ಕಾಸರಗೋಡು: ತೌಕ್ತೆ ಚಂಡಮಾರುತ ಪರಿಣಾಮ ಸುರಿದ ಬಿರುಸಿನ ಗಾಳಿಮಳೆಯ ಕಾರಣ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 135.48 ಲಕ್ಷ ರೂ.ನ ಕೃಷಿನಾಶವಾಗಿದೆ. 9 ಮನೆಗಳಿಗೆ ಪೂರ್ಣ ಹಾನಿಯಾಗಿದೆ.
208 ಮಂದಿ ಕೃಷಿಕರು ನಷ್ಟ ಅನುಭವಿಸಿದ್ದಾರೆ. 9 ಮನೆಗಳು ಪೂರ್ಣರೂಪದಲ್ಲಿ, 82 ಮನೆಗಳು ಭಾಗಶಃ ಹಾನಿಗೊಂಡಿವೆ. ಮನೆಯ ಆವರಣ ಗೋಡೆ ಕುಸಿದು ಇಬ್ಬರು, ಸಿಡಿಲ ಆಘಾತಕ್ಕೆ ಒಬ್ಬರು ಗಾಯಗೊಂಡಿದ್ದಾರೆ.
ಮಂಜೇಶ್ವರ ಬ್ಲೋಕ್ ಪಂಚಾಯತ್ ನಲ್ಲಿ 241 ಮಂದಿ ಕೃಷಿಕರಿಗೆ 19.64 ಲಕ್ಷ ರೂ.ನ ಕೃಷಿನಶ, ಕಾಸರಗೋಡು ಬ್ಲೋಕ್ ಪಂಚಾಯತ್ ನಲ್ಲಿ 1044 ಮಂದಿ ಕೃಷಿಕರಿಗೆ 45.83 ಲಕ್ಷರೂ.ನ ನಾಶ, ಕಾರಡ್ಕ ಬ್ಲೋಕ್ ಪಂಚಾಯತ್ ನಲ್ಲಿ 45 ಮಂದಿ ಕೃಷಿಕರಿಗೆ 2.63 ಲಕ್ಷ ರೂ.ನ ನಾಶ, ಕಾಞಂಗಾಡು ಬ್ಲೋಕ್ ಪಂಚಾಯತ್ ನಲ್ಲಿ 121 ಮಂದಿ ಕೃಷಿಕರಿಗೆ 11.23 ಲಕ್ಷ ರೂ.ನ ನಾಶ, ನೀಲೇಶ್ವರ ಬ್ಲೋಕ್ ಪಂಚಾಯತ್ ನಲ್ಲಿ 562 ಮಂದಿ ಕೃಷಿಕರಿಗೆ 38.96 ಲ್ಷ ರೂ.ನ ಕೃಷಿನಶ, ಪರಪ್ಪ ಬ್ಲೋಕ್ ಪಂಚಾಯತ್ ನಲ್ಲಿ 195 ಮಂದಿ ಕೃಷಿಕರಿಗೆ 17.19 ಲಕ್ಷ ರೂ.ನ ಕೃಷಿನಾಶನಷ್ಟ ವುಂಟಾಗಿದೆ.
ಭತ್ತ, ತೆಂಗು, ಬಾಳೆ, ರಬ್ಬರ್, ಅಡಕೆ, ಜಾತಿ, ತರಕಾರಿ ಕೃಷಿಗಳಿಗೆ ಅತ್ಯಧಿಕ ಹಾನಿಯಾಗಿದೆ. ಮಂಜೇಶ್ವರ, ಹೊಸದುರ್ಗ ತಾಲೂಕಿನಲ್ಲಿ ತಲಾ 4 ಮಂದಿ, ವೆಳ್ಳರಿಕುಂಡ್ ತಾಲೂಕಿನಲ್ಲಿ ಒಂದು ಮನೆ ಪೂರ್ಣಪ್ರಮಾಣದಲ್ಲಿ ಹಾನಿಯಾಗಿದೆ. ಹೊಸದುರ್ಗ ತಾಲೂಕಿನಲ್ಲಿ 50 ಮನೆಗಳು, ವೆಳ್ಳರಿಕುಂಡ್ 14, ಕಾಸರಗೋಡು 12, ಮಂಜೇಶ್ವರ ತಾಲೂಕಿನಲ್ಲಿ 6 ಮನೆಗಳು ಭಾಗಶಃ ಹಾನಿಯಾಗಿವೆ.
ಕಾಸರಗೋಡು ಜಿಲ್ಲೆಯಲ್ಲಿ ಸಂತ್ರಸ್ತರ ಶಿಬಿರ ಸಜ್ಜುಗೊಂಡಿದ್ದರೂ, ಒಂದೂ ಚಟುವಟಿಕೆ ಆರಂಭಿಸಿರಲಿಲ್ಲ. 161 ಕುಟುಂಬಗಳ ಒಟ್ಟು 637 ಮಂದಿಯನ್ನು ಅವರ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಯಿತು. ಹೊಸದುರ್ಗ ತಾಲೂಕಿನಲ್ಲಿ 130 ಕುಟುಂಬಗಳ 452 ಮಂದಿ, ಕಾಸರಗೋಡು ತಾಲೂಕಿನಲ್ಲಿ 4 ಕುಟುಂಬಗಳ 19 ಮಂದಿ, ಮಂಜೇಶ್ವರ ತಾಲೂಕಿನ 27 ಕುಟುಂಬಗಳ 166 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಮೀನುಗಾರಿಕೆ ವಲಯಗಳ ಅನೇಕ ಮನೆಗಳಿಗೆ, ಫೈಬರ್ ಬೋಟುಗಳಿಗೆ ಹಾನಿಯಾಗಿವೆ. ಈ ಕುರಿತು ಸಂಬಂಧಪಟ್ಟವರು ವರದಿ ಸಲ್ಲಿಸಿದ್ದಾರೆ. ಕಳೆದ 24 ತಾಸುಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 23.47 ಮಿ.ಮೀ.ಮಳೆ ಸುರಿದಿದೆ.



