ತಿರುವನಂತಪುರ: ಕೇರಳದ 15 ನೇ ವಿಧಾನಸಭೆಯ ಮೊದಲ ಅಧಿವೇಶನ ಇಂದು ಆರಂಭವಾಗಲಿದರ. 53 ಹೊಸಬರು ಸೇರಿದಂತೆ ಚುನಾಯಿತ ಸದಸ್ಯರು ಪ್ರಮಾಣವಚನ ಸ್ವೀಕರಿಸುವ ಮೂಲಕ ವಿಧಾನಸಭೆ ಪ್ರಾರಂಭವಾಗಲಿದೆ. ಹಂಗಾಮಿ ಸ್ಪೀಕರ್ ಪಿಟಿಎ ರಹೀಮ್ ಪ್ರಮಾಣವಚನ ಬೋಧಿಸುವರು. ಪಿಣರಾಯಿ ವಿಜಯನ್ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸುವ ನಿರ್ಣಯವೂ ಇಂದು ನಡೆಯಲಿದೆ.
ಹೊಸ ಶಾಸಕರ ಪ್ರಮಾಣವಚನವು ಅವರ ಹೆಸರಿನ ಮೊದಲ ಅಕ್ಷರದ ಆಧಾರದಲ್ಲಿ ವರ್ಣಮಾಲೆಯನುಸಾರ ನಡೆಯುತ್ತದೆ. ಮತ್ತೊಂದು ವೈಶಿಷ್ಟ್ಯವೆಂದರೆ ಪಿಣರಾಯಿ ವಿಜಯನ್ ಅವರನ್ನು ಎದುರಿಸಲು ಪ್ರತಿಪಕ್ಷದ ಹೊಸ ನಾಯಕರಾಗಿ ವಿ.ಡಿ.ಸತೀಶನ್ ಇಂದು ಅಧಿಕಾರ ಸ್ವೀಕರಿಸುವರು. ಸದನದ ಸ್ಪೀಕರ್ ಆಯ್ಕೆ ನಾಳೆ ನಡೆಯಲಿದೆ. ಎಂ.ಬಿ.ರಾಜೇಶ್ ಅವರು ಎಡಪಂಥೀಯ ಸ್ಪೀಕರ್ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿದ್ದಾರೆ.






