ಮಂಜೇಶ್ವರ: ಬಿರುಸಿನ ಗಾಳಿಮಳೆ ಮತ್ತು ಕಡಲ್ಕೊರೆತದ ಪರಿಣಾಮ ಕಾಸರಗೋಡು ಜಿಲ್ಲೆಯ ಕೆಲವೆಡೆ ನಾಶನಷ್ಟ ಸಂಭವಿಸಿದೆ.
ಮಂಜೇಶ್ವರ ತಾಲೂಕಿನಲ್ಲಿ 2 ಮನೆಗಳು ಪೂರ್ಣರೂಪದಲ್ಲಿ, 4 ಮನೆಗಳು ಭಾಗಶಃ ಹಾನಿಗೊಂಡಿವೆ. ಶಿರಿಯ ಗ್ರಾಮದ ಶಿರಿಯ ಕರಾವಳಿಯಲ್ಲಿ ವಾಸಿಸುವ 23 ಕುಟುಂಬಗಳ ಒಟ್ಟು 110 ಮಂದಿಯನ್ನು ಅವರ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ.
ಮಂಜೇಶ್ವರದ ಕೀರ್ತೇಶ್ವರದಲ್ಲಿ ಭಾನುವಾರ ಮಧ್ಯಾಹ್ನ ಮನೆಯೊಂದು ಕುಸಿದು ಬಿದ್ದು ಮನೆ ಮಾಲೀಕ ಶಂಸುದ್ದೀನ್ ಹಾಗೂ ಕುಟುಂಬ ಯಾವುದೇ ಗಾಯಗಳಿಲ್ಲದೆ ಅದೃಷ್ಟವಶಾತ್ ಪಾರಾಗಿದೆ. ಮನೆಯೊಳಗೆ ಮಕ್ಕಳು ಸೇರಿದಂತೆ ಐವರು ಇದ್ದರೆಂದು ಹೇಳಲಾಗಿದೆ. ಮಂಜೇಶ್ವರ ಸೆಕ್ಷನ್ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ ಕಡಿತಗೊಂಡ ವಿದ್ಯುತ್ ಸಂಪರ್ಕವನ್ನು ಭಾನುವಾರ ಸಂಜೆ ವೇಳೆ ಮರು ಸ್ಥಾಪಿಸಲಾಗಿದೆ.


