ತ್ರಿಶೂರ್: ಪಿಎಂ ಕೇರ್ ಫಂಡ್‍ನಿಂದ ಪಡೆದ ಆರ್ಥಿಕ ನೆರವಿನೊಂದಿಗೆ ವೈದ್ಯಕೀಯ ಕಾಲೇಜಿನಲ್ಲಿ ನಿರ್ಮಿಸಲಾದ ಆಕ್ಸಿಜನ್ ಪ್ಲಾಂಟ್ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕದ ಉತ್ಪಾದನೆಯನ್ನು ಪ್ರಾರಂಭಿಸಲಾಯಿತು. ಈ ಯೋಜನೆಗಾಗಿ ಪಿಎಂ ಕೇರ್ ಫಂಡ್‍ನಿಂದ 1.5 ಕೋಟಿ ರೂ. ಮಂಜೂರುಗೊಂಡಿತ್ತು. ಈ ಬಗ್ಗೆ ತ್ರಿಶೂರ್ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ನಿಮಿಷಕ್ಕೆ ಸರಾಸರಿ 1000 ಲೀಟರ್ ಆಮ್ಲಜನಕವನ್ನು ಉತ್ಪಾದಿಸಬಲ್ಲ ಸ್ಥಾವರ ನಿರ್ಮಾಣ ಪೂರ್ಣಗೊಂಡಿದೆ. ಇದು ದಿನದ 24 ಗಂಟೆ ಕೆಲಸ ಮಾಡುತ್ತದೆ. ಇದು ವೈದ್ಯಕೀಯ ಕಾಲೇಜಿನಲ್ಲಿರುವ ಕೊರೋನಾ ರೋಗಿಗಳಿಗೆ ಅಗತ್ಯವಾದ ಆಮ್ಲಜನಕವನ್ನು ಒದಗಿಸುತ್ತದೆ. ಸ್ಥಾವರ ಪ್ರಯೋಗಿಕ ಕಾರ್ಯಾಚರಣೆ ಇತ್ತೀಚೆಗೆ ಯಶಸ್ವಿಯಾಗಿ ಪೂರ್ಣಗೊಂಡಿತ್ತು. ಗುಣಮಟ್ಟದ ತಪಾಸಣೆ ಪೂರ್ಣಗೊಂಡ ನಂತರ ಕೆಲಸ ಉತ್ಪಾಧನೆ ಪ್ರಾರಂಭವಾಯಿತು.
ಕೇಂದ್ರ ಸರ್ಕಾರವು ರಾಜ್ಯಕ್ಕೆ ನಿಗದಿಪಡಿಸಿದ ನಾಲ್ಕು ಆಮ್ಲಜನಕ ಜನರೇಟರ್ ಪಿಎಸ್‍ಎ ಸ್ಥಾವರಗಳಲ್ಲಿ ಮೊದಲನೆಯದು ಎರ್ನಾಕುಳಂ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ ಎಂದು ಜಿಲ್ಲಾಧಿಕಾರಿ ಮೊನ್ನೆ ಘೋಷಿಸಿದ್ದರು. ಮಂಗಳವಾರ ಟ್ರಯಲ್ ರನ್ ಯಶಸ್ವಿಯಾಗಿ ಪೂರ್ಣಗೊಂಡು ಪೂರ್ಣ ಪ್ರಮಾಣದ ಉತ್ಪಾದನೆ ಪ್ರಾರಂಭವಾಯಿತು. ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಘಟಕದ ಸಾಮಥ್ರ್ಯವು ನಿಮಿಷಕ್ಕೆ 600 ಲೀಟರ್ ಆಮ್ಲಜನಕವಾಗಿದೆ. ಎರ್ನಾಕುಳಂ ವೈದ್ಯಕೀಯ ಕಾಲೇಜಿನಲ್ಲಿ ಸ್ಥಾಪಿಸಲಾದ ಸ್ಥಾವರವು ರಾಜ್ಯದಲ್ಲಿ ಸ್ಥಾಪಿಸಲಿರುವ ನಾಲ್ಕು ಸ್ಥಾವರÀಳಲ್ಲಿ ಚಿಕ್ಕದಾಗಿದೆ. ಸುಮಾರು 1.5 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾವರವನ್ನು ಸ್ಥಾಪಿಸಲಾಯಿತು.
ಸ್ಥಾವರದಲ್ಲಿನ ಆಮ್ಲಜನಕದ ಗುಣಮಟ್ಟ ಪರೀಕ್ಷೆಯು ನವದೆಹಲಿಯಲ್ಲಿ ಶೇಕಡಾ 94-95ರಷ್ಟು ಶುದ್ಧವಾಗಿದೆ ಎಂದು ಕಂಡುಬಂದಿದೆ. ಇತರ ಸ್ಥಾವರಗಳು ತಿರುವನಂತಪುರ ಮತ್ತು ಕೊಟ್ಟಾಯಂ ವೈದ್ಯಕೀಯ ಕಾಲೇಜುಗಳಲ್ಲಿ ಸ್ಥಾಪಿಸಲಾಗುವುದು.






