೇಕು ಎಂಬುದನ್ನು ಶಿಫಾರಸು ಮಾಡಲು ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ತಡೆ ಸಲಹಾ ಸಮಿತಿ ಸಭೆ ಸೇರಲಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

      ಸದ್ಯ ಫೈಜರ್-ಬಯೊಎನ್‌ಟೆಕ್ ಕೋವಿಡ್‌ ಲಸಿಕೆಯನ್ನು 16 ವರ್ಷ ಮೇಲ್ಪಟ್ಟವರಿಗೆ ನೀಡಲು ಅಮೆರಿಕದಲ್ಲಿ ಅನುಮತಿ ಇದೆ.

      12-15 ವರ್ಷ ವಯಸ್ಸಿನವರಿಗೂ ಲಸಿಕೆ ನೀಡಲು ಅನುಮತಿ ಕೋರಿ ಯುರೋಪ್‌ ಒಕ್ಕೂಟದ ಔಷಧ ನಿಯಂತ್ರಕರಿಗೂ ಕಂಪನಿಯು ಈಚೆಗೆ ಮನವಿ ಮಾಡಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries