HEALTH TIPS

ಕೇರಳದಲ್ಲಿ ಶೇ. 134ಹೆಚ್ಚುವರಿ ಬೇಸಿಗೆ ಮಳೆ

 


          ಕಾಸರಗೋಡು:  ಕೇರಳದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಬೇಸಿಗೆ ಮಳೆ ಲಭಿಸಿದ್ದು, ಕೃಷಿ ಹಾಗೂ ಕುಡಿಯುವ ನೀರಿಗಾಗಿ ಪರದಾಟ ತಪ್ಪಿದೆ. ರಾಜ್ಯದಲ್ಲಿ ಸರಾಸರಿ 242.6ಮಿ.ಮೀ ಬೇಸಿಗೆ ಮಳೆ ಸುರಿಯಬೇಕಾದಲ್ಲಿ ಈ ಬಾರಿ 567.1ಮಿ.ಮೀ ಮಳೆ ಲಭಿಸಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಶೇ. 60ಷ್ಟು ಅಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಲೆಕ್ಕಾಚಾರ ತಿಳಿಸಿದೆ.


       ತೌಕ್ತೆ ಚಂಡಮಾರುತದ ಪ್ರಭಾವದಿಂದ ಈ ಬಾರಿ ಹೆಚ್ಚಿನ ಮಳೆಯಾಗಲು ಕಾರಣವಾಗಿದೆ. ಕಣ್ಣೂರು ಜಿಲ್ಲೆಯಲ್ಲಿ ಶೇ. 228 ಹೆಚ್ಚಿನ ಮಳೆ ಸುರಿಯುವ ಮೂಲಕ ರಾಜ್ಯದಲ್ಲಿ ಶೇಕಡಾವಾರು ಗಣನೆಯಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ಪ್ರತಿವರ್ಷ 152.1ಮಿ.ಮೀ ಮಳೆಯಾಗುತ್ತಿದ್ದರೆ, ಈ ಬಾರಿ 501.9ಮಿ.ಮೀ ಮಳೆಯಾಗಿದೆ. ವಾಡಿಕೆಯಂತೆ ಕಾಸರಗೋಡು ಜಿಲ್ಲೆಯಲ್ಲಿ ಪ್ರತಿವರ್ಷ 130ಮಿ.ಮೀ ಬೇಸಿಗೆ ಮಳೆ ಲಭಿಸುತ್ತಿದ್ದಲ್ಲಿ, ಈ ಬಾರಿ 351.5ಮಿ.ಮೀ ಮಳೆಯಾಗುವ ಮೂಲಕ ಶೇ. 170ರಷ್ಟು ಅಧಿಕ ಮಳೆಯಾಗಿದೆ.


       ಕಾಸರಗೋಡು ಜಿಲ್ಲೆಯ ಬಹುತೇಕ ಕಡೆ ಏಪ್ರಿಲ್ ತಿಂಗಳ ಆರಂಭದಲ್ಲೇ ವಾಹನಗಳಲ್ಲಿ ಕುಡಿಯುವ ನೀರು ಪೂರೈಸಬೇಕಾಗಿ ಬರುತ್ತಿದ್ದು, ಈ ಬಾರಿ ಬೇಸಿಗೆ ಮಳೆ ಉತ್ತಮ ರೀತಿಯಲ್ಲಿ ಸುರಿದಿರುವುದರಿಂದ ವಾಹನಗಳಲ್ಲಿ ನೀರಿನ ಪೂರೈಸುವ ಸನ್ನಿವೇಶ ಬಂದಿರಲಿಲ್ಲ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries