HEALTH TIPS

ಕೋವಿಡ್-19 ಎರಡನೇ ಅಲೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ, ಕೇಳಲು ಹಿಂದೇಟು ಹಾಕಬಾರದ ಅಂಶಗಳು...

                    ಕೋವಿಡ್-19 ಸಾಂಕ್ರಾಮಿಕ, ಲಸಿಕೆ ಹಲವಾರು ಪ್ರಶ್ನೆಗಳಿವೆ. ಈ ಪ್ರಶ್ನೆಗಳನ್ನು ಹಲವು ಮಂದಿ ಹಲವಾರು ಬಾರಿ ಕೇಳಿರಬಹುದು ಅವುಗಳಿಗೆ ಉತ್ತರ ನೀಡುವ ಪ್ರಯತ್ನ ಇದಾಗಿದೆ. 



            ಲಸಿಕೆಯ ಪರಿಣಾಮಕಾರಿತ್ವ ಪಸೆರ್ಂಟೇಜ್ ಅಂದರೆ ಏನು?

   ಹಲವಾರು ಬಾರಿ ಪ್ರಶ್ನೆ ಮೂಡುವುದು ಲಸಿಕೆಯ ಪರಿಣಾಮಕಾರಿತ್ವದ ಪಸೆರ್ಂಟೇಜ್ ಅಂದರೆ ಏನು ಅಂತ. ಲಸಿಕೆ ಶೇ.81 ರಷ್ಟು ಪರಿಣಾಮಕಾರಿಯಾಗಿದೆ ಅಂದರೆ ಲಸಿಕೆ ಪಡೆದವರ ಪೈಕಿ ಶೇ.19 ರಷ್ಟು ಮಂದಿಗೆ ಕೋವಿಡ್-19 ಬರುವ ಸಾಧ್ಯತೆ ಇದೆ ಎಂದರ್ಥ. ಶೇ.90 ರಷ್ಟು ಪರಿಣಾಮಕಾರಿತ್ವ ಅಂದರೆ ಶೆ.10 ರಷ್ಟು ಮಾತ್ರ ಕೋವಿಡ್-19 ಬರುವ ಸಾಧ್ಯತೆ ಇದೆ ಎಂದರ್ಥ. ಆದರೆ ಕ್ಲಿನಿಕಲ್ ಟ್ರಯಲ್ ಗಳಲ್ಲಿ ಲಸಿಕೆ ಪಡೆದವರ ಸಂಖ್ಯೆ ತೀರಾ ಕಡಿಮೆ. 

             ಲಸಿಕೆ ಪಡೆದ ಬಳಿಕವೂ ಕ್ವಾರಂಟೈನ್ ಆಗಬೇಕೆ?

    ಹೌದು, ಅಮೆರಿಕದ ಸರ್ಕಾರ ಎರಡೂ ಡೋಸ್ ಗಳ ಲಸಿಕೆಯನ್ನು ಪಡೆದ ಮಂದಿಯನ್ನು ಕ್ವಾರಂಟೈನ್ ನಲ್ಲಿರುವುದಕ್ಕೆ ಕಡ್ಡಾಯಗೊಳಿಸಿಲ್ಲವಾದರೂ, ಎರಡನೇ ಡೋಸ್ ಲಸಿಕೆ ಪಡೆದವರು ಅಪಾಯದಿಂದ ದೂರ ಉಳಿಯುವುದಕ್ಕಾಗಿ ಕನಿಷ್ಟ ಎರಡು ವಾರಗಳ ಕಾಲ ಐಸೊಲೇಷನ್ ನಲ್ಲಿರುವುದಕ್ಕೆ ಸಲಹೆ ನೀಡಿದೆ. 

         ಲಸಿಕೆಗಳು ಲಕ್ಷಣಗಳಿರುವ ರೋಗವನ್ನು ತಡೆಯುತ್ತವೆಯಷ್ಟೇ. ಆದರೆ ರೋಗಲಕ್ಷಣ ರಹಿತ ರೋಗವನ್ನು ತಡೆಯುತ್ತವೆ ಎಂಬುದು ಸಾಬೀತಾಗಿಲ್ಲ.  ರೋಗಲಕ್ಷಣ ರಹಿತ ರೋಗಿಗಳೂ ಸೋಂಕು ಹರಡುತ್ತಾರೆ ಎಂಬುದು ಗಮನಾರ್ಹ ಅಂಶ. 

             ಆಹಾರ, ಆಹಾರ ಪ್ಯಾಕೇಜಿಂಗ್ ಮೂಲಕ ರೋಗ ಹರಡುತ್ತದೆಯೇ?

     ಅಮೆರಿಕದ ಆರೋಗ್ಯ ಅಧಿಕಾರಿಗಳು ಹೇಳುವ ಪ್ರಕಾರ 100 ಮಿಲಿಯನ್ ಗೂ ಅಧಿಕ ಕೋವಿಡ್-19 ಪ್ರಕರಣಗಳು ಜಾಗತಿಕ ಮಟ್ಟದಲ್ಲಿ ದಾಖಲಾಗಿದೆ. ಆದರೆ ಎಲ್ಲಿಯೂ ಆಹಾರ ಅಥವಾ ಆಹಾರ ಪ್ಯಾಕೇಜಿಂಗ್ ನಿಂದ ವೈರಾಣು ಹರಡುತ್ತಿರುವುದು ಸಾಬೀತಾಗಿಲ್ಲ. 

             ಎರಡನೇ ಡೋಸ್ ಲಸಿಕೆ ಪಡೆದ ಬಳಿಕ ಯಾವ ರೀತಿಯ ಅನುಭವವಾಗುತ್ತೆ?

      ಬಹುಶಃ ಅತ್ಯಂತ ಸುಸ್ತಾಗಲಿದೆ. ಕಾರಣ ಮೊದಲ ಡೋಸ್ ನ ಪರಿಣಾಮಗಳನ್ನು ಎರಡನೇ ಡೋಸ್ ಲಸಿಕೆ ವೃದ್ಧಿ ಮಾಡುತ್ತದೆ. ಮೊದಲನೇ ಡೋಸ್ ತೆಗೆದುಕೊಂಡಾಗ ಕೊರೋನಾ ವೈರಾಣುವನ್ನು ಹೊರಗಿನಿಂದ ಬಂದ ವೈರಾಣು ಎಂದು ಗುರುತಿಸುವುದಕ್ಕೆ ದೇಹದ ಜೀವಕೋಶಗಳಿಗೆ ಸಾಧ್ಯಗವಾಗಲಿದೆ. ಎರಡನೇ ಡೋಸ್ ತೆಗೆದುಕೊಳ್ಳುವ ವೇಳೆಗೆ ಲಸಿಕೆ ಪಡೆದವರ ದೇಹ ರೋಗನಿರೋಧಕ ಶಕ್ತಿ ಜೀವಕೋಶಗಳನ್ನು ತಯಾರಿಸಿರುತ್ತದೆ. ಈ ಜೀವಕೋಶಗಳು ಎರಡನೇ ಡೋಸ್ ನ್ನು ಪ್ರತಿಕೂಲ ಇಂಟರ್ಲೋಪರ್ ಎಂದು ಗುರುತಿಸಲು ಪ್ರಾರಂಭಿಸುವುದರಿಂದ ಪರಿಣಾಮ ಮೊದಲ ಡೋಸ್ ಗಿಂತ ತೀವ್ರವಾಗಿರುತ್ತದೆ. ಹಲವು ಕೋವಿಡ್-19 ಲಸಿಕೆಗಳು 3,000-4,000 ಮಟ್ಟದವರೆಗಿನ ಪ್ರತಿಕಾಯಗಳನ್ನು ಸೃಷ್ಟಿಸಬಹುದು

             ಅಡ್ಡಪರಿಣಾಮಗಳಿಲ್ಲ ಎಂದರೆ ಲಸಿಕೆ ಪರಿಣಾಮಕಾರಿಯಲ್ವಾ?

       ಅಮೆರಿಕದಲ್ಲಿ ನಡೆದ ಪಿ ಫೈಜರ್ ಲಸಿಕೆ ನಾಲ್ವರು ಕೋವಿಡ್-19 ರೋಗಿಗಳ ಪೈಕಿ ಒಬ್ಬರಿಗೆ ಅಡ್ಡ ಪರಿಣಾಮ ಬೀರದೇ ಇದೆ. ಮಾಡರ್ನಾ ಎರಡನೇ ಡೋಸ್ ಪಡೆದ ಬಳಿಕ ಐವರಲ್ಲಿ ಒಬ್ಬರಿಗೆ ಮಾತ್ರ ಅಡ್ಡ ಪರಿಣಾಮಗಳು ಉಂಟಾಗಿಲ್ಲ. ಪರಿಣಾಮಗಳು ಒಬ್ಬೊಬ್ಬರಿಗೆ ಒಂದೊಂದು ರೀತಿ ಅಂದರೆ ಸೋಂಕಿಗೆ ಯಾವ ರೀತಿ ಪ್ರತಿಕ್ರಿಯೆ ಇರುತ್ತದೆಯೋ ಅದೇ ರೀತಿ ಇರಲಿವೆ. ಲಸಿಕೆಯ ಬಲಿಷ್ಠ ಪ್ರತಿಕ್ರಿಯೆ ಅವರ ಇನ್ಫ್ಲಾಮೇಟರಿ ಪ್ರತಿಕ್ರಿಯೆ ಅತ್ಯುತ್ತಮವಾಗಿದೆ, ಇಮ್ಯುನಿಟಿ ಉತ್ತಮವಾಗಿದೆ ಎಂದು ಅರ್ಥ.

                ಕೋವಿಡ್-19 ಬಂದ ಬಳಿಕವೂ ಲಸಿಕೆ ಪಡೆಯಬೇಕಾ?

      ಹೌದು, ವೈರಾಣುವಿಗಿಂತಲೂ ಲಸಿಕೆ ಹೆಚ್ಚಿನ ಪ್ರತಿಕಾಯಗಳ ಪ್ರತಿಕ್ರಿಯೆಯನ್ನು ಉತ್ಪಾದಿಸುತ್ತದೆ. ಆದರೆ ಸೋಂಕು ಮರುಕಳಿಸುವುದರಿಂದ ರೋಗಿ ಎಷ್ಟು ಕಾಲ ರಕ್ಷಿಸಿಕೊಳ್ಳಬಹುದು ಎಂದು ತಿಳಿದಿಲ್ಲ. 

                        ಈ ಋತುವಿನಲ್ಲಿ ಕೊರೋನಾ ಸೋಂಕಿಗೂ ಅಲರ್ಜಿಗೂ ವ್ಯತ್ಯಾಸ ಕಂಡುಹಿಡಿಯುವುದು ಹೇಗೆ?

     ಹಲವಾರು ಸ್ವೈನ್ ಫ್ಲೂ ಗಳು ಕೋವಿಡ್-19 ಸೋಂಕಿನಂತಹದ್ದೇ ರೋಗಲಕ್ಷಣಗಳನ್ನು ಹೊಂದಿರುತ್ತವೆ. ನವೆ, ಶೀತ, ಕಣ್ಣಿನಲ್ಲಿ ನವೆಯಾಗುವು, ನೀರು ಬರುವುದಾದರೆ ಅದು ಸಾಮಾನ್ಯದ ಅಲರ್ಜಿಗಳು, ಏಕಾ ಏಕಿ ರೋಗಲಕ್ಷಣಗಳು ಕಾಣಿಸಿದಲ್ಲಿ ಅದು ಕೋವಿಡ್-19 ಆಗಿರುವ ಸಾಧ್ಯತೆಗಳು ಹೆಚ್ಚಾಗಿವೆ. 

               ಕೋವಿಡ್-19 ನಿಂದ ಮಧುಮೇಹದ ಸಮಸ್ಯೆ ಎದುರಾಗತ್ತಾ?

     ಇದು ಸಾಧ್ಯವಿದೆ ಎನ್ನುತಿವೆ ಇತ್ತೀಚಿನ ಅಂಕಿ-ಅಂಶಗಳು, ವೈರಾಣು ನೇರವಾಗಿ ಇನ್ಸುಲಿನ್ ಉತ್ಪಾದನೆ ಮಾಡುವ ಜೀವಕೋಶಗಳ ಮೇಲೆ ದಾಳಿ ಮಾಡುವುದು ಇದಕ್ಕೆ ಪ್ರಮುಖ ಕಾರಣ. ಅಷ್ಟೇ ಅಲ್ಲದೇ ಇದು ಆಕ್ಸಿಜನ್ ಪೂರೈಕೆ ಮಾಡುವ ರಕ್ತ ನಾಳಗಳ ಮೇಲೆಯೂ ದಾಳಿ ನಡೆಸುತ್ತದೆ. ಬ್ಲಡ್ ಶುಗರ್ ನ್ನು ನಿಯಂತ್ರಿಸುವ ಇತರ ಅಂಗಾಂಗಳ ಮೇಲೆಯೂ ಈ ವೈರಾಣು ಪರಿಣಾಮ ಬೀರುತ್ತದೆ. 

              ಹೃದಯದ ಮೇಲೆ ಕೋವಿಡ್-19 ಪರಿಣಾಮವೇನು?

         ಇದಕ್ಕೆ ನಿಖರವಾದ ಸಾಕ್ಷ್ಯಾಧಾರಗಳು ಸಿಕ್ಕಿಲ್ಲವಾದರೂ ಈಗಾಗಲೇ ಹೃದಯ ಸಮಸ್ಯೆ ಹೊಂದಿರುವವರು ಕೋವಿಡ್-19 ಸೋಂಕಿಗೆ ಗುರಿಯಾದರೆ ಅಪಾಯ ಮತ್ತಷ್ಟು ಹೆಚ್ಚಾಗಲಿದೆ. 

              ಚೇತರಿಸಿಕೊಂಡ ಮೇಲೂ ಕೋವಿಡ್-19 ಮಾರಕವೇ?

ಅಧ್ಯಯನದ ಪ್ರಕಾರ ಕೋವಿಡ್-19 ನಿಂದ ಚೇತರಿಸಿಕೊಂಡವರೂ ಸಾವನ್ನಪ್ಪುವ ಸಾಧ್ಯತೆ 6 ತಿಂಗಳವರೆಗೂ ಇದೆ. 

                  ಮೆದುಳಿನ ಮೇಲೆಯೂ ಕೋವಿಡ್ ವೈರಾಣು ಪರಿಣಾಮ ಬೀರಬಹುದೇ?

     ಲ್ಯಾನ್ಸೆಟ್ ಸೈಕಿಯಾಟ್ರಿ ನಲ್ಲಿ ಪ್ರಕಟಗೊಂಡ ಸಾಕ್ಷ್ಯಗಳಲ್ಲಿ ಈ ಬಗ್ಗೆ ಎಚ್ಚರಿಕೆ ಮೂಡಿಸುವ ಲೇಖನ ಪ್ರಕಟಗೊಂಡಿದೆ. ಕೋವಿಡ್-19 ಸೋಂಕಿಗೆ ಗುರಿಯಾದ ಮೂರನೇ ಒಂದರಷ್ಟು ಮಂದಿಗೆ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಿವೆ ಅಥವಾ ಬೇರೆ ರೀತಿಯ ಮನೋವೈದ್ಯಕೀಯ ಸಮಸ್ಯೆಗೆ ತುತ್ತಾಗಿದ್ದಾರೆ. 

          236,379 ಮಂದಿ ಕೋವಿಡ್-19 ರೋಗಿಗಳ ಡಾಟಾ ಅಧ್ಯಯನದಲ್ಲಿ ಶೇ.34 ರಷ್ಟು ಮಂದಿಗೆ ಸೋಂಕು ತಗುಲಿದ 6 ತಿಂಗಳ ಬಳಿಕ ನರವೈಜ್ಞಾನಿಕ ಅಥವಾ ಮಾನಸಿಕ ಸಮಸ್ಯೆಗಳು ಉಂಟಾಗಿದೆ. ಆತಂಕ ಹಾಗೂ ಮನಸ್ಥಿತಿಯ ಅಸ್ವಸ್ಥತೆ ಸಾಮಾನ್ಯದ ಸಮಸ್ಯೆಯಾಗಿ ಪರಿಣಮಿಸಿದೆ, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬ್ರೈನ್ ಹೆಮರೇಜ್, ಸ್ಟ್ರೋಕ್ ಗಳು ಅಥವಾ ಡಿಮ್ನಿಷಿಯಾದಂತಹ ಸಮಸ್ಯೆಗಳು ಕಾಣಿಸಿಕೊಂಡಿವೆ.



    Tags

    Post a Comment

    0 Comments
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
    Qries